ದೊಡ್ಡಬಳ್ಳಾಪುರ: ಈಗಾಗಲೇ ಬೇಸಿಗೆ ಆರಂಭವಾಗಿದ್ದು, ತಾಲೂಕಿನಲ್ಲಿ ನೀರಿನ ಸಮಸ್ಯೆ ತಲೆ ದೋರುತ್ತಿದೆ. ಕುಡಿಯುವ ನೀರಿಗೆ ಬೀದಿ ಜಗಳ ಉಲ್ಬಣಗೊಳ್ಳುವ ಸಾಧ್ಯತೆಯೂ ಹೆಚ್ಚಿದೆ.
ಬೀದಿ ಜಗಳ: ತಾಲೂಕಿನ ಸಿಂಪಾಡಿಪುರ ಗ್ರಾಮ ದಲ್ಲಿ ಕೊಳವೆಬಾವಿ ಬತ್ತಿ ಹೋಗಿದೆ. ಹೀಗಾಗಿ ಟ್ಯಾಂಕರ್ ಮೂಲಕ ಕುಡಿಯುವ ನೀರು ಸರಬ ರಾಜುಮಾಡುವ ಸಂದರ್ಭದಲ್ಲಿ ಕಾಲೋನಿ ಕಡೆಗೆ ಹೆಚ್ಚಿನ ನೀರು ಪೂರೈಸುತ್ತಿಲ್ಲ, ದನಕರು ಸಾಕಿರುವ ಒಂದುಕುಟುಂಬಕ್ಕೆ 10 ಬಿಂದಿಗೆ, ಯಾವುದೇ ಸಾಕು ಪ್ರಾಣಿಗಳು ಇಲ್ಲದ ಕುಟುಂಬಕ್ಕೂ 10 ಬಿಂದಿಗೆ ಲೆಕ್ಕದಲ್ಲಿನೀರು ಸರಬರಾಜು ಮಾಡಿದರೆ ಹೇಗೆ ಎನ್ನುವುದುಗ್ರಾಮಸ್ಥರ ಪ್ರಶ್ನೆಯಾಗಿದೆ. ಇದನ್ನು ಪ್ರಶ್ನಿಸಿದ್ದರಿಂದ ವಿನಾಕಾರಣ ಬೀದಿ ಜಗಳ ನಡೆಯುತ್ತಿದೆ. ಆದರೆ, ಕುಡಿಯುವ ನೀರಿನ ಬವಣೆ ಮಾತ್ರ ನೀಗಿಲ್ಲ ಎನ್ನುವುದು ಗ್ರಾಮ ಮಹಿಳೆಯರ ಅಳಲು.
ಕೆಲವು ಕಡೆ ಮಾತ್ರ ನೀರು ಪೂರೈಕೆ: ತಾಲೂಕಿನ ಹುಲಿಕುಂಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಕತ್ತಿಹೊಸಹಳ್ಳಿ ಗ್ರಾಮದಲ್ಲಿ ಕೊಳವೆ ಬಾವಿ ಬತ್ತಿ ಹೋಗಿ ನಾಲ್ಕು ದಿನ ಕಳೆದಿದೆ. ಶಿವರಾತ್ರಿ ಹಬ್ಬದ ನಿಮಿತ್ತ ಎರಡು ದಿನ ಮಾತ್ರ ಟ್ಯಾಂಕರ್ ಮೂಲಕ ಕುಡಿಯುವ ನೀರು ಸರಬರಾಜು ಮಾಡಲಾಗಿತ್ತು.ನೀರು ತುಂಬಿದ ಟ್ಯಾಂಕರ್ ಎÇÉಾ ಬೀದಿಗಳಿಗೂಬರುತ್ತಿಲ್ಲ. ಮುಖ್ಯರಸ್ತೆಯಲ್ಲಿ ಒಂದು ಕಡೆ ಮಾತ್ರಬಂದು ನಿಲ್ಲಿಸುತ್ತಾರೆ. ಇದರಿಂದ ಗ್ರಾಮದಇತರೆಡೆಗಳಲ್ಲಿ ವಾಸ ಮಾಡುವ ಮನೆಯವರುನೀರು ಇಲ್ಲದೆ ಪರದಾಡುವ ಸ್ಥಿತಿ ಉಂಟಾಗಿದೆ.ಬೆಳಗ್ಗೆ, ಸಂಜೆ ನೀರು ಪೂರೈಸಲಿ: ಗ್ರಾಮದಲ್ಲಿಸಂಜೆ, ಬೆಳಗಿನ ವೇಳೆಯಲ್ಲಿ ನೀರಿನ ಟ್ಯಾಂಕರ್ ಬಂದರೆ ಎಲ್ಲರೂ ಮನೆಯಲ್ಲಿ ಇರುತ್ತಾರೆ. ಆಗ,ನೀರು ಹಿಡಿದಿಟ್ಟುಕೊಳ್ಳಲು ಅನುಕೂಲವಾಗುತ್ತದೆ.ಆದರೆ, ಟ್ಯಾಂಕರ್ ಮಧ್ಯಾಹ್ನದ ವೇಳೆ ಬರುವುದ ರಿಂದ ಬಹುತೇಕ ರೈತರು ಹೊಲದ ಕೆಲಸಕ್ಕೆ, ಕೂಲಿಕೆಲಸಕ್ಕೆ ಹೋಗಿರುತ್ತಾರೆ. ಇದರಿಂದ ಮನೆಯಲ್ಲಿನೀರು ಇಲ್ಲದೆ ಪರದಾಡುವ ಸ್ಥಿತಿ ಇದೆ ಎನ್ನುತ್ತಾರೆ ಗ್ರಾಮಸ್ಥರು.
ಕೊಳವೆ ಬತ್ತುತ್ತಿವೆ: ಈ ಬಾರಿಯ ಮಳೆಗಾಲದಲ್ಲಿ ಬೆಟ್ಟದ ಸಾಲಿನಲ್ಲಿ ಬರುವ ತಾಲೂಕಿನ ಒಂದೆರಡುಕೆರೆ ಹೊರತುಪಡಿಸಿದರೆ ಉಳಿದ ಯಾವುದೇ ಕೆರೆಕುಂಟೆ ತುಂಬಿಲ್ಲ. ಇದರಿಂದಾಗಿ ಅಂತರ್ಜಲದ ಮಟ್ಟ ತೀವ್ರ ಕುಸಿತ ಕಂಡಿದ್ದು, ಪ್ರತಿ ದಿನವೂಕೊಳವೆ ಬಾವಿ ಬತ್ತಿ ಹೋಗುತ್ತಲೇ ಇವೆ.ಕೊಳವೆ ಬಾವಿ ಕೊರೆಯಲು ಹಿಂದೇಟು: ಸರ್ಕಾರ ದಿಂದ ಹಣ ಬರುವುದು ತಡವಾಗುತ್ತದೆ ಎನ್ನುವ ಕಾರಣದಿಂದ ಗುತ್ತಿಗೆದಾರರು ಹೊಸ ಕೊಳವೆಬಾವಿಕೊರೆಯಲು ಮುಂದಾಗುತ್ತಿಲ್ಲ. ಅಲ್ಲದೆ, ಡೀಸೆಲ್ ಬೆಲೆ ಪ್ರತಿ ದಿನವೂ ಏರಿಕೆಯಾಗು ತ್ತಲೇ ಇದೆ. ಸರ್ಕಾರ ಮಾತ್ರ ಕೊಳವೆಬಾವಿ ಕೊರೆ ಯಲು ನೀಡುವ ಹಣದಲ್ಲಿ ಏರಿಕೆ ಮಾಡುತ್ತಿಲ್ಲ. ಇದು ಸಹ ಹೊಸ ಕೊಳವೆಬಾವಿ ಕೊರೆಯಿಸಲು ಸಮಸ್ಯೆಯಾಗಿದೆ. ನೀರಿನ ಸಮಸ್ಯೆ ತೀವ್ರವಾಗುವ ಮುನ್ನವೇ ತಾಲೂಕು ಆಡಳಿತ ಈ ಬಗ್ಗೆ ಕ್ರಮ ಕೈಗೊಳ್ಳಬೇಕಿದೆ.