Advertisement

ನಿರುತ್ಸಾಹದ ವಹಿವಾಟು : ಮುಂಬಯಿ ಶೇರು ಅಲ್ಪ ಮುನ್ನಡೆ

04:35 PM Aug 22, 2017 | |

ಮುಂಬಯಿ : ನಿರುತ್ಸಾಹದಿಂದ ಸಾಗಿದ ವಹಿವಾಟಿನಲ್ಲಿ ಇಂದು ಮಂಗಳವಾರ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ಕೇವಲ 33 ಅಂಕಗಳ ಏರಿಕೆಯನ್ನು ದಾಖಲಿಸಿ 31,291.85 ಅಂಕಗಳ ಮಟ್ಟದಲ್ಲಿ ದಿನದ ವಹಿವಾಟನ್ನು ಕೊನೆಗೊಳಿಸಿದೆ.

Advertisement

ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ ಕೇವಲ 11.20 ಅಂಕಗಳ ಏರಿಕೆಯನ್ನು ದಾಖಲಿಸಿ ದಿನದ ವಹಿವಾಟನ್ನು 9,765.55 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿದೆ.

ಅತ್ಯಂತ ತೆಳುವಾಗಿ ಕಂಡು ಬಂದ ಇಂದಿನ ವಹಿವಾಟಿನ ಹರಹು ಕೇವಲ 924 ಶೇರುಗಳ ಮುನ್ನಡೆಯನ್ನು ಕಂಡಿತು. ವ್ಯತಿರಿಕ್ತವಾಗಿ 1,645 ಶೇರುಗಳು ಹಿನ್ನಡೆಗೆ ಗುರಿಯಾದವು; 128 ಶೇರುಗಳು ಯಾವುದೇ ಬದಲಾವಣೆಯನ್ನು ಕಾಣಲಿಲ್ಲ.

ಡಾ. ರೆಡ್ಡಿ, ಸನ್‌ ಫಾರ್ಮಾ ಮತ್ತು ಬಿಪಿಸಿಎಲ್‌ ಶೇರುಗಳು ಗಮನಾರ್ಹ ಏರಿಕೆಯನ್ನು ದಾಖಲಿಸಿದವು. ವ್ಯತಿರಿಕ್ತವಾಗಿ ಎನ್‌ಟಿಪಿಸಿ ಮತ್ತು ಹೀರೋ ಮೋಟೋ ಕಾರ್ಪ್‌ ಹಿನ್ನಡೆಗೆ ಗುರಿಯಾದವು. 

Advertisement

Udayavani is now on Telegram. Click here to join our channel and stay updated with the latest news.

Next