Advertisement

ನೀರಿನ ಕೊರತೆ; ಎಂಸಿಎಫ್‌ ಕಾರ್ಯಚಟುವಟಿಕೆ ಸ್ಥಗಿತ

01:35 AM May 15, 2019 | sudhir |

ಮಂಗಳೂರು: ನೀರಿನ ಕೊರತೆಯಿಂದ ಎಂಆರ್‌ಪಿಎಲ್‌ನ ಎರಡು ಘಟಕಗಳು ಸ್ಥಗಿತಗೊಂಡ ಬೆನ್ನಿಗೆ ರಾಜ್ಯದ ಏಕೈಕ ರಸಗೊಬ್ಬರ ಕಾರ್ಖಾನೆ ಎಂಸಿಎಫ್ ಕೂಡ ಚಟು ವಟಿಕೆಯನ್ನು ಮಂಗಳವಾರದಿಂದ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.

Advertisement

ವಾರ್ಷಿಕ ನಿರ್ವಹಣೆಗಾಗಿ ಮಾರ್ಚ್‌ನಿಂದ 40 ದಿನಗಳ ಕಾಲ ಶಟ್‌ ಡೌನ್‌ ಆಗಿದ್ದ ಎಂಸಿಎಫ್‌ ಈಗ ಮತ್ತೆ ನೀರಿಲ್ಲದ್ದಕ್ಕಾಗಿ ಮೇ14ರ ಬೆಳಗ್ಗೆಯಿಂದಲೇ ಸ್ಥಗಿತಗೊಂಡಿದೆ. ಇದರಿಂದ ಯೂರಿಯಾ ಉತ್ಪಾದನೆ ವ್ಯತ್ಯಯ ಸಾಧ್ಯತೆ ಇದೆ.
ಮುಂಗಾರು ಆರಂಭ ಕಾಲದಲ್ಲಿ ರೈತರು ಬಿತ್ತನೆಯಲ್ಲಿ ಮಗ್ನರಾಗುತ್ತಾರೆ.

ಹೀಗಾಗಿ ಯೂರಿಯಾ ಬೇಡಿಕೆ ಹೆಚ್ಚಾಗುತ್ತದೆ. ಎಂಸಿಎಫ್‌ ಘಟಕಗಳು ಶಟ್‌ಡೌನ್‌ ಆಗುವುದರಿಂದ ರಸ ಗೊಬ್ಬರ ಕೊರತೆಯಾಗುವ ಸಾಧ್ಯತೆ ಇದೆ. 2016ರ ಮೇ ತಿಂಗಳಲ್ಲೂ ನೀರಿನ ಕೊರತೆ ಉಂಟಾದ ಕಾರಣ ಎಂಸಿಎಫ್ ಶಟ್‌ಡೌನ್‌ ಮಾಡಲಾಗಿತ್ತು. ಇದ ರಿಂದ ಯೂರಿಯಾ ಸರಬರಾಜಿನಲ್ಲಿ ವ್ಯತ್ಯಯವಾಗಿತ್ತು.

ಪ್ರತಿದಿನ ಎಂಸಿಎಫ್ ಕಾರ್ಖಾನೆ ಕೆಲಸ ಮಾಡಲು 1.6 ಮಿ. ಗ್ಯಾಲನ್‌ ನೀರು ಬೇಕು. ಕೆಲವು ದಿನಗಳಿಂದ ಪಾಲಿಕೆ ನೀರಿನ ಪ್ರಮಾಣ ಕಡಿಮೆ ಯಾಗುತ್ತಾ ಬಂದಿದೆ. 1.5 ಎಂಜಿಡಿ ಬದಲು 1 ಎಂಜಿಡಿಗಿಂತಲೂ ಕಡಿಮೆ ನೀರು ಸರಬರಾಜಾದ ಹಿನ್ನೆಲೆಯಲ್ಲಿ ಶಟ್‌ಡೌನ್‌ ನಿಯಮ ಜಾರಿಗೆ ತರಲು ಕಂಪೆನಿ ನಿರ್ಧರಿಸಿದೆ.

ಎಂಸಿಎಫ್ನಲ್ಲಿ 18 ಎಂಜಿಡಿ ಮತ್ತು 6 ಎಂಜಿಡಿಯ ಎರಡು ಪ್ರತ್ಯೇಕ ನೀರು ಸಂಗ್ರಹಣಾಗಾರಗಳಿವೆ. ಇವುಗಳಲ್ಲಿ ನೀರು ಅರ್ಧ ಬರಿದಾಗಿದೆ. ಉಳಿದ ದ್ದನ್ನು “ಫೈರ್‌ ಹೈಡ್ರೆಂಟ್‌ ರಿಸರ್ವ್‌’ ಆಗಿ ಉಳಿಸಿಕೊಳ್ಳಬೇಕಾಗಿದೆ ಎಂಬುದು ಕಂಪೆನಿ ಮೂಲಗಳ ಅಭಿಪ್ರಾಯ.

Advertisement

ನಿತ್ಯ 1,600 ಟನ್‌ ಯೂರಿಯಾ ಉತ್ಪಾದನೆ
ಎಂಸಿಎಫ್ನಲ್ಲಿ ಸರಾಸರಿ ದಿನಕ್ಕೆ ಸುಮಾರು 1,600 ಟನ್‌ ಯೂರಿಯಾ, 800 ಟನ್‌ನಷ್ಟು ಡಿಎಪಿ, 700 ಟನ್‌ನಷ್ಟು ಅಮೋನಿಯಾ ಉತ್ಪಾದನೆಯಾಗುತ್ತದೆ. ಕೇಂದ್ರ ರಸಗೊಬ್ಬರ ಸಚಿವಾಲಯ ಎಂಸಿಎಫ್ನಿಂದ ಖರೀದಿಸಿದ ಯೂರಿಯಾವನ್ನು ವಿವಿಧ ರಾಜ್ಯಗಳಿಗೆ ವಿತರಣೆ ಮಾಡುತ್ತದೆ. ರಾಜ್ಯದ ಬಹುತೇಕ ಕೃಷಿಕರಿಗೆ ಎಂಸಿಎಫ್ನಿಂದಲೇ ಯೂರಿಯಾ ಪೂರೈಕೆಯಾಗುತ್ತದೆ.

ನೀರಿನ ಕೊರತೆ ಕಾರಣದಿಂದ ಎಂಸಿಎಫ್‌ ಕಾರ್ಯಚಟುವಟಿಕೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಮಳೆ ಬಂದು ನೀರು ಲಭ್ಯವಾಗುವವರೆಗೆ ಇದು ಜಾರಿಯಲ್ಲಿರಲಿದೆ.
-ಪ್ರಭಾಕರ ರಾವ್‌, ಎಂಸಿಎಫ್ ನಿರ್ದೇಶಕರು.

Advertisement

Udayavani is now on Telegram. Click here to join our channel and stay updated with the latest news.

Next