Advertisement

ಕೆರೆ 5.17 ಎಕರೆ ಜಮೀನು ಒತ್ತುವರಿ

01:45 PM Sep 15, 2020 | Suhan S |

ಕೆಜಿಎಫ್: ಭೂ ಮಾಫಿಯಾಗಳಿಂದ ಒತ್ತುವರಿಯಾಗಿದ್ದ ಗೌಡನಕೆರೆಯ ಸರ್ವೆ ಸೋಮವಾರ ನಡೆದಿದ್ದು, ಒಟ್ಟು 5.17 ಎಕರೆ ಜಮೀನು ಒತ್ತುವರಿಯಾಗಿದೆ.

Advertisement

ಗೌತಮನಗರ ಮತ್ತು ಮಸ್ಕಂ ವಾರ್ಡ್‌ ಮಧ್ಯೆ ಇರುವ ಗೌಡನಕೆರೆ ಒಟ್ಟು 11.17 ಎಕರೆವಿಸ್ತಿರ್ಣವಿದ್ದು, ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಸ್ವಲ್ಪ ಜಾಗ ನೀಡಲಾಗಿತ್ತು. ಭೂ ಮಾಫಿಯಾಗಳು ಕೆರೆಯ ಸ್ವರೂಪವನ್ನು ವಿರೂಪಗೊಳಿಸಲು ಸಾಕಷ್ಟು ಪ್ರಯತ್ನ ಮಾಡಿದ್ದರು. ರಾಜಕಾಲುವೆ ಒತ್ತುವರಿ ಮಾಡಿಕೊಂಡು ಕೆರೆಗೆ ನೀರು ಬರುವುದನ್ನೇ ತಡೆ ಗಟ್ಟಿದ್ದರು. ಈ ಸಂಬಂಧವಾಗಿ ಮಸ್ಕಂ ನಿವಾಸಿಗಳು ಸರ್ಕಾರಕ್ಕೆ ದೂರು ನೀಡಿದ್ದರು. ಸೋಮವಾರ ತಹಶೀಲ್ದಾರ್‌ ಕೆ.ರಮೇಶ್‌ ನೇತೃತ್ವದಲ್ಲಿ ಜಿಪಂ ಉಪ ವಿಭಾಗದ ಅಧಿಕಾರಿಗಳಾದ ಶ್ರೀನಿವಾಸ್‌ಮತ್ತು ರವಿಚಂದ್ರ ಅವರು ಸರ್ವೆಯರ್‌ ಮುಖಾಂ ತರಇಡೀಕೆರೆಯನ್ನು ಸರ್ವೆಮಾಡಿದರು.

ಕೆರೆಯು 5.17 ಎಕರೆ ಒತ್ತುವರಿಯಾಗಿರುವುದು ಪತ್ತೆಯಾಗಿದೆ. ಕೆಲವು ಮಂದಿ ಮನೆಗಳನ್ನು ಕೂಡ ಅಕ್ರಮವಾಗಿ ಕಟ್ಟಿದ್ದಾರೆ. ಅವರಿಗೆ ಯಾರು ಪರವಾನಿಗೆ ನೀಡಿದರು ಎಂಬ ಮಾಹಿತಿ ಕಲೆ ಹಾಕಲಾಗುತ್ತಿದೆ. ಗೌಡನಕೆರೆಪಕ್ಕದಲ್ಲಿರುವ ಸ್ಮಶಾನದ ಜಾಗ ಕೂಡ ತೆರವು ಮಾಡಲಾಗಿದೆಎಂದು ತಹಶೀಲ್ದಾರ್‌ಕೆ.ರಮೇಶ್‌ ತಿಳಿಸಿದರು.

ಬೆದರಿಕೆ: ತಹಶೀಲ್ದಾರ್‌ ರಮೇಶ್‌ ಗೌಡನ ಕೆರೆ ಸರ್ವೆ ಮಾಡುತ್ತಿದ್ದ ಸಂದರ್ಭದಲ್ಲಿ ಅಲ್ಲಿ ಮನೆಕಟ್ಟಿದ್ದ ಕೆಲವು ನಿವಾಸಿಗಳು ಮನೆ ತೆರವು ಮಾಡದಂತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಅಪರಿಚಿತ ದುಷ್ಕರ್ಮಿಯೊಬ್ಬ ಎಲ್ಲರಿಗೂ ಕೇಳುವಂತೆ ಬಂಗಾರಪೇಟೆ ತಹಶೀಲ್ದಾರ್‌ಗೆ ಹಾಕಿದಂತೆ ಇವನಿಗೂ ಹಾಕಬೇಕು ಎಂದು ಉದ್ಗರಿಸಿದ್ದು, ಆತಂಕಕ್ಕೆ ಎಡೆ ಮಾಡಿಕೊಟ್ಟಿತು. ಪೊಲೀಸ್‌ ಅಧಿಕಾರಿಗಳ ಸಮಕ್ಷಮದಲ್ಲಿಯೇ ಬೆದರಿಕೆ ಹಾಕಿದ ವ್ಯಕ್ತಿಯನ್ನುಕಂಡು ಹಿಡಿಯಲು ಸಾಧ್ಯವಾಗಲಿಲ್ಲ

Advertisement

Udayavani is now on Telegram. Click here to join our channel and stay updated with the latest news.

Next