Advertisement

ಬಂಡ್‌ ನಿರ್ಮಾಣಕ್ಕೆ ಕೆರೆ ನೀರು ಅಡ್ಡಿ

05:40 PM Feb 10, 2021 | Team Udayavani |

ಕುಷ್ಟಗಿ: ನಿಡಶೇಸಿ ಕೆರೆಯ ಒಂದೂವರೆ ಕಿ.ಮೀ ಉದ್ದದ ಮೂಲ ಬಂಡ್‌ ಸುಸ್ಥಿತಿಗೆ ಅದರ ಪಕ್ಕದಲ್ಲಿ ಹೊಸದಾಗಿ ಬಂಡ್‌ ನಿರ್ಮಿಸಲು ಅಂದಾಜು ವೆಚ್ಚ2 ಕೋಟಿ ರೂ. ಕಾಮಗಾರಿಗೆ ಕೆರೆಯಲ್ಲಿ ಸಂಗ್ರಹವಾಗಿರುವ ನೀರು ಕಾಮಗಾರಿಗೆ ಹಿನ್ನೆಡೆ ಉಂಟು ಮಾಡಿದೆ.

Advertisement

ಕಳೆದ ಅಕ್ಟೋಬರ್‌, ನವೆಂಬರ್‌ ತಿಂಗಳಿನಲ್ಲಿ ಸುರಿದ ಮಳೆಯಿಂದ ಕೆರೆ ಭರ್ತಿಯಾಗುವಷ್ಟು ನೀರು ಬಂದಿದೆ. ಇದೀಗ ಬೇಸಿಗೆ ಆರಂಭವಾಗಿದ್ದು, ಕೆರೆಯಲ್ಲಿನ ಹಿನ್ನೀರು ಹಿಂದೆ  ಸರಿಯುತ್ತಿದೆ. ಈ ಹಂತದಲ್ಲಿ ಸಣ್ಣನೀರಾವರಿ ಇಲಾಖೆ 2 ಕೋಟಿ ರೂ. ವೆಚ್ಚದ ಮೂಲ ಬಂಡ್‌ಗೆಹೊಂದಿಕೊಂಡು, ಹೊಸದಾಗಿ ಬಂಡ್‌ನಿರ್ಮಿಸಿ ಬಲವರ್ಧನೆಗೊಳಿಸಲು ಸಣ್ಣ ನೀರಾವರಿ ಇಲಾಖೆ ಮುಂದಾಗಿದೆ.

ಕೆರೆಯ ಬಂಡ್‌ಗೆ ಹೊಂದಿಕೊಂಡಂತೆ 2 ಮೀಟರ್‌ ಆಳ ಉದ್ದ ಟ್ರಂಚ್‌ ಅಗೆದು,ಅದಕ್ಕೆ ಬಿಸಿ (ಕಪ್ಪು ಮಣ್ಣು), ಕೇಸಿಂಗ್‌(ಕೆಂಪು ಮಣ್ಣು) ಕಾರ್ಯ ಆರಂಭಿಸಿದೆ. ಸಣ್ಣ ನೀರಾವರಿ ಅಧಿಕಾರಿಗಳ ಪ್ರಕಾರ ಬಂಡ್‌ ಅಂಚಿನಲ್ಲಿ ನೀರಿದ್ದರೆ ಕಾಮಗಾರಿ ಮುಂದುವರಿಸುವುದು ಅಸಾಧ್ಯ. ಸದ್ಯ 400 ಮೀಟರ್‌ ಕೆರೆಯಜಾಕ್‌ವೆಲ್‌ವರೆಗೂ ನಡೆಸಿದ್ದಾರೆ. ಈ ವೇಳೆ ಜಾಕ್‌ವೆಲ್‌ ಮೂಲಕ ನೀರನ್ನು ಬಲದಂಡೆ ಕಾಲುವೆ ಹರಿಬಿಡಲು ಯತ್ನಿಸಿರುವುದು ಸ್ಥಳೀಯರ ಆಕ್ರೋಶಕ್ಕೆಕಾರಣವಾಯಿತು. ಈ ಕಾಮಗಾರಿಗೆಕೆರೆಯ ನೀರನ್ನು ಹರಿಬಿಡದಂತೆ ಹಾಗೂ ಕೆರೆಯ ಮಣ್ಣನ್ನು ಬಳಸಿಕೊಳ್ಳದಂತೆ ತಾಕೀತು ಮಾಡಿದರು. ಈಬೆಳವಣಿಗೆಯಲ್ಲಿ ಗೊಂದಲಕ್ಕೀಡಾದ ಸಣ್ಣ ನೀರಾವರಿ ಅಧಿಕಾರಿಗಳು ಜಾಕ್‌ ವೆಲ್‌ ಬಳಿ ನೀರು ಹರಿವು ಬಂದ್‌ ಮಾಡಿಸಿದರು.

ಈ ಕಾಮಗಾರಿಗೆ ಕೆರೆಯ ನೀರು ಖಾಲಿ ಮಾಡುತ್ತಾರೆನ್ನುವುದುಸುಳ್ಳು ವದಂತಿ. ಕಾಮಗಾರಿಮುಂದುವರಿಯಲು ಕೆರೆಯ ಬಂಡ್‌ಅಂಚಿನ ನೀರನ್ನು ಹರಿಬಿಡುವಪ್ರಯತ್ನ ಮಾಡಿಲ್ಲ. ಅದು ಸೋರಿಕೆ ನೀರಾಗಿದ್ದು, ತಗ್ಗು ಮಾಡಿದರೆ ನೀರು ತಗ್ಗಿಗೆ ಹರಿಯುವುದು ಸಹಜವಾಗಿದೆ. ಕೆರೆ ಖಾಲಿಯಾಗುವಷ್ಟು ನೀರು ಹರಿಬಿಡುವ ಕೆಲಸ ಮಾಡುವುದಿಲ್ಲನಿಡಶೇಸಿ ಕೆರೆಯು, ಕೆರೆ ತುಂಬುವ ಯೋಜನೆಯಲ್ಲಿದೆ ಎನ್ನುವ ಕಾರಣಕ್ಕೆ ಸದ್ಯದ ಕಾಮಗಾರಿಯಲ್ಲಿ ಮೂಲ ಬಂಡ್‌ ಸಾಮರ್ಥ್ಯ ಹೆಚ್ಚಿಸುವ ನಿಟ್ಟಿನಲ್ಲಿ ಮೂಲ ಕೆರೆಯ ಬಂಡ್‌ ಬಲವರ್ಧನೆಗೊಳಿಸಲೇ ಬೇಕಿದೆ. ಈಗ ಸೂಕ್ತ ಸಮಯವಾಗಿದ್ದು, ಬೇಸಿಗೆ ಹಂತದಲ್ಲಿ ಕಾಮಗಾರಿ ನಡೆಸುವುದುಅನಿವಾರ್ಯವಾಗಿದೆ. ಈಗ ಕೈ ಬಿಟ್ಟರೆಮೇ, ಜೂನ್‌ ವೇಳೆಗೆ ಮುಂಗಾರುಮಾನ್ಸೂನ್‌ ಆರಂಭವಾಗಲಿವೆ.ಮಳೆಗಾಲದಲ್ಲಿ ಈ ಕಾಮಗಾರಿನಡೆಸುವುದು ಅಸಾಧ್ಯ. ಹೀಗಾಗಿ ಸದ್ಯಕಾಮಗಾರಿಯನ್ನು ವೈಜ್ಞಾನಿಕವಾಗಿ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದರು.

ಮೂಲ ಬಂಡ್‌ಗೆ ಹೊಂದಿಕೊಂಡಂತೆ 2 ಕೋಟಿ ರೂ. ವೆಚ್ಚದಲ್ಲಿ ಮತ್ತೂಂದು ಹೊಸ ಬಂಡ್‌ ನಿರ್ಮಿಸುವ ಮೂಲಕ ಬಂಡ್‌ ಸಾಮಾರ್ಥ್ಯ ಹೆಚ್ಚಿಸಬೇಕಿದೆ.ಈ ಸಂದರ್ಭದಲ್ಲಿ ಸ್ವಲ್ಪ ಪ್ರಮಾಣದ ನೀರು ಹರಿಬಿಡದೇ ಇದ್ದಲ್ಲಿ ಕಾಮಗಾರಿ ನಿರ್ವಹಿಸುವುದು ಅಸಾಧ್ಯವಾಗಿದೆ. ಸದ್ಯ ಸೋರಿಕೆ ಬಂದ್‌ ಮಾಡಲಾಗಿದೆ. –ಅಮರೇಗೌಡ ಪಾಟೀಲ, ಬಯ್ಯಾಪೂರ ಶಾಸಕ

Advertisement

ಕೆರೆಯ ನೀರನ್ನು ಜಾಕ್‌ವೆಲ್‌ ಮೂಲಕ ಕಾಲುವೆಗೆ ಹರಿ ಬಿಡಲು ಯತ್ನಿಸಿದ್ದರೂ, ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರಿಂದ ಬಂದ್‌ ಮಾಡಲಾಗಿದೆ. ಕೆರೆಗೆ ನೀರು ನಿಂತಿರುವುದು ನಮ್ಮ ಭಾಗ್ಯವಾಗಿದೆ. ಇದರಿಂದ ಸುತ್ತಮುತ್ತಲಿನ ಪ್ರದೇಶದಲ್ಲಿ ಅಂತರ್ಜಲ ಹೆಚ್ಚಳವಾಗಿದೆ. ಕಾಮಗಾರಿ ನೆಪದಲ್ಲಿ ಕೆರೆಯಲ್ಲಿನ ಸಂಗ್ರಹ ನೀರನ್ನು ಹರಿಬಿಟ್ಟರೆ, ಬೇಸಿಗೆಯಲ್ಲಿ ನೀರು ಖಾಲಿಯಾಗಿ ನೀರಿನ ಬರ ಉಂಟಾಗಲಿದೆ. – ಹನುಮಂತಪ್ಪ ಕನಕಗಿರಿ, ಮದಲಗಟ್ಟಿ ಗ್ರಾಮಸ್ಥ

ಮೂಲ ಬಂಡ್‌ ಅಂಚಿನಲ್ಲಿ ಸ್ವಲ್ಪ ಕೆರೆಯ ನೀರು ಖಾಲಿಯಾದ್ರೆ ಮಾತ್ರ ಕಾಮಗಾರಿ ನಿರ್ವಹಿಸಲು ಅನುಕೂಲವಾಗಲಿದೆ. ನಾವೂ ಸಹ ಕೆರೆಯ ನೀರು ವ್ಯರ್ಥವಾಗಿ ಹರಿಸದೇ ಕಾಮಗಾರಿ ನಡೆಸಲು ಯೋಜಿಸಿದ್ದೆವು. ಸದ್ಯದ ಪರಿಸ್ಥಿತಿಯಲ್ಲಿ ಹಾಗೆಯೇ ಬಿಟ್ಟರೆ ಮೂಲ ಬಂಡ್‌ ಗಟ್ಟಿಮುಟ್ಟಾಗುವುದಿಲ್ಲ. ಈ ಕೆರೆ ತುಂಬುವ ಯೋಜನೆ ಇಲ್ಲಿರುವುದರಿಂದ ನಿಡಶೇಸಿ ಕೆರೆಯ ಬಂಡ್‌ ಈ ಬೇಸಿಗೆಯಲ್ಲಿ ಮಾತ್ರ ಅಭಿವೃದ್ಧಿ ಪಡಿಸಲು ಸಾಧ್ಯವಿದೆ. –ಎನ್‌.ಟಿ. ರಘುನಾಥ, ಎಇಇ ಸಣ್ಣ ನೀರಾವರಿ ಇಲಾಖೆ

 

­ಮಂಜುನಾಥ  ಮಹಾಲಿಂಗಪುರ

Advertisement

Udayavani is now on Telegram. Click here to join our channel and stay updated with the latest news.

Next