Advertisement
ಕಾಲನಿಯ ಕೆರೆಯಲ್ಲಿ ಈವರೆಗೆ ನೀರಿನ ಪ್ರಮಾಣ ಕಡಿಮೆಯಾಗುತ್ತಿತ್ತೇ ಹೊರತು ತಳಮುಟ್ಟುವ ಹಂತಕ್ಕೆ ತಲುಪುತ್ತಿರಲಿಲ್ಲ. ಈ ಕೆರೆ ಇಲ್ಲಿನ 15 ಮನೆಗಳಿಗೆ ನೀರುಣಿಸುವ ಮೂಲವಾಗಿತ್ತು. ಕಾಲನಿ ನಿವಾಸಿ ಕಮಲಾ ಅವರಿಗೆ ಸೇರಿದ ಈ ಕೆರೆಯ ನೀರನ್ನು ಕಾಲನಿ ನಿವಾಸಿಗಳೆಲ್ಲರೂ ಬಳಸುತ್ತಿದ್ದರು. ಮನೆ ಬಳಕೆ, ಸ್ನಾನ, ಬಟ್ಟೆ ತೊಳೆಯುವುದಕ್ಕೆ ಎಲ್ಲದಕ್ಕೂ ಈ ಕೆರೆಯ ನೀರೇ ಬಳಕೆಯಾಗುತ್ತಿತ್ತು.
ಇತ್ತೀಚಿನ ವರ್ಷದಲ್ಲಿ ಕಾಲನಿಗೆ ಕಡಬ ಗ್ರಾಮ ಪಂಚಾಯತ್ ವತಿಯಿಂದ ನಳ್ಳಿ ನೀರಿನ ಸಂಪರ್ಕ ನೀಡಿದ್ದರೂ ಕುಡಿಯುವುದಕ್ಕೆ ಹಾಗೂ ಅಡುಗೆಗೆ ಈ ಕೆರೆಯ ನೀರನ್ನೇ ಆಶ್ರಯಿಸಲಾಗುತ್ತಿತ್ತು. ಇತ್ತ ಕೆರೆಯಲ್ಲಿ ನೀರು ಕಡಿಮೆಯಾಗುತ್ತಿದ್ದಂತೆಯೇ ಪಂಚಾಯತ್‌ನ ಕುಡಿಯುವ ನೀರಿನ ಸ್ಥಾವರದ ನೀರೆತ್ತುವ ವಿದ್ಯುತ್ ಚಾಲಿತ ಪಂಪು ಕೆಟ್ಟು ಹೋಗಿದೆ. ಕಾಲನಿಯ ಜನತೆಗೆ ಅತ್ತ ಕೆರೆ ನೀರೂ ಇಲ್ಲ, ಇತ್ತ ನಳ್ಳಿ ನೀರೂ ಇಲ್ಲ ಎನ್ನುವ ಪರಿಸ್ಥಿತಿ ಎದುರಾಗಿದೆ. ಪಂಚಾಯತ್‌ನವರು ಪಂಪ್ ದುರಸ್ತಿ ಮಾಡಿಸಿದರೂ ವಿದ್ಯುತ್ ಸಮಸ್ಯೆಯಿಂದ ಪಂಪ್ ಚಾಲೂ ಆಗದೆ ಸಮಸ್ಯೆ ಮುಂದುವರಿದಿದೆ. ಪ್ರಸ್ತುತ ಕಾಲನಿಯಲ್ಲಿ ಒಂದು ಮನೆಗೆ 2 ಕೊಡ ನೀರು ಎನ್ನುವ ಪರಿಸ್ಥಿತಿ ಇದೆ. ಕೆರೆಯ ಮಾಲಕಿ ಕಮಲಾ ಅವರು ಬೆಳಗ್ಗೆ ಕೆರೆಯಲ್ಲಿ ಸಿಗುವ ಒಂದಷ್ಟು ನೀರನ್ನು ಪಂಪಿನ ಮೂಲಕ ಮೇಲೆತ್ತಿ ಟ್ಯಾಂಕ್‌ನಲ್ಲಿ ಶೇಖರಿಸಿ ಅದನ್ನು ಕಾಲನಿಯ ಮನೆಗಳಿಗೆ ತಲಾ ಎರಡು ಕೊಡಪಾನದಂತೆ ಹಂಚುತ್ತಾರೆ. ಇದೇ ಕೆರೆಯ ನೀರನ್ನು ನಂಬಿದ್ದ ಕಮಲಾ ಅವರ ಕುಟುಂಬ ಮಾತ್ರ ಪಂಚಾಯತ್ ನಳ್ಳಿ ನೀರಿನ ಸಂಪರ್ಕವನ್ನೂ ಪಡೆಯದೆ ಸಮಸ್ಯೆ ಎದುರಿಸುವಂತಾಗಿದೆ. ಇನ್ನೊಂದು ವಾರದೊಳಗೆ ಮಳೆಯಾಗದಿದ್ದರೆ ಕೆರೆ ಸಂಪೂರ್ಣ ಬತ್ತಿ ಹೋಗುವ ಭೀತಿ ಇದೆ.
ಒಂದು ಮನೆಗೆ 2 ಕೊಡ
ಪ್ರಸ್ತುತ ಕಾಲನಿಯಲ್ಲಿ ಒಂದು ಮನೆಗೆ 2 ಕೊಡ ನೀರು ಎನ್ನುವ ಪರಿಸ್ಥಿತಿ ಇದೆ. ಕೆರೆಯ ಮಾಲಕಿ ಕಮಲಾ ಅವರು ಬೆಳಗ್ಗೆ ಕೆರೆಯಲ್ಲಿ ಸಿಗುವ ಒಂದಷ್ಟು ನೀರನ್ನು ಪಂಪಿನ ಮೂಲಕ ಮೇಲೆತ್ತಿ ಟ್ಯಾಂಕ್‌ನಲ್ಲಿ ಶೇಖರಿಸಿ ಅದನ್ನು ಕಾಲನಿಯ ಮನೆಗಳಿಗೆ ತಲಾ ಎರಡು ಕೊಡಪಾನದಂತೆ ಹಂಚುತ್ತಾರೆ. ಇದೇ ಕೆರೆಯ ನೀರನ್ನು ನಂಬಿದ್ದ ಕಮಲಾ ಅವರ ಕುಟುಂಬ ಮಾತ್ರ ಪಂಚಾಯತ್ ನಳ್ಳಿ ನೀರಿನ ಸಂಪರ್ಕವನ್ನೂ ಪಡೆಯದೆ ಸಮಸ್ಯೆ ಎದುರಿಸುವಂತಾಗಿದೆ. ಇನ್ನೊಂದು ವಾರದೊಳಗೆ ಮಳೆಯಾಗದಿದ್ದರೆ ಕೆರೆ ಸಂಪೂರ್ಣ ಬತ್ತಿ ಹೋಗುವ ಭೀತಿ ಇದೆ.
ಕ್ರಮ ಕೈಗೊಳ್ಳುವೆವು
ಕಾಲನಿಯ ನಿವಾಸಿಗಳ ಕುಡಿಯುವ ನೀರಿನ ಬಿಲ್ ಪಾವತಿಯಾಗದೇ ಇದ್ದರೂ ನಾವು ನೀರಿನ ಸಂಪರ್ಕವನ್ನು ಕಡಿತ ಮಾಡಿರಲಿಲ್ಲ. ಆದರೆ ಇದೀಗ ಪಂಪ್ ಕೆಟ್ಟು ಸಮಸ್ಯೆ ಎದುರಾಗಿದೆ. ಕಾಲನಿಯ ಜನ ಕೆರೆಯ ನೀರನ್ನು ಉಪಯೋಗಿಸುತ್ತಿದ್ದುರಿಂದಾಗಿ ಹೆಚ್ಚಿನ ತೊಂದರೆಯಾಗಿಲ್ಲ. ಈಗ ಕೆರೆಯಲ್ಲಿಯೂ ನೀರು ಕಡಿಮೆಯಾಗಿರುವುದರಿಂದ ನಳ್ಳಿ ನೀರಿನ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಲಾಗಿದೆ.
– ಚೆನ್ನಪ್ಪ ಗೌಡ ಕಜೆಮೂಲೆ ಕಡಬ ಗ್ರಾ.ಪಂ. ಪಿಡಿಒ
– ಚೆನ್ನಪ್ಪ ಗೌಡ ಕಜೆಮೂಲೆ ಕಡಬ ಗ್ರಾ.ಪಂ. ಪಿಡಿಒ
ಇಂಗು ಗುಂಡಿಯ ಅಗತ್ಯವಿದೆ
ಕೆರೆಯಲ್ಲಿ ಕಳೆದ ಹಲವು ವರ್ಷಗಳಿಂದ ನೀರಿನ ಕೊರತೆ ಇರಲಿಲ್ಲ. ಮಾರ್ಚ್ ತಿಂಗಳಲ್ಲಿ ಕೆರೆ ತುಂಬಿ ತುಳುಕುತ್ತಿದ್ದರೆ ಮೇ ಕೊನೆಯ ಹಂತಕ್ಕೆ ನೀರಿನ ಮಟ್ಟ ಕಡಿಮೆಯಾಗುತ್ತಿತ್ತು. ಆದರೆ ಈ ಬಾರಿ ಮಾತ್ರ ನೀರು ಕಡಿಮೆಯಾಗಿ ತಳ ಕಾಣುವಂತಾಗಿದೆ. ಈ ಕೆರೆಯನ್ನು ಹೂಳೆತ್ತಿ, ಕೆರೆಯ ಪಾತ್ರವನ್ನು ದೊಡ್ಡದು ಮಾಡಿ ಶಾಶ್ವತ ಕರೆಯನ್ನಾಗಿ ಉಳಿಸಿಕೊಳ್ಳುವ ಆಲೋಚನೆ ಇದೆ. ಕೆರೆಯ ಹತ್ತಿರ ಇರುವ ಸರಕಾರದ ಹಳೆಯ ಕೊಳವೆ ಬಾವಿ ಬಳಕೆಯಾಗುತ್ತಿಲ್ಲ. ಇಲ್ಲಿ ಇಂಗು ಗುಂಡಿಯ ಅಗತ್ಯವಿದೆ. ಇದರಿಂದ ಕಾಲನಿಯ ಜನತೆಗೆ ಶುದ್ಧ ಕುಡಿಯುವ ನೀರನ್ನು ನಿರಂತರ ಒದಗಿಸಬಹುದು.
– ಕಮಲಾ ಓಂತ್ರಡ್ಕ ಕಾಲನಿ ನಿವಾಸಿ
– ಕಮಲಾ ಓಂತ್ರಡ್ಕ ಕಾಲನಿ ನಿವಾಸಿ