Advertisement

Lady don: ದೆಹಲಿಯ ಬರ್ಗರ್ ಕಿಂಗ್ ಕೊಲೆ ಪ್ರಕರಣದಲ್ಲಿ ಬೇಕಾಗಿದ್ದ ಲೇಡಿ ಡಾನ್ ಅರೆಸ್ಟ್

10:21 AM Oct 26, 2024 | Team Udayavani |

ನವದೆಹಲಿ: ಪಶ್ಚಿಮ ದೆಹಲಿಯ ರಜೌರಿ ಗಾರ್ಡನ್ ಪ್ರದೇಶದ ಬರ್ಗರ್ ಕಿಂಗ್‌ನಲ್ಲಿ ನಡೆದ ವ್ಯಕ್ತಿಯೊಬ್ಬನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ದರೋಡೆಕೋರ ಹಿಮಾಂಶು ಭಾವುವಿನ ಸಹಚರಳನ್ನು ದೆಹಲಿ ಪೊಲೀಸರು ಶುಕ್ರವಾರ(ಅ.೨೫) ಬಂಧಿಸಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Advertisement

ಲೇಡಿ ಡಾನ್’ ಎಂದು ಕರೆಯಲ್ಪಡುವ ಅನು ಧನಕರ್‌(19) ನನ್ನು ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ಶುಕ್ರವಾರ ಪೊಲೀಸರು ಬಂಧಿಸಿದ್ದಾರೆ.

ಏನಿದು ಪ್ರಕರಣ:
ಜೂನ್ 18ರಂದು ರಾತ್ರಿ 9.30ರ ಸುಮಾರಿಗೆ ರಾಜೌರಿ ಗಾರ್ಡನ್‌ನಲ್ಲಿರುವ ಬರ್ಗರ್ ಕಿಂಗ್ ಔಟ್‌ಲೆಟ್‌ಗೆ ಬೈಕ್‌ನಲ್ಲಿ ಬಂದಿದ್ದ ಮೂವರು ಮುಸುಕುಧಾರಿಗಳು ಹೋಟೆಲ್ ಒಳಗೆ ಮಹಿಳೆಯ ಜೊತೆ ಕುಳಿತಿದ್ದ ಅಮನ್ ಎಂಬಾತನ ಮೇಲೆ ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದರು. ಘಟನೆಯಲ್ಲಿ ಅಮನ್ ಮೃತಪಟ್ಟಿದ್ದ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಹಲವರನ್ನು ಬಂಧಿಸಿದ್ದರು ಅಲ್ಲದೆ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿದ್ದ ಲೇಡಿ ಡಾನ್ ಅನು ಧನ್ಕರ್ ತಲೆಮರೆಸಿಕೊಂಡಿದ್ದಳು. ಈಕೆಯ ಪತ್ತೆಗೆ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದರು. ಅದರಂತೆ ಶುಕ್ರವಾರ ಉತ್ತರ ಪ್ರದೇಶದ ಲಖಿಂಪುರ್ ಖೇರಿಯಲ್ಲಿ ಬಂಧಿಸಿದ್ದಾರೆ.

ಇದನ್ನೂ ಓದಿ: Madikeri: ಕರ್ತವ್ಯನಿರತ ಪೊಲೀಸ್ ಸಿಬ್ಬಂದಿಯನ್ನು ಗಾಯಗೊಳಿಸಿದ ಬಂಟ್ವಾಳ ಮೂಲದ ಚಾಲಕನ ಬಂಧನ

Advertisement

Udayavani is now on Telegram. Click here to join our channel and stay updated with the latest news.

Next