Advertisement
ಲಡಾಖ್ ಸೋಲಾರ್ ಪಾರ್ಕ್ ಜತೆಗೆ, ಲಡಾಖ್‌ನಿಂದ ಉತ್ತರಕ್ಕೆ 200 ಕಿ.ಮೀ. ದೂರದಲ್ಲಿರುವ ಕಾರ್ಗಿಲ್‌ನ ಸೇನಾ ಶಿಬಿರಕ್ಕಾಗಿ 2,500 ಮೆ.ವ್ಯಾಟ್‌ಗಳ ಮತ್ತೂಂದು ಸೌರ ಪಾರ್ಕ್ ನಿರ್ಮಿಸಲಾಗುತ್ತಿದೆ. ಈ ಎರಡೂ ಯೋಜನೆಗಳ ವೆಚ್ಚ ಅಂದಾಜು 45,000 ಕೋಟಿ ರೂ. ಆಗಿದ್ದು, 2023ರಲ್ಲಿ ದೇಶಕ್ಕೆ ಸಮರ್ಪಣೆ ಗೊಳ್ಳುವ ನಿರೀಕ್ಷೆಯಿದೆ. ಪರಿಸರಕ್ಕೂ ಅನುಕೂಲ: ಲಡಾಖ್‌ನಲ್ಲಿ ನಿತ್ಯವೂ ವಿದ್ಯುತ್ತಿಗಾಗಿ ಡೀಸೆಲ್ ಇಂಜಿನ್ ಮೇಲೆ ಅವಲಂಬನೆ ಆಗಬೇಕಿರುವು ದರಿಂದ ಅಪಾರ ಡೀಸೆಲ್ ಖರ್ಚಾಗುತ್ತಿದೆ. ಜತೆಗೆ, ವರ್ಷಕ್ಕೆ ಸುಮಾರು 12,750 ಟನ್ ಇಂಗಾಲ ಪರಿಸರಕ್ಕೆ ಸೇರ್ಪಡೆಗೊಳ್ಳುತ್ತಿದೆ. ಸೋಲಾರ್ ಪಾರ್ಕ್ ಈ ಸಮಸ್ಯೆಗಳಿಗೆ ಇತಿಶ್ರೀ ಹಾಡಲಿದೆ.