Advertisement

ಸಿಲ್ಕ್ ಲೇಡಿ ಕಾಟನ್‌ ಸಾರಿ

11:48 AM Mar 03, 2017 | |

ಸೀರೆ ನಮ್ಮ ಸಾಂಪ್ರದಾಯಿಕ ಉಡುಗೆ ಮಾತ್ರವಲ್ಲದೆ ನಮ್ಮ ಸಂಸ್ಕೃತಿಯ ಪ್ರತೀಕವೂ ಹೌದು. ಸೀರೆಗೆ ಸಾವಿರಾರು ವರ್ಷಗಳ ಇತಿಹಾಸ ಇದೆ. ಹೆಣ್ಣು ಧರಿಸುವ ವೈವಿಧ್ಯಮಯ ಉಡುಪುಗಳಲ್ಲಿ ಸೀರೆಯೇ ಇಂದಿಗೂ ಪಟ್ಟದರಸಿಯಾಗಿ ತನ್ನ ಮಹತ್ವವನ್ನು ಮೆರೆಯುತ್ತಿದೆ.

Advertisement

ಹೆಂಗಳೆಯರ ಸೀರೆಯ ಲೋಕವೆಂದರೆ ಅದೊಂದು ವೈವಿಧ್ಯಮಯ ಜಗತ್ತು. ಶ್ರೀಮಂತರು, ಬಡವರು ಎಂಬ ಭೇದಭಾವವಿಲ್ಲದೆ ಅವರವರ ಅನುಕೂಲಕ್ಕೆ ತಕ್ಕಂತಹ ಸೀರೆಗಳಿದ್ದು ನಮ್ಮ ಬದುಕಿನ ಸಾಮರಸ್ಯವನ್ನು ಹೆಚ್ಚಿಸುತ್ತವೆ. ಸೀರೆಗಳಲ್ಲಿ ತರಹೇವಾರಿ ಸೀರೆಗಳನ್ನು ಕಾಣಬಹುದು. ಜರಿಯ ಸೀರೆಗಳು, ರೇಷ್ಮೆ ಸೀರೆಗಳು, ಸಿಲ್ಕ್ ಸೀರೆಗಳು, ಶಿಫಾನ್‌ ಸೀರೆಗಳು, ಕಾಟನ್‌ ಸೀರೆಗಳು, ಜೂಟ್‌ ಸೀರೆಗಳು, ಪಾಲಿಸ್ಟರ್‌ ಸೀರೆಗಳು ಹೀಗೆ.

ಹೆಣ್ಮಕ್ಕಳಲ್ಲಿ ಎಷ್ಟೇ ಸೀರೆಗಳಿದ್ದರೂ, “”ನನ್ನಲ್ಲಿ ಸೀರೆಗಳೇ ಇಲ್ಲ, ಇದ್ದದ್ದೆಲ್ಲ ಹಳತಾಯಿತು” ಎನ್ನುತ್ತಲೇ ಹಬ್ಬಕ್ಕೆಂದು, ಉದ್ಯೋಗಕ್ಕೆ ಹೋಗಲು,  ಮದುವೆಗೆ ಅಂಥ ಸೀರೆಗಳನ್ನು ಕೊಳ್ಳುತ್ತಲೇ ಸಾಗುತ್ತಾರೆ. ಹಾಗೆ ನೋಡಿದರೆ, “ಇಲ್ಲ ಇಲ್ಲ’ ಎಂದೇ ಒಂದು ಅಂಗಡಿ ಇಡುವಷ್ಟು ಸೀರೆಗಳ ಸಂಗ್ರಹ ಅವರಲ್ಲಿರುತ್ತದೆ! ಯಾವಳಾದರೂ ಒಬ್ಬಳು ಹೊಸ ಡಿಸೈನಿನ ಸೀರೆ ಉಟ್ಟುಕೊಂಡದ್ದು ಕಂಡರೆ ಸಾಕು, “”ಆಹಾ… ಎಷ್ಟು ಚೆನ್ನಾಗಿದೆ, ಎಲ್ಲಿ ಕೊಂಡುಕೊಂಡೆ, ಇದಕ್ಕೆಷ್ಟು?” ಅಂತ ಸೀರೆಯನ್ನು ನೋಡಿಯೇ ಇಲ್ಲವೆಂಬಂತೆ ಕಣ್ಣರಳಿಸುತ್ತಾರೆ. 

ಇತ್ತೀಚೆಗೆ ಸೀರೆಗಳು ವೆರೈಟಿ ಮೆಟೀರಿಯಲ್ಸ್‌ಗಳಲ್ಲಿ ಮಿಕ್ಸ್‌ ಆ್ಯಂಡ್‌ ಮ್ಯಾಚ್‌ ಆಗಿ ಲಭ್ಯವಿವೆ. ಈ ತರಹೇವಾರಿ ಸೀರೆಗಳಲ್ಲಿ ಹೆಣ್ಮಕ್ಕಳ ಮನಸ್ಸನ್ನು ಗೆದ್ದಿರುವ ಸೀರೆಯೆಂದರೆ, ಕಾಟನ್‌ ಸೀರೆ. ಕಾಟನ್‌ ಸೀರೆ ಎಂದಾಕ್ಷಣ ಪ್ರತಿ ಮನೆಯ ಅಮ್ಮನ ಪ್ರತಿದಿನದ ಸಂಗತಿಯಾದ ವಾಯಿಲ್‌ ಸೀರೆ ಅಥವಾ ಹತ್ತಿ ಸೀರೆ ಪಕ್ಕನೆ ನೆನಪಾಗುತ್ತದೆ. ಹಾಗೆ ನೋಡಿದರೆ, ಅಮ್ಮನ ಹತ್ತಿಯ ಸೀರೆಯ ಸೊಬಗು ಯಾವುದಕ್ಕೇನು ಕಡಿಮೆ ಇದೆ ಹೇಳಿ? ಕಾಟನ್‌ ಸೀರೆಗಳ ಸೊಗಸೇ ಬೇರೆ! ಮೊದಲಿನಿಂದಲೂ ಕಾಟನ್‌ ಸೀರೆಯೇ ರಾಣಿಯಾಗಿ ಇಂದಿನವರೆಗೂ ಮೆರೆಯುತ್ತ ಬಂದಿದೆ. ರೇಶಿಮೆ ಸೀರೆಗಳು ಭಾರತೀಯ ಮಹಿಳೆಯರ ಅಚ್ಚುಮೆಚಿನ ಸೀರೆಗಳಾಗಿರಬಹುದು; ಆದರೆ, ಕಾಟನ್‌ ಸೀರೆಗಳಿಗೂ ಅಷ್ಟೇ ಮಹತ್ವ ಮತ್ತು ಬೇಡಿಕೆ ಇದೆ.

ಹೆಣ್ಮಕ್ಕಳಿಗೆ ಗೌರವಾನ್ವಿತ ಕಳೆ ಬರೋದೂ ಕಾಟನ್‌ ಸೀರೆಗಳನ್ನು ಉಟ್ಟುಕೊಂಡಾಗ. ಹೀಗೆ ನೋಡಿದಾಗ ಕಾಟನ್‌ ಸೀರೆಗಳು ಸಾಮಾನ್ಯ ಅನಿಸಿದರೂ ಉಟ್ಟುಕೊಂಡರೆ ಅದರ ಸರಳ ಚೆಲುವೇ ಬೇರೆ! ನೋಡಲು ಸಿಂಪಲ್‌ ಆದರೂ ರಿಚ್‌ ಲುಕ್‌ ಇವುಗಳ ವೈಶಿಷ್ಟé. ಹೆಣ್ಮಕ್ಕಳಿಗೆ ಕಾಟನ್‌ ಸೀರೆ ಆಕರ್ಷಕ ವ್ಯಕ್ತಿತ್ವ ನೀಡುವುದರ ಜೊತೆಗೆ ಉಟ್ಟುಕೊಂಡಾಗ ನೀಟಾಗಿ ಕಾಣಿಸುತ್ತದೆ ಸಹ.

Advertisement

ಮೊದಲೆಲ್ಲ ಪ್ರೌಢ ವಯಸ್ಸಿನ ಹೆಣ್ಮಕ್ಕಳು ಹೆಚ್ಚು ಕಾಟನ್‌ ಸೀರೆಗಳನ್ನು ಹೆಚ್ಚು ಇಷ್ಟಪಡುತ್ತಿದ್ದರು. ಆದರೀಗ, ಕಾಟನ್‌ ಸೀರೆಗಳು ಎಲ್ಲ ವಯೋಮಾನದವರನ್ನೂ ಆಕರ್ಷಿಸುತ್ತಿವೆ. ಕಾರಣ, ಕಾಟನ್‌ ಸೀರೆಗಳು ದೇಹಕ್ಕೆ ಹಾಯಾದ ಅನುಭವ ನೀಡುವುದರ ಜೊತೆಗೆ ನೋಡಲು ಸುಂದರ, ಧರಿಸಲು ಹಿತವಾಗುವುದು. ಒಮ್ಮೆ ಒಗೆದು ಒಣಗಿಸಿದಾಗ ಕಾಟನ್‌ ಸೀರೆಯಿಂದ ಬರುವ ಹಿತವಾದ ಘಮಲು ಮತ್ತೆ ಮತ್ತೆ ಕಾಟನ್‌ ಸೀರೆಯನ್ನು ಉಡುವಂತೆ ಮಾಡುತ್ತದೆ. ಜೊತೆಗೆ ಕಾಟನ್‌ ಸೀರೆಗಳು ಎಲ್ಲ ಕಾಲಕ್ಕೂ ಒಪ್ಪುತ್ತವೆ. ಅದರಲ್ಲೂ ಬೇಸಿಗೆಯಲ್ಲಿ ಕಾಟನ್‌ ಸೀರೆಯಷ್ಟು ಕಂಫ‌ರ್ಟೆಬಲ್‌ ಆದ ಸೀರೆ ಮತ್ತೂಂದಿಲ್ಲ. ಐರನ್‌ ಹಾಕಿ ಉಟ್ಟರೆ ನೋಡಲು ಆಕರ್ಷಕವಾಗಿ ಕಾಣುವುದು. 

ಬಹುತೇಕ ಉದ್ಯೋಗಸ್ಥ ಮಹಿಳೆಯರು ಕಾಟನ್‌ ಸೀರೆಗಳನ್ನು ಇಷ್ಟಪಡುತ್ತಾರೆ. ಗೃಹಿಣಿಯರು ಕೂಡ ಇಷ್ಟಪಡುವ ಸೀರೆಯಿದು. ಉದ್ಯೋಗಕ್ಕೆ ತೆರಳುವಾಗ ಸಿಂಪಲ್‌ ಕಾಟನ್‌ ಸೀರೆ ಸಾಕು, ಅದೇ ಮದುವೆ, ಮತ್ತಿತರ ಸಮಾರಂಭಗಳಿಗೆ ಹೋಗುವಾಗ ಸ್ವಲ್ಪ$ಗ್ರ್ಯಾಂಡ್‌ ಸೀರೆ ಬೇಕಾಗುತ್ತವೆ. ಸಾಕಷ್ಟು ಮಹಿಳೆಯರು ಕಾಟನ್‌ ಸೀರೆ ಮೆಂಟೆನೆನ್ಸ್‌ ಕಷ್ಟ ಎಂಬ ಕಾರಣಕ್ಕೆ ದೂರವಿರುತ್ತಾರೆ. ಆದರೂ ಕಾಟನ್‌ ಸೀರೆಗಳೆಂದರೆ ಏನೋ ಒಂಥರಾ ಆತ್ಮೀಯತೆ.

ಕಾಟನ್‌ನಲ್ಲಿ ಬಗೆ ಬಗೆ
ಕಾಟನ್‌ನಲ್ಲಿ ಖಾದಿ, ಧಾರವಾಡ ಕಾಟನ್‌, ಬೆಂಗಾಲಿ ಕಾಟನ್‌, ಕಲ್ಕತ್ತಾ ಕಾಟನ್‌, ಫ್ಯಾಬ್ರಿಕ್‌ ಕಾಟನ್‌, ಕೋಟಾ, ಜಮದಾನಿ, ಪೋಚಂಪಲ್ಲಿ, ಬೂಮ್ಕಾಯ…, ಕೊಟಿR, ಸಂಬಾಲ್‌ಪುರಿ, ಚಂದೇರಿ, ಪಾಲಿಕಾಟನ್‌ ಹೀಗೆ ವಿವಿಧ ರೀತಿಯ ಕಾಟನ್‌ ಸೀರೆಗಳು ವಿವಿಧ ಬಣ್ಣಗಳು, ಡಿಸೈನ್‌ಗಳನ್ನು ಹೊಂದಿದ್ದು, ಉತ್ತಮ ಆಯ್ಕೆಗೆ ಸಹಕಾರಿ.

ಪಾಲಿಕಾಟನ್‌, ಪೋಚಂಪಲ್ಲಿ ಇತ್ಯಾದಿಗಳ ಆಯ್ಕೆ ಸ್ವಲ್ಪ$ತೆಳ್ಳಗಿರುವವರಿಗೆ ಸೂಕ್ತ. ಸ್ವಲ್ಪ ದಪ್ಪವಿರುವವರು ಧರಿಸಿದರೆ ಮತ್ತೂ ದಪ್ಪವಾಗಿ ಕಾಣುವರು. ಖಾದಿ, ಧಾರವಾಡ ಕಾಟನ್‌, ಕೊಲ್ಕತಾ ಕಾಟನ್‌, ಜಮದಾನಿ ಇವು ಆಫೀಸ್‌ವೇರ್‌ ಉತ್ತಮ. ಬೆಂಗಾಲಿ ಕಾಟನ್‌, ಪೋಚಂಪಲ್ಲಿ, ಕೋಟಾ ಸಂಬಾಲ್ಪುರಿ, ಚಂದೇರಿ ಇವು ಸಣ್ಣ ಪಾರ್ಟಿವೇರ್‌ಗೆ ಫ್ಯಾಶನ್‌ ಲುಕ್‌ ನೀಡುತ್ತವೆ.

ಕಾಟನ್‌ ಸೀರೆಗಳನ್ನು ಆಯ್ದುಕೊಳ್ಳುವಾಗ ಆದಷ್ಟು ತಿಳಿಬಣ್ಣದವುಗಳನ್ನು ಆರಿಸಿಕೊಂಡರೆ ಆಕರ್ಷಕವಾಗಿರುತ್ತದೆ. ಚಿಕ್ಕಿ ಗೆರೆಯಂಥ ಬಾರ್ಡರ್‌ ಇದ್ದರೆ ಚಿಕ್ಕ ವಯಸ್ಸಿನ ಹೆಣ್ಮಕ್ಕಳಿಗೆ ಕಳೆ ಬರುತ್ತದೆ. ಉದ್ದುದ್ದ ಅಥವಾ ಸಣ್ಣ ಚೆಕ್ಸ್‌ ಡಿಸೈನ್‌ನ ಸೀರೆಗಳೂ ಆಕರ್ಷಕ. ಪುಟ್ಟ ಪುಟ್ಟ ಹೂಗಳ ಪ್ರಿಂಟ್‌ ಇರುವವು ಇನ್ನೂ ಆಕರ್ಷಕ. ಸಿಂಪಲ್‌ ಚೈನ್‌ ಇಲ್ಲವೇ ಸಿಂಪಲ್‌ ದಾರದಲ್ಲಿ ಇರೋ ಲಾಂಗ್‌ ನೆಕ್‌ಪೀಸ್‌ಗೆ ದೊಡ್ಡ ಪೆಂಡೆಂಟ್‌ ಇದ್ದರೆ ಚೆನ್ನಾಗಿರುತ್ತದೆ.

ಹಳೆಯ ಕಾಟನ್‌ ಸೀರೆಯ ಉಪಯೋಗ 
ಹಳೆಯದಾಗಿ ಹರಿದ ಕಾಟನ್‌ ಸೀರೆಗಳ ಉಪಯೋಗವೂ ಹೇಳತೀರದು. ಹರಿದ ಕಾಟನ್‌ ಸೀರೆಗಳನ್ನು ನಾನಾ ಉದ್ದೇಶಗಳಿಗೆ ಬಳಕೆ ಮಾಡಬಹುದು. ಪುಟ್ಟ ಮಗುವನ್ನು ಸುತ್ತಿ ಮಲಗಿಸಲು, ನೆಲ ಒರೆಸಲು, ಬಿಸಿಯಾದ ಪಾತ್ರೆಗಳನ್ನು ಎತ್ತಿ ಕೆಳಗಿಳಿಸಲು ಉಪಯೋಗಿಸಬಹುದು. ಸೀರೆ ಬಣ್ಣ ಮಾಸಿದ್ದರೆ ಇಲ್ಲವೆ ಅರ್ಥ ಹರಿದಿದ್ದರೆ ಆ ಸೀರೆಯನ್ನು ಎಸೆಯಬೇಕಾಗಿಲ್ಲ. ಹರಿದ ಭಾಗಗಳನ್ನು ಕತ್ತರಿಸಿ ಚೆನ್ನಾಗಿರುವ ಭಾಗವನ್ನು ಚಿಕ್ಕಮಕ್ಕಳಿಗೆ ಅಂಗಿ ಹೊಲಿಸಿಕೊಳ್ಳಬಹುದು, ಕರ್ಟನ್‌, ಬೆಡ್‌ಶೀಟ್‌ಗಳನ್ನೂ ತಯಾರಿಸಬಹುದು. 

ಕಾಟನ್‌ ಸೀರೆಗಳ ನಿರ್ವಹಣೆ
.ಕಾಟನ್‌ ಸೀರೆಗಳನ್ನು ಮೊದಲ ಬಾರಿಗೆ ತೊಳೆಯಬೇಕಾದರೆ ಬಿಸಿ ನೀರಿಗೆ ಸ್ವಲ್ಪ ಕಲ್ಲುಪ್ಪು ಹಾಕಿ 10-15 ನಿಮಿಷ ನೆನೆಸಿಡಿ. ಇದು ಸೀರೆಯ ಬಣ್ಣ ಹೋಗದಂತೆ ತಡೆಯುತ್ತದೆ.
.ಒಗೆಯುವಾಗ ಬ್ರಶ್‌ ಮಾಡಬೇಡಿ, ಬೆಲೆಬಾಳುವ ಸೀರೆಗಳನ್ನು, ಮನೆಯÇÉೇ ಸ್ವತ್ಛಗೊಳಿಸಲಾಗದ ಸೀರೆಗಳನ್ನು ಡ್ರೈಕ್ಲೀನ್‌ ಮಾಡಿಸಿ.
.ಲಿಕ್ವಿಡ್‌ ಸ್ಟಾರ್ಚ್‌ ಅನ್ನು ಇಟ್ಟುಕೊಂಡಿರಿ. ಅದನ್ನು ನೀರಿಗೆ ಸೇರಿಸಿ ಅದರಲ್ಲಿ ಸೀರೆಯನ್ನು ನೆನೆಸಿ ಒಣಗಿಸಿ. ಆಗ ಸೀರೆಗಳು ಗರಿಗರಿಯಾಗಿ ಸ್ಟಿಫ್ ಆಗಿ ನಿಲ್ಲುತ್ತವೆ.
.ಅನ್ನ ಬಸಿದ ಗಂಜಿಗೆ ಸ್ವಲ್ಪ$ನೀರು ಬೆರೆಸಿಯೂ ಮನೆಯಲ್ಲಿಯೇ ಸ್ಟಾರ್ಚ್‌ ಮಾಡಬಹುದು. ಆದÃ ಒಗೆಯುವ ಮುನ್ನ ಬಣ್ಣ ಬಿಡುವುದೇ ಪರೀಕ್ಷಿಸಿಕೊಳ್ಳಿ.
.ಇಸಿŒ ಹಾಕಿದ ಮೇಲೆ ಹ್ಯಾಂಗರ್‌ಗೆ ನೇತು ಹಾಕಿಡಿ. ಆಗ ಇಸಿŒ ಹಾಳಾಗದೇ ಸೀರೆ ಸ್ಟಿಫ್ ಆಗಿ ನಿಲ್ಲುತ್ತದೆ. ಉಡದಿ¨ªಾಗ ಹೆಚ್ಚು ಮಡಿಕೆ ಮಾಡಿಡಬೇಡಿ, ಮಡಿಕೆ ಹಾಗೇ ಉಳಿಯುತ್ತದೆ.
 

Advertisement

Udayavani is now on Telegram. Click here to join our channel and stay updated with the latest news.

Next