Advertisement

ಉತ್ತರ ಭಾರತದಲ್ಲಿ ಮುಂದುವರಿದ ಹಿಮಪಾತ; ಕೆಲವೆಡೆ ಆರೆಂಜ್‌ ಅಲರ್ಟ್

03:32 PM Jan 25, 2021 | Team Udayavani |

ಮಣಿಪಾಲ: ಹಿಮಾಚಲ ಮತ್ತು ಕಾಶ್ಮೀರದಲ್ಲಿ ಭಾರೀ ಹಿಮಪಾತವಾಗುತ್ತಿವೆ. ಈ ಕಾರಣದಿಂದಾಗಿ ಅಲ್ಲಿನ ತಾಪಮಾನವು ಅನೇಕ ಪ್ರದೇಶಗಳಲ್ಲಿ ಮೈನಸ್ ತಲುಪಿದೆ. ಪಂಜಾಬ್‌ನಲ್ಲಿ ಮುಂದಿನ 3 ದಿನಗಳ ವರೆಗೆ ಶೀತ ಗಾಳಿಯೊಂದಿಗೆ ದಟ್ಟವಾದ ಮಂಜು ಇರಲಿದೆ‌ ಎಂದು ಹವಾಮಾನ ಇಲಾಖೆ ಹೇಳಿದೆ. ಹರಿಯಾಣದಲ್ಲಿ ಆರೆಂಜ್ ಅಲರ್ಟ್ ನೀಡಲಾಗಿದೆ.

Advertisement

ರಾಜಸ್ಥಾನದ ಮೌಂಟ್ ಅಬುವಿನಲ್ಲಿ ಹವಾಮಾನ 6 ಡಿಗ್ರಿಗಳಿಂದ ಶೂನ್ಯಕ್ಕೆ ಇಳಿಕೆಯಾಗಿದೆ. ಹೀಗಾಗಿ ಇಲ್ಲಿನ ಅನೇಕ ಜಿಲ್ಲೆಗಳಲ್ಲಿ ಎಚ್ಚರಿಕೆ ನೀಡಲಾಗಿದೆ. ಕಳೆದ ಎರಡು ದಿನಗಳ ಕಾಲ ಮಧ್ಯಪ್ರದೇಶದ ಗ್ವಾಲಿಯರ್ ಮತ್ತು ಭಿಂದ್‌ನಲ್ಲಿ ಮಬ್ಬು ಬರುವ ಸಾಧ್ಯತೆಯಿದೆ. ಇನ್ನು ಬಿಹಾರದ ಅನೇಕ ಭಾಗಗಳಲ್ಲಿ ಹವಾಮಾನ ಇಲಾಖೆ ದಟ್ಟವಾದ ಮಂಜಿನ ಮುನ್ಸೂಚನೆಯನ್ನು ಬಿಡುಗಡೆ ಮಾಡಿದೆ.

ಶ್ರೀನಗರದ ಶೇರ್-ಎ-ಕಾಶ್ಮೀರ ಕ್ರೀಡಾಂಗಣದಲ್ಲಿ ಗಣರಾಜ್ಯೋತ್ಸವದ ಮುಖ್ಯ ಕಾರ್ಯಕ್ರಮಕ್ಕಾಗಿ ವಿದ್ಯಾರ್ಥಿಗಳು ಮತ್ತು ಕಲಾವಿದರು ತಾಲೀಮು ನಡೆಸುತ್ತಿದ್ದಾರೆ. ಹಲವು ವರ್ಷಗಳ ಅನಂತರ, ಇಂತಹ ಹಿಮಾವೃತ ಪರಿಸ್ಥಿತಿಗಳಲ್ಲಿ ಕಾಶ್ಮೀರದಲ್ಲಿ ಗಣರಾಜ್ಯೋತ್ಸವವನ್ನು ಆಚರಿಸಲಾಗುತ್ತದೆ. ಇಲ್ಲಿನ ಅನೇಕ ಪ್ರದೇಶಗಳಲ್ಲಿ ಹಿಮವು 5 ಅಡಿಗಳವರೆಗೆ ಇರುತ್ತದೆ. ಕುಫ್ರಿ, ಕಿನ್ನೌರ್, ಲಾಹೌಲ್-ಸ್ಪಿಟಿ, ಕುಲ್ಲು ಮತ್ತು ಚಂಬಾ ಜಿಲ್ಲೆಗಳ ಹೆಚ್ಚಿನ ಪ್ರದೇಶಗಳಲ್ಲಿ ಭಾರೀ ಹಿಮಪಾತವಾಗುತ್ತಿವೆ. ಇದು ಅನೇಕ ಭಾಗಗಳಲ್ಲಿ ಹವಾಮಾನ ಮೈನಸ್‌ ದಾಖಲಾಗಲು ಕಾರಣವಾಗಿದೆ.

ರಾಜಸ್ಥಾನದ 14 ನಗರಗಳಲ್ಲಿ ಕನಿಷ್ಠ ತಾಪಮಾನವು 10 ಡಿಗ್ರಿಗಿಂತ ಕಡಿಮೆಯಿದೆ. ಮೌಂಟ್ ಅಬುವಿನಲ್ಲಿ 6 ಡಿಗ್ರಿಯಿಂದ ಶೂನ್ಯಕ್ಕೆ ಇಳಿಕೆಯಾಗಿದೆ. ಚುರು, ಅಲ್ವಾರ್, ಪಿಲಾನಿ, ಸಿಕಾರ್, ಭಾರತ್ಪುರ್, ಧೌಲ್ಪುರ್ ಮತ್ತು ಕರೌಲಿಗಳಲ್ಲಿ ಗರಿಷ್ಠ ತಾಪಮಾನವು 20 ಡಿಗ್ರಿಗಿಂತ ಕಡಿಮೆಯಿತ್ತು. ಶೀತ ಗಾಳಿಯಿಂದಾಗಿ ಹವಾಮಾನ ಇಲಾಖೆ 3-4 ದಿನಗಳ ವರೆಗೆ ಎಚ್ಚರಿಕೆಯನ್ನು ನೀಡಿದೆ. ಅದೇ ಸಮಯದಲ್ಲಿ ಜನವರಿ 25-26ರಂದು ಉತ್ತರ ರಾಜಸ್ಥಾನದಲ್ಲಿ ದಟ್ಟವಾದ ಮಂಜಿನ ಮುನ್ಸೂಚನೆ ಇದೆ.

ಗ್ವಾಲಿಯರ್ ಮತ್ತು ಭಿಂದ್ ಮತ್ತೆ ದಟ್ಟವಾದ ಮಂಜನ್ನು ಹೊಂದಿದ್ದಾರೆ. ಭಿಂದ್ ಮತ್ತು ಮೊರೆನಾದಲ್ಲಿ ಅತ್ಯಂತ ಚಳಿ ಕಂಡುಬರುತ್ತಿದೆ. ಇಲ್ಲಿ ಕನಿಷ್ಠ ತಾಪಮಾನ 6 ಡಿಗ್ರಿ ದಾಖಲಾಗಿದೆ. ಅರೇಬಿಯನ್ ಸಮುದ್ರದಿಂದ ತೇವಾಂಶ ಬರುತ್ತಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇದರೊಂದಿಗೆ ಗ್ವಾಲಿಯರ್, ಡಾಟಿಯಾ ಮತ್ತು ಚಂಬಲ್ ವಿಭಾಗಗಳಲ್ಲಿ ಎರಡು ದಿನಗಳ (ಸೋಮವಾರ, ಮಂಗಳವಾರ) ಮಂಜು ಹರಡುವ ನಿರೀಕ್ಷೆಯಿದೆ.

Advertisement

ಹರಿಯಾಣದಲ್ಲೂ ಚಳಿ ತೀವ್ರವಾಗಿದೆ. ಹಗಲಿನ ತಾಪಮಾನ ರವಿವಾರ ಸಾಮಾನ್ಯಕ್ಕಿಂತ 8 ಡಿಗ್ರಿಗಿಂತ ಹೆಚ್ಚಾಗಿದೆ. ಹವಾಮಾನಶಾಸ್ತ್ರಜ್ಞರ ಪ್ರಕಾರ, ಶೀತ ಗಾಳಿ ಜನವರಿ 27ರ ವರೆಗೆ ಮುಂದುವರಿಯಲಿದೆ. ಈ ವೇಳೆ ಆಳವಾದ ಮಂಜು ಇರಲಿದೆ. ಹೀಗಾಗಿ ಹವಾಮಾನ ಇಲಾಖೆ ಆರೆಂಜ್ ಅಲರ್ಟ್‌ ಘೋಷಿಸಿದೆ. ಪಂಜಾಬ್‌ನಲ್ಲಿಯೂ ಸೋಮವಾರ ಆರೆಂಜ್ ಅಲರ್ಟ್ ಮತ್ತು ಮಂಗಳ ಹಳದಿ ಅಲರ್ಟ್ ನೀಡಿದೆ.

ಜನವರಿ 28 ರ ವರೆಗೆ ಬಿಹಾರ ಪಟ್ನಾ ಸೇರಿದಂತೆ ಎಲ್ಲ ಪ್ರದೇಶಗಳು ಜನವರಿ 28ರ ವರೆಗೆ ದಟ್ಟವಾದ ಮಂಜಿನಲ್ಲಿ ಆವೃತವಾಗಲಿವೆ. ಬುಧವಾರದ ಅನಂತರ ತಾಪಮಾನ ಇಳಿಯುವ ನಿರೀಕ್ಷೆಯಿದೆ.

Advertisement

Udayavani is now on Telegram. Click here to join our channel and stay updated with the latest news.

Next