Advertisement
ತಾಲೂಕಿನ ಬೀರಸಂದ್ರ ಗ್ರಾಮದ ಜಿಲ್ಲಾಡಳಿತ ಭವನದ ಜಿಪಂ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಕೆರೆ ಸಂರಕ್ಷಣಾ ಸಮಿತಿ, ತಾಲೂಕು ಕಾನೂನು ಸೇವಾ ಸಮಿತಿ ದೇವನಹಳ್ಳಿ ಹಾಗೂ ವಕೀಲರ ಸಂಘ ದೇವನಹಳ್ಳಿ ಸಂಯುಕ್ತಾಶ್ರಯದಲ್ಲಿ ನಡೆದ ಜಿಲ್ಲಾ ಮಟ್ಟದ ಕೆರೆ ಸಂರಕ್ಷಣಾ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಪ್ರತಿಯೊಬ್ಬರೂ ಪರಿಸರ ಸಂರಕ್ಷಣೆ ಮಾಡಬೇಕು. ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸಂರಕ್ಷಿಸಿ ಗಿಡಮರಗಳನ್ನು ಬೆಳೆಸಿದಾಗ ಮಾತ್ರ ಭೂಮಿಯ ಮೇಲಿನ ಜೀವಸಂಕುಲ ನೆಮ್ಮದಿ ಯಿಂದ ಬದುಕಲು ಸಾಧ್ಯವಿದೆ ಎಂದರು.
Related Articles
Advertisement
ಪ್ರತಿಯೊಬ್ಬರ ಕರ್ತವ್ಯ: ಕೆರೆ ಸಂರಕ್ಷಣೆಯ ಕಾರ್ಯಾಗಾರ ವಿಚಾರ ಬೆಂಗಳೂರು ಸೇರಿದಂತೆ ಎಲ್ಲೆಡೆ ಪ್ರಚಾರವಾಗಬೇಕು. ಒಂದು ಕೈಯಿಂದ ಈ ಕೆಲಸ ಸಾಧ್ಯವಿಲ್ಲ. ಎಲ್ಲರ ಕೊಡುಗೆಯಿಂದ ಕೆರೆಗಳ ರಕ್ಷಣೆ ಸಾಧ್ಯ. ಕೊರೊನಾ ಸಂದರ್ಭದಲ್ಲಿ ಆಶಾ ಕಾರ್ಯತೆಯರು, ಅಂಗನವಾಡಿ ಕಾರ್ಯಕತೆಯರ ಕೊಡುಗೆ ಅಪಾರ. ಭೂಮಿಯನ್ನು, ಪರಿಸರವನ್ನು ದೇವರಾಗಿ ಪೂಜಿಸುವ ದೇಶ ಭಾರತ. ಕೆರೆಗಳ ರಕ್ಷಣೆ ಕೇವಲ ಅಧಿಕಾರಿಗಳ, ಜಿಲ್ಲಾಡಳಿತದ ಜವಾಬ್ದಾರಿಯಲ್ಲ. ಇದು ಪ್ರತಿಯೊಬ್ಬರ ಕರ್ತವ್ಯ ಎಂದರು.
ಜಿಲ್ಲಾಧಿಕಾರಿ ಕೆ ಶ್ರೀನಿವಾಸ್, ಜಿಪಂ ಸಿಇಒ ರೇವಣಪ್ಪ, ತಹಶೀಲ್ದಾರ್ ಶಿವ ರಾಜು, ದೇವನ ಹಳ್ಳಿ ತಾಪಂ ಇಒ ಎಚ್.ಡಿ. ವಸಂತಕುಮಾರ್, ಎನ್ವಿರಾನ್ಮೆಂಟ್ ಸಪೋರ್ಟ್ ಗ್ರೂಪ್ ಬೆಂಗಳೂರು ಸಂಯೋಜಕ ಲಿಯೋ ಎಫ್. ಸಲ್ದಾನ್, ಎನ್ವಿರಾನ್ಮೆಂಟ್ ಸಪೋರ್ಟ್ ಗ್ರೂಪ್ ಬೆಂಗಳೂರು ಟ್ರಸ್ಟಿ ಭಾರ್ಗವಿ ಎಸ್. ರಾವ್, ಗ್ರಾಪಂ ಪಿಡಿಒ, ಆಶಾ ಕಾರ್ಯಕರ್ತೆಯರು ಇದ್ದರು.
ಕೆರೆಗಳ ಸ್ವಚ್ಛತೆಗೆ ಕ್ರಮವಹಿಸಿಮನೆಯ ಕಸ, ಕೋಳಿ ತ್ಯಾಜ್ಯಗಳಿಗೆ ಕೆರೆಗಳೇ ಕಸದ ತೊಟ್ಟಿ ಮಾಡಿಕೊಂಡಿದ್ದಾರೆ. ಪ್ರತಿಯೊಬ್ಬರೂ ಮನೆ ಸುತ್ತಮುತ್ತಲಿನ ಕೆರೆಗಳಿಗೆ ನಮ್ಮ ಕೊಡುಗೆ ಏನು ಎಂಬುದನ್ನು ಯೋಚಿಸಬೇಕು. ಮನೆ ಸ್ವಚ್ಛವಾಗಿ ಇಟ್ಟುಕೊಳ್ಳುವಂತೆ ಕೆರೆಗಳ ಸ್ವತ್ಛತೆಗೆ ಕ್ರಮವಹಿಸಬೇಕು ಎಂದು ಜಿಲ್ಲಾಮಟ್ಟದ ಕೆರೆ ಸಂರಕ್ಷಣಾ ಸಮಿತಿ ಸದಸ್ಯ ಹಾಗೂ ನ್ಯಾ. ಸಂದೀಪ್ ಸಾಲಿಯಾನ್ ಹೇಳಿದರು.