Advertisement
ತಲ್ಲೂರು ಗ್ರಾ.ಪಂ. ವ್ಯಾಪ್ತಿಯ ನಾಗನಕೆರೆಯು ಈ ಹಿಂದೆ 13 ಸೆಂಟ್ಸ್ ವಿಸ್ತೀರ್ಣ ಹೊಂದಿತ್ತು. ಆದರೆ ಈ ಕೆರೆಯ ಸಮೀಪದಲ್ಲೇ ಮನೆ ಹೊಂದಿರುವ ಪಂಚಾಯತ್ ಸದಸ್ಯರೊಬ್ಬರು ಒತ್ತುವರಿ ಮಾಡಿಕೊಂಡಿರುವುದಾಗಿ ಇಲ್ಲಿನ ಅಕ್ಕ-ಪಕ್ಕದ ನಿವಾಸಿಗಳು ಆರೋಪಿಸಿದ್ದಾರೆ.
ಈ ನಾಗನಕೆರೆಯು ಹಿಂದೆ 30 ಎಕರೆ ಕೃಷಿ ಪ್ರದೇಶಕ್ಕೆ ನೀರುಣಿಸುವ ಜಲ ಸಂಪನ್ಮೂಲ ವಾಗಿತ್ತು. ಇದಲ್ಲದೆ ಈ ಕೆರೆಯ ಆಸುಪಾಸಿನಲ್ಲಿ 20-30
ಮನೆಗಳಿದ್ದು, ಅಲ್ಲಿನ ಬಾವಿಗಳಲ್ಲಿನ ನೀರಿನ ಮಟ್ಟ ಏರಿಸುವಲ್ಲಿಯೂ ಈ ಕೆರೆ ವರದಾನವಾಗಿತ್ತು. ಮೇಯಲು ಬಿಡುವ ಜಾನುವಾರು ಗಳಿಗೆ ದಣಿವಾರಿಸಿಕೊಳ್ಳಲು ಇದು ಪ್ರಯೋಜನವಾಗುತ್ತಿತ್ತು. ಆದರೆ ಇದು ಸರಕಾರಿ ಕೆರೆಯಾಗಿದ್ದರೂ, ಈಗ ಈ ಕೆರೆಯ ಬಹುಭಾಗ ಒತ್ತುವರಿಯಾಗಿದೆ. ಬಾಕಿ ಇರುವ ಕೆರೆಯ ಅಲ್ಪ ಭಾಗದಲ್ಲಿ ಹೂಳು ತುಂಬಿಕೊಂಡಿದೆ. ಇರುವ ಅಲ್ಪ- ಸ್ವಲ್ಪ ಬಣ್ಣ ಬದಲಾಗಿ ಬಳಕೆಗೆ ಬಾರದಂತಾಗಿದೆ. ಇನ್ನು ಕೆಲ ವರ್ಷಗಳ ಹಿಂದೆ ಈ ಕೆರೆಯ ಒಂದು ಭಾಗಕ್ಕೆ ತಲ್ಲೂರು ಪಂಚಾಯತ್ ಅನುದಾನದಿಂದಲೇ ತಡೆಗೋಡೆಯನ್ನು ನಿರ್ಮಿಸಲಾಗಿತ್ತು.
Related Articles
Advertisement
ಸೂಕ್ತ ಕ್ರಮಆ ಮನೆಯ ಸಮೀಪವೇ ಕೆರೆ ಇರುವುದರಿಂದ ಅತಿಕ್ರಮಿಸಿರಬಹುದು. ಈ ಬಗ್ಗೆ ಪಂಚಾಯತ್ ಗಮನಕ್ಕೆ ಬಂದಿದ್ದು, ಅಧಿಕಾರಿಗಳೊಂದಿಗೆ ಚರ್ಚಿಸಿ, ಕೂಡಲೇ ಸೂಕ್ತ ಕ್ರಮಕೈಗೊಳ್ಳಲು ಸೂಚಿಸಲಾಗುವುದು.
– ಆನಂದ ಬಿಲ್ಲವ, ಅಧ್ಯಕ್ಷರು, ತಲ್ಲೂರು ಗ್ರಾ.ಪಂ. ಅನೇಕ ಬಾರಿ ಮನವಿ
ಈ ಸಂಬಂಧ ಈಗಾಗಲೇ ಅನೇಕ ಬಾರಿ ಸ್ಥಳೀಯರಿಂದ ಪಂಚಾಯತ್‌ಗೆ ಮನವಿ ಸಲ್ಲಿಸಿದರೂ, ಈವರೆಗೆ ಪಂಚಾಯತ್ ಗಮನವೇ ಕೊಟ್ಟಿಲ್ಲ. ಪಂಚಾಯತ್ ಸದಸ್ಯರೇ ಆಗಿರುವುದರಿಂದ ಪ್ರಭಾವಕ್ಕೊಳಕ್ಕಾಗಿ ಅಧಿಕಾರಿಗಳು ನಿರ್ಲಕ್ಷé ವಹಿಸುತ್ತಿದ್ದಾರೆ. ಈಗ ಮತ್ತೆ ಮನವಿ ನೀಡಲಾಗಿದೆ.
– ಸುಧೀರ್ ನಾಗನಕೆರೆ, ಸ್ಥಳೀಯರು