ಮಹದೇವಪುರ: ಬೆಳ್ಳಂದೂರು ರೈಸಿಂಗ್ ಸಂಸ್ಥೆ ಮತ್ತು ಸ್ಥಳೀಯ ನಾಗರಿಕರು ಶನಿವಾರ ಬೆಳ್ಳಂದೂರು ಕೆರೆ ಹಬ್ಬ ಆಚರಿಸುವ ಮೂಲಕ ಕೆರೆ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸಿದರು.
“ಬೆಳ್ಳಂದೂರು ರೈಸಿಂಗ್’ ಸಂಸ್ಥೆ, ವಿವಿಧ ಎನ್ ಜಿಒಗಳು, ಖಾಸಗಿ ಸಂಸ್ಥೆಗಳ ಸಂಯುಕ್ತ ಅಶ್ರಯ ದಲ್ಲಿ ಹಮ್ಮಿಕೊಂಡಿದ್ದ ಬೆಳ್ಳಂದೂರು ಕೆರೆ ಹಬ್ಬದಲ್ಲಿ ಕೆರೆ ಪ್ರದೇಶ ಒತ್ತುವರಿ ತೆರವು, ಕೊಳಚೆ ನೀರು ಶುದ್ಧೀಕರಣ ಘಟಕಗಳಲ್ಲಿ ಸಂಸ್ಕರಿಸಿದ ನೀರಿನ ಗುಣಮಟ್ಟದ ಕುರಿತು ನಾಗರಿಕರಿಗೆ ಆನ್‌ಲೈನ್ ಮೂಲಕ ಪ್ರಚುರ ಪಡಿಸುವುದು,
ಏರಿಯೇಟರ್ ಅಳವಡಿಕೆಯಿಂದ ಕೆರೆಯಲ್ಲಿ ಆಮ್ಲಜನಕವನ್ನು ಹೆಚ್ಚಿಸುವುದು, ಕೆರೆ ನೀರನ್ನು ಸ್ವತ್ಛಗೊಳಿಸಲು ಪಾಸೆಟ್ ಮತ್ತು ನೈಟ್ರೇಟ್ ಬಳಸುವುದು, ಜೈವಿಕ ತಂತ್ರಜಾnನ, ವೆಟ್‌ಲ್ಯಾಂಡ್ ನಿರ್ಮಾಣದಂತಹ ಕ್ರಮಗಳ ಕುರಿತು ಚರ್ಚಿಸಲಾಯಿತು. ನಗರದ ಪ್ರತಿಯೊಂದು ಕೆರೆಯ ರಕ್ಷಣೆಗೆ ಸ್ಥಳೀಯರನ್ನೊಳಗೊಂಡ ನಿರ್ವಹಣಾ ಸಮಿತಿ ರಚಿಸಿ ಪರಿಸರ ತಜ್ಞರನ್ನು ಸದಸ್ಯರನ್ನಾಗಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಯಿತು.
ವರ್ಷಕ್ಕೊಮ್ಮೆ ಕೆರೆ ಕಣಿವೆಗಳಲ್ಲಿನ ಎಸ್‌ಟಿಪಿ ಪ್ಲ್ಯಾಂಟ್‌ಗಳ ಪರಿಶೀಲನೆ ನಡೆಸುವುದು ಸೇರಿದಂತೆ ಇನ್ನಿತರೆ ಕ್ರಮಗಳನ್ನು ಸರ್ಕಾರದ ಅಂಗ ಸಂಸ್ಥೆಗಳು ಅಳವಡಿಸಿಕೊಳ್ಳಬೇಕು ಎಂಬುದರ ಬಗ್ಗೆಯೂ ನಿರ್ಧರಿಸಲಾಯಿತು. ಸಭೆಯಲ್ಲಿ ಮಾತನಾಡಿದ ಬೆಳ್ಳಂದೂರು ಕೆರೆ ಅಭಿವೃದ್ದಿ ಸಮಿತಿ ಸದಸ್ಯ ಜಗದೀಶ್, “ಬೆಂಗಳೂರು ನಗರದ ಹಿತದೃಷ್ಟಿಯಿಂದ ಹಿರಿಯರು ಕೆರಗಳನ್ನು ನಿರ್ಮಿಸಿದ್ದರು.
ದರೆ ಕಾಲಕ್ರಮೇಣ ಕೆರೆಗಳು ಕಣ್ಮಾರೆಯಾಗಿವೆ. ಕಲುಷಿತಗೊಳ್ಳುತ್ತಿವೆ. ಸಾರ್ವಜನಿಕರ ಅಸಡ್ಡೆ ಮತ್ತು ಸರ್ಕಾರದ ನಿರ್ಲಕ್ಷದಿಂದ ಕೆರೆಗಳು ಅವನತಿಗೆ ತಲುಪಿವೆ,’ ಎಂದು ಬೇಸರ ವ್ಯಕ್ತಪಡಿಸಿದರು. ನಗರದಲ್ಲಿನ ಕೆರೆಗಳ ಕುರಿತ ಸಂಪೂರ್ಣ ಮಾಹಿತಿಯುಳ್ಳ ಚಿತ್ರಪಟಗಳು,
ಪರಿಸರದ ನಾನಾ ಪರಿಕಲ್ಪನೆಯುಳ್ಳ ಮಕ್ಕಳಿಂದ ರಚಿತವಾದ ಚಿತ್ರ ವಿನ್ಯಾಸಗಳು, ಕಲಾವಿದನ ಕುಂಚದಲ್ಲಿ ಅರಳಿದ ಕೆರೆಯ ಚಿತ್ರ ವಿನ್ಯಾಸ ಕಂಡು ಬಂದವು. ನಮ್ಮ ಬೆಂಗಳೂರು ಪೌಂಡೇಷನ್‌ನ ಶ್ರೀಧರ್‌ಪಬ್ಬಿಶೆಟ್ಟಿ, ಪರಿಸರ ತಜ್ಞ ಯಲ್ಲಪ್ಪರೆಡ್ಡಿ, ಡಾ.ವಿಜಯ್‌ಕುಮಾರ್, ಎನ್.ಲಕ್ಷ್ಮಣ್, ಬಿಡಿಎ ಅಧಿಕಾರಿ ಖಾನ್ ಭಾಗವಹಿಸಿದ್ದರು.