ಹೊಳೆನರಸೀಪುರ: ಲೇಡಿ ಕಂಡಕ್ಟರ್ ಮೇಲೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ವಿದ್ಯಾರ್ಥಿಗಳಿಗೆ ಗ್ರಾಮಾಂತರ ಪೊಲೀಸರು ಬುದ್ಧಿವಾದ ಹೇಳಿ ಎಚ್ಚರಿಕೆ ನೀಡಿ ಘಟನೆ ಬುಧವಾರ ನಡೆಯಿತು.
ಮೈಸೂರಿನಿಂದ ಹಾಸನಕ್ಕೆ ತೆರಳುತ್ತಿದ್ದ ಸಾರಿಗೆ ಬಸ್ ದೊಡ್ಡ ಕಾಡನೂರು ಬಸ್ ನಿಲ್ದಾಣದದ ಬಳಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳಲು ನಿಲ್ಲಿಸಿದೆ. 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ಬಸ್ಸಿಗೆ ಹತ್ತಿದ್ದಾರೆ. ಟಿಕೆಟ್ ಪಡೆಯಿರಿ ಎಂದು ಲೇಡಿ ಕಂಡೆಕ್ಟರ್ ಹೇಳಿದ್ದಾರೆ.
ಆದರೆ ಯಾರೂ ಕೂಡ ಪಾಸ್ ತೋರಿಸದೇ ಟಿಕೆಟ್ ಪಡೆಯದೇ ಇದ್ದರು. ಇದರಿಂದ ಬಸ್ಸಿನಿಂದ ಕೆಳಗಿಳಿಯಿರಿ ಎಂದು ತಾಕೀತು ಮಾಡಿದ್ದಾರೆ. ಕೆರಳಿದ ವಿದ್ಯಾರ್ಥಿಗಳು ಲೇಡಿ ಕಂಡಕ್ಟರ್ ಅವರನ್ನು ಛೇಡಿಸಿದ್ದಾರೆ. ಇದನ್ನು ಕಂಡ ಚಾಲಕ ಬುದ್ಧಿ ಮಾತು ಹೇಳಲು ಬರುತ್ತಿದ್ದಂತೆ ಆತನ ಮೇಲೆ ವಿದ್ಯಾರ್ಥಿಗಳು ಹರಿಹಾಯ್ದಿದ್ದಾರೆ.
ಇದನ್ನು ಮನಗಂಡಿದ್ದ ಚಾಲಕ ಬಸ್ ಅನ್ನು ಪಟ್ಟಣದ ಗ್ರಾಮಾಂತರ ಠಾಣೆಗೆ ತಂದು ನಿಲ್ಲಿಸಿ ವಿದ್ಯಾರ್ಥಿಗಳ ಮೇಲೆ ಮೌಖಿಕ ದೂರು ನೀಡಿ ಕ್ರಮ ಕೈಗೊಳ್ಳವಂತೆ ಮನವಿ ಮಾಡಿದ್ದಾರೆ.
ಚಾಲಕ ಮತ್ತು ಲೇಡಿ ಕಂಡೇಕ್ಟರ್ ಅವರ ಮನವಿ ಪುರಸ್ಕರಿಸಿದ ಗ್ರಾಮಾಂತರ ಠಾಣೆ ಪೊಲೀಸರು ವಿದ್ಯಾರ್ಥಿಗಳಿಗೆ ವಿರುದ್ಧ ಕ್ರಮಕ್ಕೆ ಮುಂದಾಗಿದ್ದಾರೆ. ವಿದ್ಯಾರ್ಥಿಗಳು ಕ್ಷಮೆ ಕೋರಿ ಮುಚ್ಚಳಿಕೆ ಪತ್ರ ಬರೆದುಕೊಟ್ಟಿದ್ದಾರೆ.
ಕ್ಷಮಾಪಣೆ ಬರೆದುಕೊಟ್ಟ ವಿದ್ಯಾರ್ಥಿಗಳಿಗೆ ಪೊಲೀಸರು ಬುದ್ಧಿ ಮಾತು ಹೇಳಿ ಸೌಜನ್ಯದಿಂದ ವರ್ತಿಸಬೇಕು. ಯಾವುದೇ ದ್ವೇಷ ಸಾಧನೆ ಮಾಡಬೇಡಿ. ಇಲ್ಲಿಗೆ ಎಲ್ಲ ಮರೆತು ಒಳ್ಳೆ ದಾರಿಯಲ್ಲಿ ಮುನ್ನಡೆಯಿರಿ ಎಂದು ಬುದ್ಧಿ ಮಾತು ಹೇಳಿ ಬಿಟ್ಟು ಕಳುಹಿಸಿದ್ದಾರೆ.