Advertisement

ಆದಾಯದಲ್ಲಿ ಹಿಂದುಳಿದಿದ್ದೇ ರೈತರ ಬಡತನಕ್ಕೆ ಕಾರಣ

04:31 PM Jul 23, 2019 | Suhan S |

ಬೀದರ: ದೇಶದಲ್ಲಿ ಅತೀ ಹೆಚ್ಚು ಜನರು ತೊಡಗಿಸಿಕೊಂಡಿರುವ ಕೃಷಿ ಕ್ಷೇತ್ರವು ಆದಾಯ ಗಳಿಕೆಯಲ್ಲಿ ಅತಿ ಹಿಂದುಳಿದಿರುವುದೇ ರೈತರ ಬಡತನಕ್ಕೆ ಕಾರಣವಾಗಿದೆ ಎಂದು ಮಂಡ್ಯದ ಪ್ರಗತಿ ಪರ ರೈತ ಡಾ| ಮಂಜುನಾಥ ಹೇಳಿದರು.

Advertisement

ನಗರದ ಡಿಸಿಸಿ ಬ್ಯಾಂಕಿನ ಸಹಾರ್ದ ತರಬೇತಿ ಸಂಸ್ಥೆಯಲ್ಲಿ ಬೆಳಗಾವಿ ಮತ್ತು ಬೀದರ ಜಿಲ್ಲೆಯ ಆಯ್ದ ರೈತರು ಮತ್ತು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಪದಾಧಿಕಾರಿಗಳಿಗಾಗಿ ನಡೆದ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬೀಜ, ಗೊಬ್ಬರ, ಕ್ರಿಮಿನಾಶಕ, ಕೃಷಿಕೂಲಿ ದಿನದಿಂದ ದಿನಕ್ಕೆ ಬೆಲೆ ಏರುತ್ತಿದ್ದರೆ ಫಸಲಿನ ಮಾರಾಟದ ಸಮಯದಲ್ಲಿ ಉತ್ಪನ್ನದ ಮಾರುಕಟ್ಟೆ, ಖರೀದಿ ದರ ಇಳಿಕೆಯಾಗುತ್ತಿದೆ. ಇದು ರೈತರಿಗೆ ಸಂಕಷ್ಟಕ್ಕೆ ಕಾರಣವಾಗಿದೆ ಎಂದರು.

ರೈತರ ಉತ್ಪನಗಳು ಕೃಷಿ ಮಾರುಕಟ್ಟೆಗೆ ಬಂದಾಗ ಸೂಕ್ತ ಬೆಲೆ ಸಿಗದ ಹಿನ್ನೆಲೆಯಲ್ಲಿ ರೈತರು ಸಮಸ್ಯೆ ಎದುರಿಸುತ್ತಿದ್ದಾರೆ. ಕಾರಣ ಕೃಷಿಕರು ತಮ್ಮ ಖರ್ಚುಗಳನ್ನು ಕಡಿಮೆ ಮಾಡಿಕೊಳ್ಳುÛವತ್ತ ಹೆಚ್ಚು ಗಮನ ಹರಿಸಬೇಕು. ರಾಸಾಯನಿಕ ಗೊಬ್ಬರ ಕ್ರಿಮಿನಾಶಕಗಳನ್ನು ಬಳಸುವ ಬದಲು ತಾವೇ ಖರ್ಚಿಲ್ಲದೇ ತಯಾರಿಸಬಹುದಾದ ಉತ್ಪನ್ನಗಳತ್ತ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.

ಸಕ್ಕರೆ ಕಾರ್ಖಾನೆಗಳ ತ್ಯಾಜ್ಯಗಳಾದ ಬೂದಿ ಮತ್ತು ಮಡ್ಡಿಯನ್ನು ಬಳಸಿಕೊಂಡು ಅತ್ಯುತ್ತಮವಾದ ಕಾಂಪೋಸ್ಟ್‌ ಗೊಬ್ಬರವನ್ನು ತಯಾರಿಸುವ ತಮ್ಮ ವಿಧಾನವನ್ನು ರೈತರೊಂದಿಗೆ ಹಂಚಿಕೊಂಡರು. ಸಕ್ಕರೆ ಉತ್ಪಾದನೆ ಬಳಿಕ ದೊರೆಯುವ ಬೂದಿಯಲ್ಲಿ ಪೊಟಾಷ್‌ನ ಅಂಶ ಅತ್ಯಧಿಕವಾಗಿದೆ. ಅಂತೆಯೇ ಕೊನೆಗೆ ಸಿಗುವ ಮಡ್ಡಿಯಲ್ಲಿ ಅತೀ ಹೆಚ್ಚು ಸಾರಜನಕ ಮತ್ತು ಗಂಧಕವೂ ದೊರಕುತ್ತದೆ. ರೈತರು ಮಡ್ಡಿಯನ್ನಷ್ಟೆ ಬಳಸಿಕೊಳ್ಳತ್ತಿದ್ದು ಸಂಗ್ರಹವಾದ ಬೂದಿ ವಿಲೇವಾರಿಯಾಗದೇ ಪರಿಸರ ಮಾಲಿನ್ಯಕ್ಕೂ ಕಾರಣವಾಗುತ್ತಿದೆ. ಬೂದಿ ಮತ್ತು ಮಡ್ಡಿಯನ್ನು 1:2ರ ಪ್ರಮಾಣದಲ್ಲಿ ಬೆರೆಸಿ ಮಿಶ್ರಣಕ್ಕೆ 15 ದಿನಗಳಿಗೊಮ್ಮೆ ಆಕಳ ಸೆಗಣಿ ಗಂಜಲಗಳನ್ನು ಚಿಮುಕಿಸುತ್ತಾ 48 ದಿನಗಳ ಕಾಲ ಕೊಳೆಯಿಸಿದಾಗ ಅತ್ಯುತ್ತಮ ಗೊಬ್ಬರ ತಯಾರಾಗುತ್ತದೆ ಎಂದು ವಿವರಿಸಿದರು.

Advertisement

ಮಂಡ್ಯ ಜಿಲ್ಲೆಯಲ್ಲಿರುವ (ಕೋರಮಂಗಲ) ಸಕ್ಕರೆ ಕಾರ್ಖಾನೆಯೊಂದು ಈ ತರಹದ ಗೊಬ್ಬರ ತಯಾರಿಸಿ ರೈತರಿಗೆ ವಿತರಿಸುತ್ತಿದೆ. ಇದು ರೈತರಿಗೂ ಅತ್ಯಂತ ಕಡಿಮೆ ಖರ್ಚಿನಲ್ಲಿ ಸಿಗುವ ಗೊಬ್ಬರವಾಗಿದ್ದು, ಲಾಭದಾಯಕವಾಗಿದೆ. ಕಾರ್ಖಾನೆಗಳಿಗೂ ತ್ಯಾಜ್ಯ ವಿಲೇವಾರಿಗೂ ಅನುಕೂಲವಾಗುತ್ತದೆ. ಕಾರಣ ರೈತರು ಈ ಯೋಜನೆ ಅಳವಡಿಸಿಕೊಳ್ಳಲು ಮುಂದಾಗಬೇಕು ಎಂದು ಹೇಳಿದರು.

ಡಿಸಿಸಿ ಬ್ಯಾಂಕಿನ ನಿರ್ದೇಶಕ ಬಸವರಾಜ ಹೆಬ್ಟಾಳೆ ಮಾತನಾಡಿ, ರೈತರು ಆಧುನಿಕ ಕೃಷಿ ವಿಧಾನಗಳ ಜೊತೆಗೆ ಕಮ್ಮಿ ಖರ್ಚಿನ ಬಂಡವಾಳರಹಿತ ಆವಿಷ್ಕಾರಗಳನ್ನು ಅಳವಡಿಸಿಕೊಂಡು ಹೊಸ ಮಾದರಿಗಳನ್ನು ಸೃಷ್ಟಿಸಬೇಕು ಎಂದು ಹೇಳಿದರು.

ಡಿಸಿಸಿ ಬ್ಯಾಂಕಿನ ನಿರ್ದೇಶಕ ಶರಣಪ್ಪಾ ಕನ್ನಾಳ್ಳೆ, ಸಹಾರ್ದ ನಿರ್ದೇಶಕ ಸುಬ್ರಹ್ಮಣ್ಯ ಪ್ರಭು, ಸಹಾರ್ದ ತರಬೇತಿ ಸಂಸ್ಥೆಯ ಎಸ್‌.ಜಿ ಪಾಟೀಲ, ಅನೀಲ್ ಪರಶೆಣ್ಯೆ, ತನ್ವಿರ ರಜಾ, ನಾಗಶೆಟ್ಟಿ ಘೊಡಂಪಳ್ಳಿ ಸೇರಿದಂತೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next