Advertisement

ಸಾರ್ವಜನಿಕರಿಂದಲೇ ಕೆರೆಗಳ ಹೂಳೆತ್ತುವಿಕೆ

12:19 PM Jun 11, 2019 | sudhir |

ಕೋಟ: ಈ ಬಾರಿ ಎಲ್ಲೆಡೆ ಜಲಕ್ಷಾಮ ತಲೆದೋರಿದೆ. ಕೆರೆಗಳು ಬತ್ತಿ ಬರಿದಾಗಿದೆ. ಆದರೆ ಇವುಗಳನ್ನು ಅಭಿವೃದ್ಧಿಪಡಿಸಲು ಆಡಳಿತ ವ್ಯವಸ್ಥೆ ಹೆಚ್ಚು ಆಸಕ್ತಿವಹಿಸುತ್ತಿಲ್ಲ ಎನ್ನುವುದನ್ನು ಮನಗೊಂಡು ಸ್ಥಳಿಯರೇ ಶ್ರಮದಾನ ಮೂಲಕ ಕೋಟ ಸುತ್ತ-ಮುತ್ತ ಆರು ಕೆರೆ, ಪುಷ್ಕರಣಿಗಳನ್ನು ಸ್ವತ್ಛಗೊಳಿಸಿ ನೀರುಕ್ಕುವಂತೆ ಮಾಡಿ ಮಾದರಿಯಾಗಿದ್ದಾರೆ.

Advertisement

ಕೋಟ ಸುತ್ತ-ಮುತ್ತ ಆರು ಕೆರೆಗಳ ಅಭಿವೃದ್ಧಿ
ಸುಮಾರು 600 ವರ್ಷದ ಇತಿಹಾಸವಿರುವ ಕೋಟ ಹಂದಟ್ಟಿನ ಹಂದೆ ಮಹಾವಿಷ್ಣು ಮಹಾಗಣಪತಿ ದೇವಸ್ಥಾನದ ಪುಷ್ಕರಣಿ ಹೊಯ್ಸಳರ ಕಾಲದ್ದು. ಇದರಲ್ಲಿ ಹೂಳು ತುಂಬಿ ನೀರು ಸಂಗ್ರಹವಾಗುತ್ತಿರಲಿಲ್ಲ. ಹೀಗಾಗಿ ಸ್ಥಳೀಯರು ಮಾ. 31ರಿಂದ ನಿರಂತರ ಶ್ರಮದಾನ ನಡೆಸಿ ಸ್ವತ್ಛಗೊಳಿಸಿದರು. ಇದು ಈ ಭಾಗದಲ್ಲಿ ನಡೆದ ಪ್ರಥಮ ಕೆರೆ ಸ್ವಚ್ಚತಾ ಕಾರ್ಯವಾಗಿತ್ತು.

ಅದೇ ರೀತಿ ಸಾವಿರಾರು ವರ್ಷ ಇತಿಹಾಸವಿರುವ ಗುಂಡ್ಮಿ ಮಹಾಗಣಪತಿ ದೇವಸ್ಥಾನದ ಕೆರೆಗೆ ಹೆದ್ದಾರಿ ಚತುಷ್ಪಥ ಕಾಮಗಾರಿ ವೇಳೆ ಹಾನಿಯಾಗಿತ್ತು. ದುರಸ್ತಿಗೊಳಿಸುವಂತೆ ಆಡಳಿತ ವ್ಯವಸ್ಥೆಗೆ ಎಷ್ಟೇ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಹೀಗಾಗಿ ಯುವ ಬ್ರಿಗೇಡ್‌ ಸಂಸ್ಥೆಯ 50ಕ್ಕೂ ಹೆಚ್ಚು ಕಾರ್ಯಕರ್ತರು ಎಪ್ರಿಲ್‌ ತಿಂಗಳಲ್ಲಿ ನಾಲ್ಕೈದು ವಾರ ಶ್ರಮದಾನ ನಡೆಸಿ ಪುಷ್ಕರಣಿ ಸ್ವತ್ಛಗೊಳಿಸಿದರು.

ಐತಿಹಾಸಿಕ ಕೋಟ ಶ್ರೀ ಹಿರೇಮಹಾಲಿಂಗೇಶ್ವರ ದೇವಸ್ಥಾನದ ಪುಷ್ಕರಣಿ ಹೂಳು ತುಂಬಿ ನೀರು ಬರಿದಾಗಿತ್ತು. ಹೀಗಾಗಿ ಮೇ 26ರಿಂದ ನಿರಂತರ ಒಂದು ವಾರಗಳ ಕಾಲ ಸ್ಥಳೀಯ ಹತ್ತಾರು ಸಂಘಟನೆಗಳ 250ಕ್ಕೂ ಹೆಚ್ಚು ಸ್ವಯಂ ಸೇವಕರು ಜಾತಿ, ಧರ್ಮ, ಪಕ್ಷ ಬೇಧವಿಲ್ಲದೆ ಶ್ರಮದಾನ ನಡೆಸಿ ಸ್ವತ್ಛಗೊಳಿಸಿದರು.

ಕೋಟ ರಾಜಶೇಖರ ದೇವಸ್ಥಾನದ ಪಕ್ಕದ ವರುಣತೀರ್ಥ ಕೆರೆಯಲ್ಲೂ ಹೂಳು ತುಂಬಿ ನೀರಿನ ಸಂಗ್ರಹಣೆ ಕುಂಠಿತ ವಾಗಿತ್ತು. ಸ್ಥಳೀಯ ರು ಜೂ. 2ರಿಂದ ನಿರಂತರ ಸ್ವತ್ಛತಾ ಕಾರ್ಯ ನಡೆಸಿ ಕೆರೆ ಸ್ವತ್ಛಗೊಳಿಸಿದರು.

Advertisement

ಕೋಟ ಕಣ್ಣಿನ ಆಸ್ಪತ್ರೆ ಸಮೀಪದ ಅಂಬಾಗಿಲುಕೆರೆ ಸ್ವಚ್ಚತೆಗೆ ಸ್ಥಳೀಯ ಪಾಂಚಜನ್ಯ ಸಂಘ ಆಶ್ರಯದಲ್ಲಿ, ಸ್ಥಳೀಯರ ಸಹಕಾರದೊಂದಿಗೆ ಜೂ.2ರಿಂದ ° ಸ್ವಚ್ಚಗೊಳಿಸುವ ಚಾಲನೆ ನೀಡಲಾಗಿದ್ದು ಇನ್ನೂ ಹಲವು ದಿನಗಳ ಕಾಲ ಕಾಮಗಾರಿ ನಡೆಯಲಿದೆ.

ಸಾಲಿಗ್ರಾಮದ ಪಾರಂಪಳ್ಳಿ ವಿಷ್ಣುಮೂರ್ತಿ ದೇವಸ್ಥಾನದ ಕೆರೆಗೆ ನೂರಾರು ವರ್ಷಗಳ ಇತಿಹಾಸವಿದೆ. ಕೃಷಿ, ಅಂತರ್ಜಲವೃದ್ಧಿಗೆ ಸಹಕಾರಿಯಾಗಿದ್ದ ಈ ಕೆರೆ ಕೂಡ ಹೂಳುತುಂಬಿದ ನಿಷ್ಪÅಯೋಜಕವಾಗಿತ್ತು. ಇದೀಗ ಸ್ಥಳೀಯರು ಶ್ರಮದಾನದ ಮೂಲಕ ಇದನ್ನು ಸ್ವಚ್ಚಗೊಳಿಸಿದ್ದಾರೆ.

ದಾನಿಗಳ ಸಹಕಾರ
ಈ ಎಲ್ಲ ಕೆರೆಗಳ ಸ್ವಚ್ಚತೆ ಸಂದರ್ಭ ಸ್ವಯಂ ಸೇವಕರ ಶ್ರಮದಾನಕ್ಕೆ ಕ್ರೈನ್‌, ಟಿಪ್ಪರ್‌, ಊಟೋಪಚಾರ , ಲೈಟಿಂಗ್‌ ಮುಂತಾದ ವ್ಯವಸ್ಥೆಗಳು ಅಗತ್ಯವಿತ್ತು. ಹೀಗಾಗಿ ಗೀತಾನಂದ ಫೌಂಡೇಶನ್‌ನ ಸೇರಿದಂತೆ ಹಲವಾರು ದಾನಿಗಳು ಸಹಕಾರ ನೀಡಿದರು.

ಹಲವು ದಶಕಗಳ ಅನಂತರ ಮಾದರಿ ಕಾರ್ಯ
ನಾಲ್ಕೈದು ದಶಕಗಳಿಂದೀಚೆಗೆ ವರುಣ ತೀರ್ಥ ಕೆರೆ ಹೊರತುಪಡಿಸಿ ಇತರ ಕೆರೆಗಳನ್ನು ಸಾರ್ವಜನಿಕರೇ ಸ್ವಚ್ಚಗೊಳಿಸಿದ ಉದಾಹರಣೆ ಕಡಿಮೆ. ಕೋಟ ಭಾಗದಲ್ಲಿ ಆಡಳಿತ ವ್ಯವಸ್ಥೆಯ ಸಹಕಾರವಿಲ್ಲದೆ ಸ್ಥಳೀಯರು ಶ್ರಮದಾನದ ಮೂಲಕ ಸರಣಿ ಸ್ವಚ್ಚತಾ ಕಾರ್ಯ ನಡೆಸುತ್ತಿರುವುದು ಶ್ಲಾಘನೀಯ. ಮುಂದೆ ಕೂಡ ಇಂತಹ ಕಾರ್ಯಗಳು ಎಲ್ಲೆಡೆ ನಡೆಯಬೇಕು.
-ಆನಂದ ಸಿ.ಕುಂದರ್‌, ನಾಲ್ಕು ಕೆರೆಗಳ ಸ್ವತ್ಛತೆ ನೇತೃತ್ವ ವಹಿಸಿದವರು.

Advertisement

Udayavani is now on Telegram. Click here to join our channel and stay updated with the latest news.

Next