ಬಳ್ಳಾರಿ: ಜಿಂದಾಲ್ ಸಂಸ್ಥೆ ಸಂಡೂರು ತಾಲೂಕಿನಲ್ಲಿ ಸಾಕಷ್ಟು ಜಮೀನು ವಶಪಡಿಸಿಕೊಂಡಿದೆ. ಇದಕ್ಕೆ ಅಲ್ಲಿನ ಶಾಸಕರು ಧ್ವನಿ ಎತ್ತಬೇಕು. ಜಿಂದಾಲ್ ಸಂಸ್ಥೆಯಲ್ಲಿ ಉದ್ಯೋಗ ನೀಡುವಂತೆ ಹಲವಾರು ಬಾರಿ ಶಿಫಾರಸು ಪತ್ರ ಕಳುಹಿಸಲಾಗಿದೆ. ಒಂದು ಪತ್ರಕ್ಕೂ ಪ್ರತಿಕ್ರಿಯೆ ನೀಡಿಲ್ಲ ಎಂದು ವಿಜಯನಗರ ಶಾಸಕ ಆನಂದ್‌ಸಿಂಗ್ ಆರೋಪಿಸಿದರು.
ಮಾಜಿ ಶಾಸಕ ಅನಿಲ್ ಲಾಡ್ ಮಾತನಾಡಿ, ಜಿಂದಾಲ್ ಸಂಸ್ಥೆಗೆ ಜಮೀನು ಪರಭಾರೆ ಮಾಡಲು ಹೊರಟಿರುವ ರಾಜ್ಯ ಸರ್ಕಾರ ಎಕರೆ ಜಮೀನಿಗೆ ಕೇವಲ 1.22 ಲಕ್ಷ ರೂ. ನಿಗದಿಪಡಿಸಿದೆ. ಒಟ್ಟು 3667 ಎಕರೆಗೆ ಕೇವಲ 43.99 ಕೋಟಿ ರೂ. ಆಗಲಿದೆ. ಆದರೆ, ಇದೇ ಜಮೀನನ್ನು ಜಿಂದಾಲ್ಗೆ ಪರಭಾರೆಯಾಗಿ ಜಿಂದಾಲ್ನವರು ಬ್ಯಾಂಕ್‌ನಲ್ಲಿ ಅಡವಿಟ್ಟು ಸಾಲ ಪಡೆದರೆ ಸಾವಿರಾರು ಕೋಟಿ ರೂ. ಸಾಲ ದೊರೆಯಲಿದೆ. 3667 ಎಕರೆ ಜಮೀನು ವಾಣಿಜ್ಯಕ್ಕೆಂದು ಪರಿವರ್ತಿಸಲಾಗಿರುವ ಹಿನ್ನೆಲೆಯಲ್ಲಿ ಜಿಂದಾಲ್ನವರು ಕೊಲೆಟ್ರಾಲ್ ಜಮೀನನ್ನಾಗಿ ಎಕರೆಗೆ 50 ಲಕ್ಷ ರೂ. ಬೆಲೆ ನಿಗದಿಪಡಿಸಿ ಬ್ಯಾಂಕ್‌ನಲ್ಲಿ ಅಡವಿಟ್ಟರೆ 1866 ಕೋಟಿ ರೂ. ಸಾಲ ದೊರೆಯಲಿದೆ. ಲೆಕ್ಕಪರಿಶೋಧಕರಿಂದ ಆಡಿಟಿಂಗ್ ಮಾಡಿಸಿ ಎಕರೆಗೆ 1 ಕೋಟಿ ರೂ. ಬೆಲೆ ನಿಗದಿಪಡಿಸಿ ಬ್ಯಾಂಕ್‌ನಲ್ಲಿ ಅಡವಿಟ್ಟರೂ 3667 ಕೋಟಿ ರೂ. ಸಾಲ ಲಭ್ಯವಾಗಲಿದೆ. ಜಿಂದಾಲ್ ಸಂಸ್ಥೆಗೆ ಲಾಭ ಒದಗಿಸಿಕೊಡಲು ರಾಜ್ಯ ಸರ್ಕಾರವೇ ಪರೋಕ್ಷವಾಗಿ ಬೆಂಬಲಿಸುತ್ತಿದೆ. ಆದ್ದರಿಂದ ಹಣಕಾಸು ಇಲಾಖೆ ಕಾರ್ಯದರ್ಶಿಗಳು ಜಮೀನು ಪರಭಾರೆ ಮಾಡದೆ ಲೀಜ್ ಮುಂದುವರಿಸಬೇಕು. ಯಾವುದೇ ಬ್ಯಾಂಕ್‌ನಲ್ಲಿ ಸಾಲಕ್ಕಾಗಿ ಅಡಮಾನವಿಡಬಾರದೆಂಬ ಷರತ್ತು ವಿಧಿಸಬೇಕೆಂದು ಒತ್ತಾಯಿಸಿದರು.
ಪಾಲಿಕೆ ಸದಸ್ಯೆ ಪರ್ವಿನ್‌ಬಾನು, ಲಾರಿ ಮಾಲೀಕರ ಸಂಘದ ಅಧ್ಯಕ್ಷ ವೆಂಕಟರಾವ್, ಹರ್ಷದ್, ವೆಂಕಟೇಶ್ ಹೆಗಡೆ, ರಾಮಕೃಷ್ಣ, ಸೋಮಶೇಖರ್ ಸೇರಿದಂತೆ ಹಲವರು ಸುದ್ದಿಗೋಷ್ಠಿಯಲ್ಲಿ ಇದ್ದರು.
Advertisement
ಸೋಮವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಡೂರು ಶಾಸಕ, ಸಚಿವ ತುಕಾರಾಂ ಪತ್ರ ಕೊಟ್ಟರೂ ಆಗಲ್ಲ. ಖುದ್ದಾಗಿ ಹೋಗಿ ಭೇಟಿಯಾದರೆ ಮಾತ್ರ ಕೆಲಸಗಳು ಆಗುತ್ತವೆ ಎಂದು ಹೇಳಿದರು.
ಜಿಲ್ಲೆಯ ಸಂಡೂರು ತಾಲೂಕು ವ್ಯಾಪ್ತಿಯಲ್ಲಿನ ಜಿಂದಾಲ್ ಸಂಸ್ಥೆ ಸುತ್ತಮುತ್ತಲಿನ ಹಳ್ಳಿಗಳಲ್ಲಿ ‘ರಿಪಬ್ಲಿಕ್ ಆಫ್ ಜಿಂದಾಲ್ SNG-QTS ಆಗಿದೆ. ಸುತ್ತಮುತ್ತಲ ಹಳ್ಳಿಗಳಲ್ಲಿ ಯಾವುದೇ ಸಭೆ-ಸಮಾರಂಭಗಳು ನಡೆಯುವಂತಿಲ್ಲ. ಒಂದು ವೇಳೆ ನಡೆದರೂ ಯಾರೊಬ್ಬರೂ ಮಾತನಾಡುವಂತಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರಿಗೂ ಮಾತನಾಡುವ ಹಕ್ಕಿದೆ. ಜಿಂದಾಲ್ ಸುತ್ತಮುತ್ತ ಮಾತನಾಡಲು ಸ್ಥಳೀಯರೇ ಆಗಿರಬೇಕು. ಒಂದು ವೇಳೆ ಬೇರೆಯವರು ಮಾತನಾಡಿದರೆ ಅಲ್ಲಿನ ಪೊಲೀಸರೇ ಮೊದಲು ನೀನಾರು? ಎಲ್ಲಿಂದ ಬಂದಿದ್ದೀಯಾ? ಎಂದು ಬೆದರಿಸಿ ಕಳುಹಿಸುತ್ತಾರೆ. ಬೇರೆಯವರಿಗೆ ಮಾತನಾಡಲು ಅವಕಾಶವೇ ಇಲ್ಲ. ಅಲ್ಲಿನ ಪೊಲೀಸರೇ ಜಿಂದಾಲ್ ಸಂಸ್ಥೆ ರಕ್ಷಣೆಗೆ ನಿಂತಿದ್ದಾರೆ. •ಬಿ.ಎಸ್.ಆನಂದ್‌ಸಿಂಗ್, ಶಾಸಕರು, ವಿಜಯನಗರ (ಹೊಸಪೇಟೆ) ಕ್ಷೇತ್ರ.