ಹೊಸದಿಲ್ಲಿ: ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದಾದ ವೇಳೆಯಲ್ಲಿ ಲೋಕಸಭೆಯಲ್ಲಿ ತನ್ನ ಅದ್ಭುತ ಭಾಷಣದಿಂದ ದೇಶದ ಗಮನ ಸೆಳೆದಿದ್ದ ಲಡಾಕ್ ಸಂಸದ ಜಮ್ಯಾಂಗ್ ಸೆರಿಂಗ್ ನಂಗ್ಯಾಲ್ ಈ ಮತ್ತೆ ಸುದ್ದಿಯಲ್ಲಿದ್ದಾರೆ. ಕರ್ನಾಟಕದಿಂದ ಲೋಕಸಭೆಗೆ ಆಯ್ಕೆಯಾಗಿರುವ ಏಕೈಕ ಕಾಂಗ್ರೆಸ್ ಸಂಸದ ಡಿ ಕೆ ಸುರೇಶ್ ಅವರನ್ನು ನಂಗ್ಯಾಲ್ ಬಿಜೆಪಿಗೆ ಸೇರಿಕೊಳ್ಳಿ ಎಂದು ಆಹ್ವಾನಿಸಿದ್ದಾರೆ.
ಸದ್ಯ ಲೋಕಸಭೆಯಲ್ಲಿ ಅಧಿವೇಶನ ನಡೆಯುತ್ತಿದೆ. ಇಲ್ಲಿನ ಬಿಡುವಿನ ವೇಳೆಯಲ್ಲಿ ಕರ್ನಾಟಕದ ಸಂಸದರಾದ ಪ್ರತಾಪ್ ಸಿಂಹ, ತೇಜಸ್ವಿ ಯಾದವ್ ಮತ್ತು ಡಿ ಕೆ ಸುರೇಶ್ ಜೊತೆಗೆ ಜಮ್ಯಾಂಗ್ ಸೆರಿಂಗ್ ನಂಗ್ಯಾಲ್ ಕಾಲ ಕಳೆದಿದ್ದಾರೆ.
ಈ ಬಗ್ಗೆ ಟ್ವಿಟ್ಟರ್ ನಲ್ಲಿ ನಂಗ್ಯಾಲ್ ಹಂಚಿಕೊಂಡಿದ್ದಾರೆ. ಮೂವರು ಕನ್ನಡಿಗರು ನನಗೆ ಕನ್ನಡ ಕಲಿಸಲು ಪ್ರಯತ್ನಿಸುತ್ತಿದ್ದಾರೆ. ಡಿ ಕೆ ಸುರೇಶ್ ಅವರಿಗೆ ನಾನು ಬಿಜೆಪಿ ಸೇರಿಕೊಳ್ಳಿ ಎಂದು ಹೇಳಿದೆ ಎಂದು ನಂಗ್ಯಾಲ್ ಟ್ವಿಟ್ಟರ್ ನಲ್ಲಿ ಸೆಲ್ಫಿ ಫೋಟೊದೊಂದಿಗೆ ಶೇರ್ ಮಾಡಿದ್ದಾರೆ.