Advertisement

ಮಲ್ಪೆ: ಸ್ಥಳೀಯರ ಎಚ್ಚರಿಕೆಗೆ ಕಿವಿಗೊಡದೆ ನೀರಿಗಿಳಿದ ಯುವತಿ ಸಮುದ್ರಪಾಲು, ಮೂವರ ರಕ್ಷಣೆ

12:44 PM Aug 01, 2021 | Team Udayavani |

ಉಡುಪಿ: ಯುವತಿಯೋರ್ವಳು ನೀರುಪಾಲಾದ ಘಟನೆ ಮಲ್ಪೆ ಕಡಲ ತೀರದಲ್ಲಿ ರವಿವಾರ ಸಂಭವಿಸಿದೆ.

Advertisement

ಮುಂಜಾನೆ ಕೊಡಗು ಮೂಲದ ಮೂವರು ಯುವತಿಯರು ಹಾಗೂ ಒರ್ವ ಯುವಕ ಆಗಮಿಸಿದ್ದರು. ಮಲ್ಪೆ ಬೀಚ್ ಆಗಮಿಸಿದ್ದ ಇವರು ನೀರಿನಲ್ಲಿ ಆಟವಾಡುತ್ತಿದ್ದರು. ಸ್ಥಳೀಯರು ನೀರಿಗೆ ಹೋಗದಂತೆ ಎಚ್ಚರಿಕೆ ನೀಡಿದ್ದರೂ ಇವರು ಕೇಳದೆ ಹೋದ ಪರಿಣಾಮ ಈ ದುರಂತ ಸಂಭವಿಸಿದೆ.

ಇದನ್ನೂ ಓದಿ:ಮೂಡಿಗೆರೆ : ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಕಾರು : ಉಡುಪಿ ಮೂಲದ ಪ್ರಯಾಣಿಕರು ಪಾರು

ನಾಲ್ಕು ಮಂದಿಯ ಪೈಕಿ ಒರ್ವ ಯುವತಿ ನಾಪತ್ತೆಯಾಗಿದ್ದರೆ, ಉಳಿದವರನ್ನು ಸ್ಥಳೀಯರು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಅವರನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next