Advertisement

ನೆರೆ ಪೀಡಿತ ಊರಲ್ಲಿ ನೀರಿಗೆ ಬರ!

01:26 PM Dec 02, 2019 | Team Udayavani |

ಚಿಕ್ಕೋಡಿ: ತಾಲೂಕಿನ ನಾಗರಮುನ್ನೋಳ್ಳಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಭೀಕರ ಪ್ರವಾಹಕ್ಕೆ ಸಿಕ್ಕು ಹಾನಿಗೊಳಗಾದ ಮೂರು ತಿಂಗಳು ಗತಿಸಿವೆ. ಆದರೆ ದುರಸ್ತಿ ಕಾರ್ಯಕೈಗೊಳ್ಳಲು ಸರ್ಕಾರ ಮೀನಾಮೇಷ ಎನಿಸುತ್ತಿದ್ದು, ಇದರಿಂದ ನಾಗರಮುನ್ನೋಳ್ಳಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ವ್ಯಾಪ್ತಿಯ ಸುಮಾರು 10ಕ್ಕೂ ಹೆಚ್ಚಿನ ಹಳ್ಳಿಯ ಜನರು ಕುಡಿಯುವ ನೀರಿಗಾಗಿ ಪರಿತಪಿಸುತ್ತಿದ್ದಾರೆ.

Advertisement

ಕಳೆದ ಆಗಸ್ಟ್‌ ತಿಂಗಳಲ್ಲಿ ಕಂಡು ಕೇಳರಿಯದ ಭೀಕರ ಪ್ರವಾಹ ಬಂದು ನದಿ ಭಾಗದ ಜನರಿಗೆತೀವ್ರ ಸಾಕಷ್ಟು ತೊಂದರೆ ಉಂಟು ಮಾಡಿತ್ತು.ಬಹುಗ್ರಾಮ ಕುಡಿಯುವ ನೀರಿನ ಯೋಜನೆಮೇಲೆ ಅವಲಂಬಿತವಾದ ಹತ್ತಾರು ಹಳ್ಳಿಗಳ ಜನರು ಸಮಸ್ಯೆ ಎದುರಿಸುವಂತಾಗಿದೆ. ಯೋಜನೆ ಸ್ಥಗಿತಗೊಂಡಿದ್ದರಿಂದ ಮಡ್ಡಿ ಭಾಗದ ಜನರಿಗೂ ಪ್ರವಾಹ ಬೀಸಿ ತಟ್ಟಿದೆ. ಕಳೆದ ಎರಡು ತಿಂಗಳಿಂದಸುಮಾರು 10ಕ್ಕೂ ಹೆಚ್ಚಿನ ಹಳ್ಳಿಯ ಜನರು ಸಮರ್ಪಕ ಕುಡಿಯುವ ನೀರು ಇಲ್ಲದೆ ಮೈಲು ಗಟ್ಟಲ್ಲೇ ನೀರುತಂದು ಕುಡಿಯವ ಪ್ರಸಂಗ ಎದುರಾಗಿದೆ.

ಚಿಕ್ಕೋಡಿ ತಾಲೂಕಿನ ನಾಗರಮುನ್ನೋಳ್ಳಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆವ್ಯಾಪ್ತಿಗೆ ಒಳಪಡುವ ನಾಗರಮುನ್ನೋಳ್ಳಿ, ಬೆಳಕೂಡ,ಬಂಬಲವಾಡ, ಉಮರಾಣಿ, ಬೆಣ್ಣಿಹಳ್ಳಿ, ಇಟ್ನಾಳ, ಡೋನವಾಡ, ಕರಗಾಂವ, ಕುಂಗಟ್ಟೋಳ್ಳಿ ಸೇರಿದಂತೆಮುಂತಾದ ಹಳ್ಳಿಗಳು ಕಳೆದ ನಾಲ್ಕೆ ದು ವರ್ಷಗಳಿಂದ ಸತತ ಬರಗಾಲಕ್ಕೆ ತುತ್ತಾಗುತ್ತಾ ಬಂದಿವೆ. ಈ ಹಳ್ಳಿಗಳಲ್ಲಿ ಪ್ರತಿ ವರ್ಷ ಬೇಸಿಗೆಯಲ್ಲಿ ಟ್ಯಾಂಕರ್‌ ಮೂಲಕ ನೀರು ಪೂರೈಕೆ ಮಾಡಲಾಗುತ್ತಿತ್ತು.

ವರ್ಷ ಉತ್ತಮ ಮಳೆ ಆಗಿದ್ದರಿಂದ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಮೂಲಕ ಸಮರ್ಪಕ ನೀರು ಬರುತ್ತದೆ ಎಂದು ಜನರು ನಿರೀಕ್ಷೆ ಮಾಡಿದ್ದುಹುಸಿಯಾಗಿದೆ. ಆದರೆ ಪ್ರವಾಹದಲ್ಲಿ ಯೋಜನೆಯೇ ಹಾಳಾಗಿ ಹೋಗಿದೆ. ಈ ಯೋಜನೆ ದುರಸ್ತಿ ಮಾಡಿಜನರಿಗೆ ನೀರು ಕೊಡಲು ಅಧಿಕಾರಿಗಳು ಮಾತ್ರಮನಸ್ಸು ಮಾಡುತ್ತಿಲ್ಲ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.

ಪ್ರವಾಹದಲ್ಲಿ ಕಿತ್ತು ಹೋದ ಪಂಪ್‌ಸೆಟ್‌ಗಳು: ಮಹಾರಾಷ್ಟ್ರ ಕೊಂಕಣ ಭಾಗದಲ್ಲಿ ಅಬ್ಬರಿಸಿದ ಮಳೆಯಿಂದ ಹುಕ್ಕೇರಿ ತಾಲೂಕಿನ ಕೊಟಬಾಗಿ ಗ್ರಾಮದ ಹತ್ತಿರ ಹಿರಣ್ಯಕೇಶಿ ನದಿ ತೀರದಲ್ಲಿಪಂಪ್‌ಹೌಸ್‌ ಹಾಗೂ ಫ್ಲೋಟಿಂಗ್‌ ಫ್ಲಾಟ್‌ಫರ್ಮಾ ಅಳವಡಿಸಿದ್ದು, ಅತಿವೃಷ್ಟಿಯಿಂದ ಟ್ರಾನ್ಸ್‌ಫಾರ್ಮರ್‌, ಕ್ಯುಬಿಕಲ್‌ ಮೀಟರ್‌, ಪಿನಲ್‌ ಬೋರ್ಡ್‌, ಫ್ಲೋಟಿಂಗ್‌ ಫ್ಲಾಟ್‌ಫಾರ್ಮಾ ಹಾಗೂ ಪಂಪ್‌ಹೌಸದಿಂದಫ್ಲೋಟಿಂಗ್‌ ಫ್ಲಾಟ್‌ಫರ್ಮಾವರೆಗಿನ ಎಂಎಸ್‌ ಪೈಪ್‌ ಗಳು, ಎಸ್‌ಎಸ್‌ ಪ್ಲೇಕ್ಸಿಬಲ್‌ ಪೈಪ್‌ಗ್ಳು, ಪಂಪ್‌ಹೌಸಿನ ಶೆಲ್ಟರ್‌, ಫುಟ್‌ಬ್ರುಡ್ಜ್, ರೇಲಿಂಗ್‌ ಕಾಲಂನಪೈಪ್‌ಗ್ಳು ಸೇರಿದಂತೆ ಮುಂತಾದ ಸಲಕರಣೆ ಕಿತ್ತುಕೊಂಡು ಹೋಗಿ ಅಂದಾಜು ಸುಮಾರು 39 ಲಕ್ಷ ರೂ ಹಾನಿಯಾಗಿದೆ. ಈಗಾಗಲೇ ಸರ್ಕಾರಅನುದಾನ ಕೂಡಾ ಮಂಜೂರು ನೀಡಿದೆ. ಆದರೆ ದುರಸ್ತಿ ಕಾರ್ಯ ಮಾತ್ರ ತ್ವರಿತವಾಗಿ ನಡೆಯುತ್ತಿಲ್ಲ ಎಂಬುದು ಜನರ ಅಳಲು.

Advertisement

ಕಳೆದ 2013-14ರಲ್ಲಿ ನಾಗರಮುನ್ನೋಳ್ಳಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಅಡಿಗಲ್ಲು ಹಾಕಿ ಸುಮಾರು 14.19 ಕೋಟಿರೂ ವೆಚ್ಚದಲ್ಲಿ ಕಾಮಗಾರಿ ಆರಂಭಿಸಿ ಹುಕ್ಕೇರಿ ತಾಲೂಕಿನ ಹಿರಣ್ಯಕೇಶಿ ನದಿಯ ಕೊಟಬಾಗಿ ಹತ್ತಿರ ನೀರು ತಂದು ಚಿಕ್ಕೋಡಿ ತಾಲೂಕಿನ ಜನರಿಗೆ ನೀರು ಒದಗಿಸುವ ಯೋಜನೆ ಇದ್ದು, ಆದರೆ ಕಳೆದ ಎರಡುತಿಂಗಳಿಂದ ಯೋಜನೆ ಸ್ಥಗಿತಗೊಂಡು ಮಡ್ಡಿ ಭಾಗದ ಜನರಿಗೆ ಭಾರಿ ಸಮಸ್ಯೆಯುಂಟು ಮಾಡಿದೆ.

ಕಳಪೆ ಕಾಮಗಾರಿ: ಬರಗಾಲ ಪೀಡಿತ ಗ್ರಾಮಗಳಿಗೆ ಶಾಶ್ವತ ಕುಡಿಯುವ ನೀರಿನ ಯೋಜನೆ ರೂಪಿಸುವ ನಿಟ್ಟಿನಲ್ಲಿ ರಾಯಬಾಗ ಶಾಸಕದುರ್ಯೋಧನ ಐಹೋಳೆ ಸತತ ಪ್ರಯತ್ನದಿಂದಮಡ್ಡಿ ಭಾಗದ ಜನರಿಗೆ ಬಹುಗ್ರಾಮ ಕುಡಿಯುವನೀರಿನ ಯೋಜನೆ ಮಂಜೂರು ಮಾಡಿಸಿದ್ದಾರೆ. ಆದರೆ ಯೋಜನೆ ಕಾಮಗಾರಿ ಕಳಪೆ ಮಟ್ಟದಿಂದಕೂಡಿದೆ ಎಂಬುದು ಸ್ಥಳೀಯರ ಆರೋಪ.ಯೋಜನೆ ಪ್ರಾರಂಭವಿದ್ದಾಗ ಕೆಲವೊಂದುಗ್ರಾಮಗಳಿಗೆ ಸಮರ್ಪಕ ನೀರು ಬರುತ್ತಿಲ್ಲ. ಒಂದು ಕಡೆ ನೀರು ಬಿಟ್ಟರೇ ಮತ್ತೂಂದು ಕಡೆ ಪೈಪ್‌ಲೈನ್‌ಒಡೆದು ಹೋಗುತ್ತವೆ. ಹೀಗಾಗಿ ಈ ಯೋಜನೆ ಕಳಪೆ ಮಟ್ಟದಿಂದ ಕೂಡಿದೆ ಎಂದು ಸಾರ್ವಜನಿಕರು ದೂರಿದ್ದಾರೆ.

 

-ಮಹಾದೇವ ಪೂಜೇರಿ

Advertisement

Udayavani is now on Telegram. Click here to join our channel and stay updated with the latest news.

Next