Advertisement

ವಿದ್ಯಾರ್ಥಿನಿಲಯ ಕಟ್ಟಡ ಉದ್ಘಾಟನೆ ಭಾಗ್ಯ ಎಂದು?

04:44 PM Mar 22, 2021 | Team Udayavani |

ಶಿರಹಟ್ಟಿ: ಕಾಲೇಜು ಶಿಕ್ಷಣ ಇಲಾಖೆ ಬಡ ಎಸ್‌ಸಿ, ಎಸ್‌ಟಿ ವಿದ್ಯಾರ್ಥಿನಿಯರ ಪದವಿ ವ್ಯಾಸಂಗಕ್ಕೆ ಅನುಕೂಲ ಕಲ್ಪಿಸಲು 2017-18ನೇ ಸಾಲಿನಲ್ಲಿ99 ಲಕ್ಷ ರೂ. ವೆಚ್ಚದಲ್ಲಿ ಎಸ್‌ಸಿಪಿ, ಟಿಎಸ್‌ಪಿಯೋಜನೆಯಡಿ ಕಾಲೇಜು ಆವರಣದಲ್ಲಿನಿರ್ಮಿಸಿರುವ ಹಾಸ್ಟೆಲ್‌ ಕಟ್ಟಡಕ್ಕೆ ಇನ್ನೂ ಉದ್ಘಾಟನೆ ಭಾಗ್ಯ ಕೂಡಿ ಬಂದಿಲ್ಲ.

Advertisement

ಪಟ್ಟಣದಲ್ಲಿ ಪದವಿ ಕಾಲೇಜುಆರಂಭವಾಗಿದೆ. ಆದರೆ ಅಲ್ಲಿ ಓದುವ ಮಕ್ಕಳಿಗೆಹಾಸ್ಟೆಲ್‌ ಕಟ್ಟಡ ಉಪಯೋಗಕ್ಕೆ ಬಾರದ ಕಾರಣಪರಿತಪಿಸುವಂತಾಗಿದೆ. ಹಾಸ್ಟೆಲ್‌ ಆರಂಭವಾಗದ ಹಿನ್ನೆಲೆಯಲ್ಲಿ ತಾಲೂಕಿನ ಅನೇಕ ಮಂದಿ ಬಡಎಸ್‌ಸಿ, ಎಸ್‌ಟಿ ವಿದ್ಯಾರ್ಥಿನಿಯರು ಬಸ್‌ಮೂಲಕ ಕಾಲೇಜಿಗೆ ಹೋಗಿ ಬರುವುದುತೊಂದರೆಯಾಗುತ್ತದೆ ಎಂದು ಕಾಲೇಜು ಮೆಟ್ಟಿಲುಹತ್ತುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆಂಬ ಮಾತುಗಳು ಕೇಳಿ ಬರುತ್ತಿವೆ.

ಮೂಲ ಸೌಕರ್ಯವಿಲ್ಲ: ಹಾಸ್ಟೆಲ್‌ ಕಟ್ಟಡಕಟ್ಟಿದ್ದಾರೆ ಆದರೆ ಅದಕ್ಕೆ ಬೇಕಾದ ವಾರ್ಡನ್‌, ಅಡುಗೆಯವರು, ಅಡುಗೆ ಸಾಮಗ್ರಿ, ವಿದ್ಯಾರ್ಥಿಗಳು ವಾಸಕ್ಕೆ ಅನುಕೂಲವಾದ ಕಾಟ್‌ ಗಳು, ಹಾಸಿಗೆಗಳು ಮುಂತಾದ ಯಾವುದೇಸೌಲಭ್ಯಗಳಿಲ್ಲದೇ ಕಟ್ಟಡ ಸಿದ್ಧವಾಗಿ ನಿಂತಿದೆ.

ಹಾಸ್ಟೆಲ್‌ ಆರಂಭ ಯಾವಾಗ?: ಹಾಸ್ಟೆಲ್‌ ನಿರ್ಮಾಣವಾಗಿ ಸುಮಾರು 3 ವರ್ಷಗಳೇ ಗತಿಸಿದರೂ ಈವರೆಗೂ ಉದ್ಘಾಟನೆ ಭಾಗ್ಯ ಕಂಡಿಲ್ಲ. ಜತೆಗೆ ಪದವಿ ಕಾಲೇಜು ಆರಂಭವಾಗಿದ್ದರೂ ಬಡ ಹೆಣ್ಣು ಮಕ್ಕಳಿಗೆ ಸೌಲಭ್ಯ ಸಿಗದಿರುವುದುನೋವಿನ ಸಂಗತಿ. ಬಡ ವಿದ್ಯಾರ್ಥಿನಿಯರು ಹಾಸ್ಟೆಲ್‌ ಯಾವಾಗ ಆರಂಭವಾಗುವುದೆಂದು ಕಾದು ಕುಳಿತುಕೊಳ್ಳುವಂತಾಗಿದೆ.

ತಾಲೂಕು ಕೇಂದ್ರದ ನಿರ್ಲಕ್ಷ್ಯ: ಶಿರಹಟ್ಟಿ ತಾಲೂಕು ಕೇಂದ್ರದಲ್ಲಿ ಎಸ್‌ಎಸ್‌ಎಲ್‌ಸಿನಂತರದ ಬಡ ಎಸ್‌ಸಿ, ಎಸ್‌ಟಿ ವಿದ್ಯಾರ್ಥಿನಿ/ವಿದ್ಯಾರ್ಥಿಗಳಿಗೆ ಸೌಕರ್ಯವಿಲ್ಲದೇಪರಸ್ಥಳವನ್ನೇ ಅವಲಂಬಿಸಬೇಕಿದೆ. ತಾಲೂಕು ಕೇಂದ್ರದಲ್ಲಿ ಇರಬೇಕಾದ ಕನಿಷ್ಠ ಸೌಲಭ್ಯದಿಂದವಂಚಿತವಾಗಿರುವುದರಿಂದ ಜನಪ್ರತಿನಿಧಿ ಗಳು, ಅಧಿ ಕಾರಿಗಳು ಸಾರ್ವಜನಿಕರ ಕೆಂಗಣ್ಣಿಗೆಗುರಿಯಾಗಿದ್ದಾರೆ. ಪಕ್ಕದ ತಾಲೂಕಿನಲ್ಲಿ ಎಲ್ಲರೀತಿಯ ಶೈಕ್ಷಣಿಕ ಸೌಲಭ್ಯಗಳಿದ್ದರೂ ಶಿರಹಟ್ಟಿಪಟ್ಟಣಕ್ಕೆ ಈ ಭಾಗ್ಯ ಏಕಿಲ್ಲ ಎನ್ನುವುದು ತಾಲೂಕಿನ ಬಡ ಪದವಿ ವಿದ್ಯಾರ್ಥಿಗಳ ಅಳಲಾಗಿದೆ.

Advertisement

ಗ್ರಾಮೀಣ ಪ್ರದೇಶದ ವಿದ್ಯಾರ್ಥಿನಿಯರಿಗೆ ಹಾಸ್ಟೆಲ್‌ ಕಟ್ಟಡ ನಿರ್ಮಾಣವಾದರೆ ಸಾಲದು. ಅದಕ್ಕೆ ಬೇಕಾದ ಅಗತ್ಯ ಮೂಲ ಸೌಲಭ್ಯಗಳನ್ನುಒದಗಿಸದಿದ್ದರೆ ಹಾಸ್ಟೆಲ್‌ನಿರ್ಮಿಸಿರುವ ಉದ್ದೇಶ ಸಾಕಾರ ಗೊಳ್ಳುವುದಿಲ್ಲ. ಸಂಬಂಧಿಸಿದ ಅಧಿಕಾರಿಗಳುಕೂಡಲೇ ಹಾಸ್ಟೆಲ್‌ ಆರಂಭಿಸಿ ಗ್ರಾಮೀಣ ಭಾಗದ ಎಸ್‌ಸಿ,ಎಸ್‌ಟಿ ಬಡ ವಿದ್ಯಾರ್ಥಿನಿಯರಿಗೆ ಅನುಕೂಲ ಕಲ್ಪಿಸಬೇಕು. -ವಿಶ್ವನಾಥ ಕಪ್ಪತ್ತನವರ, ಜಿಪಂ ಮಾಜಿ ಅಧ್ಯಕ್ಷ

ಕಾಲೇಜು ಶಿಕ್ಷಣ ಆಯುಕ್ತರು ಹಾಸ್ಟೆಲ್‌ ಅನ್ನುಸಮಾಜ ಕಲ್ಯಾಣ ಇಲಾಖೆ ಸುಪರ್ದಿಗೆವಹಿಸಿಲು ಸೂಚಿಸಿದ್ದರು. ಆದರೆ, ಸಮಾಜಕಲ್ಯಾಣ ಇಲಾಖೆಯವರು ನಮಗೆ ಕೆಲವು ಷರತ್ತುಬದ್ಧ ಪತ್ರ ನೀಡಿದ್ದರು. ಅದರ ಪ್ರಕಾರ ಹಾಸ್ಟೆಲ್‌ಪ್ರದೇಶದಲ್ಲಿ ಬೋರವೆಲ್‌, ನೀರಿನ ಸಂಪು, ಸುತ್ತಲೂಕಾಂಪೌಂಡ್‌, ಹಾಸ್ಟೆಲ್‌ಗಾಗಿ 20 ಗುಂಟೆ ಜಾಗೆ ಮತ್ತುಸಂಪೂರ್ಣ ಮಾಲಿಕತ್ವ ಸಮಾಜ ಕಲ್ಯಾಣ ಇಲಾಖೆಗೆವಹಿಸಿಕೊಡಬೇಕೆಂದು ಕೇಳಿದ್ದರು. ಹಾಗಾಗಿ, ಆಪತ್ರದ ಜೊತೆಗೆ ಮುಂದಿನ ಕ್ರಮಕ್ಕಾಗಿ ಕಾಲೇಜುಶಿಕ್ಷಣ ಆಯುಕ್ತರಿಗೆ ಒಂದು ವರ್ಷದ ಹಿಂದೆಯೇ ಪತ್ರ ಬರೆಯಲಾಗಿದೆ. ಈವರೆಗೆ ಯಾವುದೇ ಉತ್ತರ ಬಾರದ್ದರಿಂದ ಮುಂದಿನ ಕಾರ್ಯಗಳು ಸ್ಥಗಿತಗೊಂಡಿವೆ. -ಡಾ|ಶಂಕರ ಶಿರಹಟ್ಟಿ, ಪದವಿ ಕಾಲೇಜು ಪ್ರಾಚಾರ್ಯರು

 

-ಪ್ರಕಾಶ ಶಿ.ಮೇಟಿ

Advertisement

Udayavani is now on Telegram. Click here to join our channel and stay updated with the latest news.

Next