Advertisement

ಇಬ್ಬರು ಮಕ್ಕಳೊಂದಿಗೆ ಬಾವಿಗೆ ಹಾರಿ ತಾಯಿ ಆತ್ಮಹತ್ಯೆ

08:57 AM Apr 21, 2020 | Hari Prasad |

ಮುಳಗುಂದ (ಗದಗ): ಮಹಿಳೆಯೊಬ್ಬರು ತನ್ನ ಇಬ್ಬರು ಮಕ್ಕಳೊಂದಿಗೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಜಿಲ್ಲೆಯ ಮುಳಗುಂದ ಸಮೀಪದ ಶಿರೋಳದಲ್ಲಿ ಸಂಭವಿಸಿದೆ.

Advertisement

ಮೃತರನ್ನು ಗ್ರಾಮದ ಚನ್ನಬಸವ್ವ ಬಸಯ್ಯ ದಂಡಿನ (40) ಮತ್ತು ಆಕೆಯ ಇಬ್ಬರು ಮಕ್ಕಳಾಗಿರುವ ಕೋಟ್ರಯ್ಯ (6) ಹಾಗೂ ಮಾಲಾ (5) ಎಂದು ಗುರುತಿಸಲಾಗಿದೆ.

ಶಿರೋಳ- ಮುಳಗುಂದ ರಸ್ತೆಯಲ್ಲಿರುವ ತಮ್ಮದೇ ತೋಟದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪ್ರಾಥಮಿಕ ಮಾಹಿತಿಗಳಿಂದ ತಿಳಿದು ಬಂದಿದೆ.

ಈ ಘಟನೆಗೆ ನಿಖರವಾದ ಕಾರಣ ಸದ್ಯಕ್ಕೆ ತಿಳಿದುಬಂದಿಲ್ಲ. ಸ್ಥಳಕ್ಕೆ ಮುಳಗುಂದ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next