Advertisement
ವಿಜಯನಗರದಲ್ಲಿರುವ “ಕೆಫೆ ಉಡುಪಿ ರುಚಿ’, ಮಹಿಳಾ ಮಣಿಗಳದ್ದೇ ಪಾಕಶಾಲೆ. ಮಾಲೀಕರಿಂದ ಹಿಡಿದು, ಸರ್ವ್ ಮಾಡುವವರು, ಸ್ವತ್ಛಗೊಳಿಸುವವರು… ಇಲ್ಲಿ ಎಲ್ಲ ಪಾತ್ರವನ್ನು ನಿರ್ವಹಿಸುವುದು ಮಹಿಳೆಯರೇ. ಅಪ್ಪಟ ಕರಾವಳಿ ರುಚಿಯನ್ನು ಉಣಬಡಿಸುವ ಈ ಹೋಟೆಲ್‌ನಲ್ಲಿ, ಶಿಸ್ತಿಗೆ ಹೆಚ್ಚು ಪ್ರಾಮುಖ್ಯತೆ ನೀಡಲಾಗಿದೆ. ಎಲ್ಲೋ ಫಾರಿನ್ ಹೋಟೆಲ್‌ನಲ್ಲಿ ಕುಳಿತು, ಆಹಾರ ಸವಿದ ಭಾವ.ಲಲಿತಾರಾವ್ ಸಾಹೇಬ ಅವರ ಕನಸಿನ ಕೂಸು “ಕೆಫೆ ಉಡುಪಿ ರುಚಿ’. ಇದು ಶುರುವಾಗಿದ್ದು, 2014ರಲ್ಲಿ. ಕೇವಲ ಐದೇ ಐದು ವರ್ಷಗಳಲ್ಲಿ ಈ ಕೆಫೆ ವಿಜಯನಗರದ ಜನತೆಯ ನೆಚ್ಚಿನ ಹೋಟೆಲ್ ಆಯಿತು. 18 ಮಹಿಳಾ ಸಿಬ್ಬಂದಿ, ಈ ಹೋಟೆಲ್‌ನ ಯಶಸ್ಸಿನ ಹಿಂದಿರುವ ಶಕ್ತಿ. ಇಲ್ಲಿನ ಕೆಲಸಗಾರರು ಯಾವುದೇ ಹೋಟೆಲ್ ಮ್ಯಾನೆಜ್‌ಮೇಂಟ್ ಕೋರ್ಸ್‌ಗಳನ್ನು ಒದಿದವರಲ್ಲ. ಬದಲಾಗಿ ಕಡಿಮೆ ಶಿಕ್ಷಣ ಪಡೆದವರು. “ಜನರ ಹಸಿವು ನೀಗಿಸುವ ಕೆಲಸದ ಜೊತೆಜೊತೆಗೇ, ಮಹಿಳೆಯರನ್ನು ಸಶಕ್ತರನ್ನಾಗಿಸುವ ಕಾರ್ಯವನ್ನೂ ಮಾಡುತ್ತಿದ್ದೇವೆ’ ಎನ್ನುತ್ತಾರೆ, ಲಲಿತಾ.
ಪ್ರತಿ ಮಂಗಳವಾರದಂದು ಕೆಫೆಯಲ್ಲಿ “ಟ್ಯೂಸ್‌ಡೇ ಟ್ರೀಟ್’ ಹೆಸರಲ್ಲಿ, ಗ್ರಾಹಕರಿಗೆ ವಿಶೇಷ ಡಿಸ್ಕೌಂಟ್ ನೀಡಲಾಗುತ್ತದೆ. ಅದೇನೆಂದರೆ, ವಾರದ ಹಿಂದೆಯೇ ಮೂರು ಅಕ್ಷರಗಳನ್ನು ಆಯ್ಕೆ ಮಾಡಿ, ಅದನ್ನು ಫೇಸ್‌ಬುಕ್ ಮತ್ತು ಕೆಫೆಯ ಡಿಸ್‌ಪ್ಲೇನಲ್ಲಿ ಘೋಷಿಸುತ್ತಾರೆ. ಉದಾ: ಈ ವಾರದ ಅಕ್ಷರ “WIN’ ಅಂತಿದ್ದರೆ, ಕೆಫೆಗೆ ಬರುವ ಗ್ರಾಹಕರ ಹೆಸರಿನಲ್ಲಿ ಆ 3 ಅಕ್ಷರ ಕ್ರಮವಾಗಿ ಇರಬೇಕು. ಉದಾಹರಣೆ: ASH’WIN’I. ಆ ಗ್ರಾಹಕರು ತಮ್ಮ ಗುರುತಿನ ಚೀಟಿ ತೋರಿಸಿ, ಉಚಿತವಾಗಿ ಊಟ ಮಾಡಬಹುದು. ಆದರೆ, ಊಟವನ್ನು ಬೇರೆಯವರೊಂದಿಗೆ ಶೇರ್ ಮಾಡುವಂತಿಲ್ಲ ಮತ್ತು ವ್ಯರ್ಥ ಮಾಡುವಂತಿಲ್ಲ. ಒಂದುವೇಳೆ, ಊಟ ಚೆಲ್ಲಿದರೆ ಪೂರ್ತಿ ಹಣ ಪಾವತಿಸಬೇಕು. ಪ್ರತಿ ಟ್ಯೂಸ್‌ಡೇ ಟ್ರೀಟ್‌ನಲ್ಲಿ 50-65 ಗ್ರಾಹಕರು ಇರುತ್ತಾರೆ. ಒಂದು ಬಾರಿ ಮಾತ್ರ 250 ಜನ ಟ್ರೀಟ್ ಪಡೆದಿದ್ದರಂತೆ.
Related Articles
Advertisement
ಇಲ್ಲಿನ ಸ್ಪೆಷೆಲ್ ಏನು?ದೋಸಾ ಬರ್ಗರ್ ಅನ್ನು ಇಲ್ಲಿ ಒಮ್ಮೆಯಾದರೂ ಚಪ್ಪರಿಸಲೇಬೇಕು. ಉಪ್ಪುಪುಳಿ ದೋಸಾ, ಮ್ಲಪೇರೋಲ್ (ಸ್ವೀಟ್), ಗುಳ್ಳಾ ಡಿಪ್ ದೋಸಾ, ಕುಡ್ಲಾ ಐಸ್‌ಕ್ರೀಮ್… ಹೀಗೆ ಕರಾವಳಿ ರುಚಿಗಳಿಗೆ ವಿಭಿನ್ನ ಸ್ಪರ್ಶ ನೀಡಲಾಗಿದೆ. ಎಲ್ಲಿದೆ?
ವಿಜಯನಗರ ಮೆಟ್ರೋ ಸ್ಟೇಷನ್ ಸಮೀಪ, ಸರ್ವೀಸ್ ರಸ್ತೆ ಭಾಗ್ಯ ಎಸ್. ಬುಳ್ಳಾ