Advertisement

ಯಲ್ಲಮ್ಮನ ನಾಡಿನಲ್ಲಿ ಶುದ್ಧ ನೀರಿನ ಕೊರತೆ

12:27 PM Mar 18, 2020 | Suhan S |

ಸವದತ್ತಿ: ತಾಲೂಕಿನ ಗ್ರಾಮೀಣ ಭಾಗಗಳ ಶುದ್ಧ ನೀರಿನ ಘಟಕಗಳು ನಿರ್ವಹಣೆಯಿಲ್ಲದೇ ಯೋಜನೆ ವ್ಯರ್ಥವಾಗುತ್ತಿವೆ ಎನ್ನುವ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿವೆ.

Advertisement

ಗ್ರಾಮೀಣ ಭಾಗಗಳಲ್ಲಿ ನಿರ್ಮಿಸಲಾದ ಶುದ್ಧ ಕುಡಿಯುವ ನೀರಿನ ಘಟಕಗಳ ದುರ್ಬಳಕೆಯೇ ಹೆಚ್ಚಾಗಿ ನಡೆಯುತ್ತಿವೆ. ಒಟ್ಟಾರೆ ತಾಲೂಕಿನಲ್ಲಿ 130 ಘಟಕಗಳಿದ್ದು, ಅದರಲ್ಲಿ ಬಹುತೇಕ ಘಟಕಗಳಲ್ಲಿ ನಿರ್ವಹಣೆಯ ಕೊರತೆಯಿಂದಾಗಿ ಸ್ಥಗತಗೊಂಡಿದ್ದವು. ಆದರೆ ಇತ್ತೀಚೆಗೆ ಸರಿಪಡಿಸಿ ಜನರ ಬಳಕೆಗೆ ನೀಡಲಾಗುತ್ತಿದೆ.

ಘಟಕಗಳು ನಿರ್ಮಾಣಗೊಂಡ ಹಲವು ವರ್ಷಗಳಲ್ಲಿ ನಿರ್ವಹಣೆ ಕುರಿತಂತೆ ದೂರುಗಳ ಸರಮಾಲೆಗಳೇ ಹರಿದು ಬಂದಿವೆ. ಇದರಿಂದ ವಿಳಂಬವಾದರೂ ಎಚ್ಚೆತ್ತ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಘಟಕಗಳ ನಿರ್ವಹಣೆಯನ್ನು ಇದೀಗ ಖಾಸಗಿ ಏಜೆನ್ಸಿಗಳಿಗೆ ವಹಿಸಿ, ಜನತೆಗೆ ಅನುಕೂಲ ಮಾಡಿಕೊಡಲು ಮುಂದಾಗಿದ್ದಾರೆ. ಆರ್‌.ಒ. ಪ್ಲಾಂಟ್‌ಗಳ ಬದಲು ನೇರವಾಗಿ ಕೊಳವೆಬಾವಿ ನೀರು ಬಳಕೆ ಮಾಡಿಕೊಳ್ಳುತ್ತಿರುವರಿಗೆ ನೀರಿನ ಶುದ್ಧತೆಯ ಪ್ರಮಾಣ ಹಾಗೂ ಅದರ ಸಂರಕ್ಷಣೆ ಕುರಿತು ಸರ್ಕಾರ ಜಾಗೃತಿ ಅಭಿಯಾನಗಳನ್ನು ಮಾಡದೇ ಇರದಿರುವುದು ಸಹ ಒಂದು ಕಾರಣವಾಗಿದೆ.

ಹಂದಿ-ನಾಯಿಗಳ ಉಪಟಳ: ಶುದ್ಧ ಕುಡಿಯುವ ನೀರಿನ ಘಟಕಗಳ ಸುತ್ತಮುತ್ತ ಸ್ವತ್ಛತೆಯೇ ಇಲ್ಲ. ಸುತ್ತಲೂ ಗಡಗಂಟಿ, ಹಂದಿ, ನಾಯಿಗಳ ಓಡಾಟ. ಸರಿಯಾದ ನಿರ್ವಹಣೆ ಇಲ್ಲದೇ ಅನೈತಿಕ ಚಟುವಟಿಕೆಗಳ ಮತ್ತು ಕುಡುಕರ  ಉಪಟಳ ಎದ್ದು ಕಾಣುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಸರ್ಕಾರ ಟೆಂಡರ್‌ ಪ್ರಕ್ರಿಯೆ ಮೂಲಕ ಯಾರಿಗೆ ಏಜೆನ್ಸಿ ನೀಡಿದರೂ ಅದರ ಸುತ್ತಮುತ್ತಲಿನ ವಾತಾವರಣ ಸ್ವಚ್ಛ ವಾಗಿಟ್ಟುಕೊಳ್ಳದಿದ್ದರೆ ಅದರ ಪ್ರಯೋಜನ ಜನರಿಗೆ ಸಿಗುವುದು ಅಸಾಧ್ಯ. ಮಹಿಳೆಯರು-ಮಕ್ಕಳು ಇಂತಹ ವಾತಾವರಣದಲ್ಲಿ ನೀರಿಗಾಗಿ ನಿಲ್ಲುವುದಾದರೂ ಹೇಗೆ? ಅದಕ್ಕಾಗಿ ಅಧಿಕಾರಿಗಳು ಕೂಡಲೇ ಈ ಘಟಕಗಳ ನಿರ್ವಹಣೆಯ ಜತೆಗೆ ಸ್ವತ್ಛತೆಗೆ ಹೆಚ್ಚು ಪ್ರಾಮುಖ್ಯತೆ ನೀಡಿ ಈ ಯೋಜನೆಯನ್ನು ಕಟ್ಟಕಡೆ ವ್ಯಕ್ತಿಗೂ ಸಿಗುವಂತೆ ಕ್ರಮ ಜರುಗಿಸಬೇಕಿದೆ ಎಂಬುವುದು ಪ್ರಜ್ಞಾವಂತರ ಒತ್ತಾಯವಾಗಿದೆ.

Advertisement

ಜನತೆಗೆ ಉಪಯೋಗವಾಗಲು ಶುದ್ಧ ನೀರಿನ ಘಟಕಗಳ ನಿರ್ವಹಣೆ ಅವಶ್ಯಕವಾಗಿದ್ದು, ಎಲ್ಲ ಘಟಕಗಳ ನಿರ್ವಹಣೆ ಮತ್ತು ಸ್ವತ್ಛತೆಗೆ ಹೆಚ್ಚು ಪ್ರಾಮುಖ್ಯತೆ ನೀಡಲಾಗುವುದು.-ಎಂ.ಎಸ್‌. ಹೀರೆಕುಂಬಿ, ಹೂಲಿ ಜಿಪಂ ಸದಸ್ಯರು

ಉಗರಗೋಳ ಜಿಪಂ ವ್ಯಾಪ್ತಿಯ ಶುದ್ಧ ನೀರಿನ ಘಟಕಗಳ ನಿರ್ವಹಣೆ ಕೊರತೆ ಇರುವುದು ನಿಜ. ಆದರೆ ಖಾಸಗಿ ಸಂಸ್ಥೆಗಳಿಂದ ನಿರ್ವಹಣೆ ಜವಾಬ್ದಾರಿ ನೀಡಲಾಗಿದೆ. ಸದ್ಯ ಅವಶ್ಯವಿರುವ ಘಟಕಗಳಿಗೆ ಮೊದಲ ಹಂತದಲ್ಲಿ ಚಾಲನೆ ನೀಡಿದ್ದೇವೆ. ಮುಂಬರುವ ದಿನಗಳಲ್ಲಿ ಉಳಿದೆಲ್ಲವನ್ನು ಅಭಿವೃದ್ಧಿ ಪಡಿಸಲಾಗುವುದು.- ಗುರುನಾಥ ಗಂಗಲ, ಜಿಪಂ ಸದಸ್ಯರು

 

-ಡಿ.ಎಸ್‌. ಕೊಪ್ಪದ

Advertisement

Udayavani is now on Telegram. Click here to join our channel and stay updated with the latest news.

Next