Advertisement
ಬೆಳಗ್ಗೆಯಿಂದಲೇ ಕರೆಯ ನೀರು ಹಾಗೂ ದಡದಲ್ಲಿ ದಟ್ಟಾವಾಗಿ ಬೆಳೆದಿದ್ದ ಕಳೆ ಕಿತ್ತು, ನೀರನ್ನು ಸಂಪೂರ್ಣವಾಗಿ ಸ್ವತ್ಛಗೊಳಿಸುವ ಪ್ರಯತ್ನ ನಡೆಸಿದರು. ಈ ಮೂಲಕ ಸೈನಿಕರು ದೇಶದ ಗಡಿ ಕಾಯುವುದು ಮಾತ್ರವಲ್ಲದೇನೈಸರ್ಗಿಕ ಸಂಪನ್ಮೂಲಗಳ ರಕ್ಷಣೆಗೂ ಮುಂದಿದ್ದೇವೆ ಎಂಬುದನ್ನು ಸಾಬೀತು ಮಾಡಿದರು.
ಬಳಸಿಕೊಳ್ಳುತ್ತಾರೆ. ಕಳೆದ ಕೆಲವು ವರ್ಷಗಳಿಂದ ಒಳಚರಂಡಿ ನೀರು ನೇರವಾಗಿ ಕೆರೆಗೆ ಹರಿದುಬರುತ್ತಿರುವುದರಿಂದ ನೀರು ಕಲುಷಿತವಾಗಿರುವ ಜತೆಗೆ ಪಾಚಿ ಹಾಗೂ ಅನುಪಯುಕ್ತ ವಸ್ತುಗಳು ತುಂಬಿಕೊಂಡಿದ್ದವು. ಆಗಾಗೇ ಸ್ವತ್ಛತಾ ಕಾರ್ಯ ನಡೆಸುತ್ತಿದ್ದರೂ, ತ್ಯಾಜ್ಯ ಬೀಳುವ ಪ್ರಮಾಣ ಮಾತ್ರ ಕಡಿಮೆಯಾಗಿಲ್ಲ. ಇದು ಕೆರೆಯ ಸುತ್ತಲಿನ ಪರಿಸರ ಕಲುಷಿತವಾಗುವಂತೆ ಮಾಡಿದೆ. ಕೆರೆಗೆ ಯಾವುದೇ ರೀತಿಯಲ್ಲೂ ಅನಾಹುತ ಆಗದಂತೆ ಸೈನಿಕರು ಎಷ್ಟೇ ಜಾಗೃತಿ ಹಾಗೂ ಎಚ್ಚರ ವಹಿಸಿದರೂ, ಬೇರೆ ಬೇರೆ ಮೂಲಗಳಿಂದ ಕಲುಷಿತವಾಗುತ್ತಲೇ ಇದೆ.
ಹೀಗಾಗಿ ಆಗಾಗ ಸ್ವತ್ಛತಾ ಕಾರ್ಯವನ್ನು ಮಾಡುತ್ತಿರುತ್ತಾರೆ. ಅದರ ಮುಂದುವರಿದ ಭಾಗವಾಗಿ ಬುಧವಾರ ನಿರಂತರ ಶ್ರಮದಾನ ಮೂಲಕ ಕೆರೆ ಸ್ವತ್ಛತೆ ಮಾಡಿದ್ದಾರೆ. ದೋಣಿ ಸಹಿತವಾಗಿ ವಿವಿಧ ಪರಿಕರಗಳನ್ನು ಬಳಸಿಕೊಂಡು ಕೆರೆಯ ಸ್ವತ್ಛತಾ ಕಾರ್ಯ ನಡೆಸಿ, ವಿವಿಧ ತ್ಯಾಜ್ಯ ವಸ್ತುಗಳನ್ನು ಕೆರೆಯಿಂದ ಮೇಲೆ ತೆಗೆದಿದ್ದಾರೆ.