Advertisement
ಪ್ರಸ್ತುತ ಕಂದಾಯ ಇಲಾಖೆ ಪ್ರಸ್ತಾಪದ ಪ್ರಕಾರ ಡಿ ನೋಟಿಫಿಕೇಷನ್ ಮಾಡಿದರೆ ರಿಯಲ್ ಎಸ್ಟೇಟ್ ಮಾಫಿಯಾ ಹಾಗೂ ಭೂ ಒತ್ತುವರಿದಾರರಿಗೆ ಅನುಕೂಲವಾಗುತ್ತದೆ. ಜತೆಗೆ ಸರ್ಕಾರ ಕ್ರಮದ ಬಗ್ಗೆ ಸಾರ್ವಜನಿಕ ವಲಯದಲ್ಲೂ ಶಂಕೆ ಮೂಡುತ್ತದೆ. ಇದೊಂದು ವಿವಾದ ಆಗಿರುವುದರಿಂದ ಸರ್ಕಾರ ಈ ವಿಚಾರದಲ್ಲಿ ಪಾರದರ್ಶಕತೆ ಪ್ರದರ್ಶಿಸಬೇಕಿದೆ. ಇಲ್ಲದಿದ್ದರೆ ಕಷ್ಟ ಎಂದು ಹಿರಿಯ ಸಚಿವರು ಖುದ್ದು ಮುಖ್ಯಮಂತ್ರಿಯವರ ಬಳಿಯೇ ಅಸಮಾಧಾನವ್ಯಕ್ತಪಡಿಸಿದ್ದಾರೆ.
ಕಂದಾಯ ದಾಖಲೆಗಳಲ್ಲಿ ಈಗಲೂ ಕೆರೆ ಎಂದೇ ನಮೂದಾಗಿದ್ದರೂ ಕರ್ನಾಟಕ ಗೃಹ ಮಂಡಳಿ, ಬಿಡಿಎ ಹಾಗೂ ನಗರಾಭಿವೃದಿಟಛಿ ಪ್ರಾಧಿಕಾರಿಗಳ ಮೂಲಕ ಕೆರೆಗಳ ಜಾಗದಲ್ಲಿ ಈಗಾಗಲೇ ಬಡಾವಣೆ ನಿರ್ಮಿಸಿದ್ದರೆ ಅಷ್ಟು ಪ್ರದೇಶಕ್ಕೆ ಸೀಮಿತವಾಗಿ ಡಿನೋಟಿಫೈ ಮಾಡಿ ಸುತ್ತಮುತ್ತ ಒತ್ತುವರಿಯಾಗಿದ್ದರೆ ತೆರವುಗೊಳಿಸಿ ಹಸಿರು ವಲಯ ನಿರ್ಮಿಸುವ
ಪ್ರಸ್ತಾವನೆ ಸಿದಟಛಿಪಡಿಸಲು ಸರ್ಕಾರ ತೀರ್ಮಾನಿಸಿದೆ. ಆದರೆ, ಇದಕ್ಕೂ ಮುನ್ನ ಕೆ.ಬಿ.ಕೋಳಿವಾಡ ಅವರ ಕೆರೆ ಒತ್ತುವರಿ ವರದಿ, ಎ.ಟಿ.ರಾಮಸ್ವಾಮಿ ಹಾಗೂ ಬಾಲಸುಬ್ರಹ್ಮಣ್ಯಂ ಅವರು ನೀಡಿರುವ ಸರ್ಕಾರಿ ಭೂಮಿ ಒತ್ತುವರಿ ವರದಿಗಳು, ಸುಪ್ರೀಂಕೋರ್ಟ್ ಹಾಗೂ ಹಸಿರು ಪೀಠದ ತೀರ್ಪು ಇವೆಲ್ಲವನ್ನೂ ಪರಾಮರ್ಶೆ ನಡೆಸಲು ನಿರ್ಧರಿಸಲಾಗಿದೆ ಎಂದು ಹೇಳಲಾಗಿದೆ. ರಾಜ್ಯದ 500 ಕಡೆ ಕೆರೆಯ ಜಾಗದಲ್ಲಿ ಗೃಹ ಮಂಡಳಿ, ಬಿಡಿಎ, ನಗರಾಭಿವೃದಿಟಛಿ ಪ್ರಾಧಿಕಾರಗಳ ಮೂಲಕ ಬಡಾವಣೆ ರಚಿಸಲಾಗಿದೆ. ಆದರೆ, ಕೆಲವೆಡೆ ಕೆರೆಯ ಪ್ರದೇಶದಲ್ಲಿ ಶೇ.50ರಿಂದ 60ರಷ್ಟು ಜಾಗದಲ್ಲಿ ನಗರಾಭಿವೃದಿಟಛಿ, ಕಂದಾಯ ಇಲಾಖೆ ಮೂಲಕ ಅಧಿಸೂಚನೆ ಹೊರಡಿಸಿ ಬಡಾವಣೆ ರಚಿಸಲಾಗಿದೆ. ಉಳಿದ ಭಾಗ ಖಾಸಗಿ ವ್ಯಕ್ತಿಗಳಿಂದ ಒತ್ತುವರಿಯಾಗಿದೆ. ಇದೀಗ ಬಡಾವಣೆ ರಚನೆಯಾಗಿರುವ ಪ್ರದೇಶವು ಕಂದಾಯ ಮೂಲ ದಾಖಲೆಗಳಲ್ಲಿ ಇನ್ನೂ ಕೆರೆ ಎಂದು ನಮೂದಾಗಿದೆ. ಇಂದಲ್ಲ ನಾಳೆ ಅದು ಸಮಸ್ಯೆಯಾಗುವುದರಿಂದ ಕಾಯ್ದೆಗೆ ತಿದ್ದುಪಡಿ ತರುವುದು ಅನಿವಾರ್ಯವಾಗಿದೆ ಎಂದು ಅಧಿಕಾರಿಗಳು ತಿಳಿಸುತ್ತಾರೆ.
Related Articles
Advertisement
ಆಗಿದ್ದೇನು?: ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ.ಇ.ವಿ.ರಮಣರೆಡ್ಡಿ ಅವರು 2017ರ ಏ.22ರಂದು ಟಿಪ್ಪಣಿ ಸಿದಟಛಿಪಡಿಸಿ 2017ರ ಏ.19 ರಂದು ನಡೆದ ಸಂಪುಟ ಸಭೆಯಲ್ಲಿ, ಮೂಲ ಸ್ಥಿತಿಯನ್ನು ಕಳೆದುಕೊಂಡಿರುವ ಕೆರೆಗಳನ್ನು ಸಾರ್ವಜನಿಕ ಉದ್ದೇಶಕ್ಕೆ ಬೇಕಾದಾಗ ಬಳಸಿಕೊಳ್ಳಲು ಈಗಿರುವ ಕರ್ನಾಟಕ ಭೂ ಕಂದಾಯ ಅಧಿನಿಯಮ1964ರ ಕಲಂ 68 ರ ಅಡಿ ಸಾಧ್ಯವಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾದಾಗ ಸದರಿ ಕಲಂ ತಿದ್ದುಮಾಡಿ ಅವಕಾಶ ಮಾಡಿಕೊಡಬೇಕೆಂದು ಸಚಿವ ಸಂಪುಟ ಸಭೆ ನಿರ್ಧರಿಸಿ ಕ್ರಮ ವಹಿಸಲು ಸೂಚಿಸಲಾಗಿದೆ ಎಂದು ತಿಳಿಸಿ, ಈ ವಿಚಾರದಲ್ಲಿ ಕಾನೂನು, ಆರ್ಥಿಕ, ನಗರಾಭಿವೃದಿಟಛಿ, ಸಣ್ಣ ನೀರಾವರಿ , ಅರಣ್ಯ ಮತ್ತು ಪರಿಸರ ಹಾಗೂ ಗ್ರಾಮೀಣಾಭಿವೃದಿಟಛಿ ಮತ್ತು ಪಂಚಾಯತ್ ರಾಜ್ ಇಲಾಖೆಗಳ ಅಭಿಪ್ರಾಯ ಪಡೆಯುವುದು ಎಂದು ತಿಳಿಸಿದ್ದರು.