ಬೆಂಗಳೂರು: ಪಾಲಿಕೆಗೆ ಅಗತ್ಯ ಸಂಖ್ಯೆಯಲ್ಲಿ ಕೊರೊನಾ ಲಸಿಕೆ ಲಭ್ಯವಾಗುತ್ತಿಲ್ಲ. ಹೀಗಾಗಿ, ನಗರದಲ್ಲಿ ಲಸಿಕೆ ಅಭಾವ ಹೆಚ್ಚಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ತಿಳಿಸಿದರು.
ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜುಲೈ ತಿಂಗಳಲ್ಲಿ ಬೇಡಿಕೆಗೆ ತಕ್ಕಂತೆ ಪಾಲಿಕೆಗೆ ಕೊರೊನಾ ಲಸಿಕೆ ಲಭ್ಯವಾಗಲಿಲ್ಲ. ನಗರದಲ್ಲಿ ಶೇ.17 ರಷ್ಟು ಜನರು ಮಾತ್ರ ಲಸಿಕೆ ಪಡೆದಿದ್ದಾರೆ. ಬಿಬಿಎಂಪಿಗೆ ನಿತ್ಯ 1.50 ಲಕ್ಷ ಡೋಸ್ ಲಸಿಕೆ ಬೇಕಾಗಿದೆ. ಈ ಬಗ್ಗೆ ಆರೋಗ್ಯ ಇಲಾಖೆಗೆ ಪ್ರಸ್ತಾವನೆ(ಬೇಡಿಕೆ) ಸಲ್ಲಿಸಲಾಗಿದೆ ಎಂದರು.
ಕೆಲವರು ಎರಡನೇ ಅಲೆ ಇನ್ನೂ ಮುಗಿದಿಲ್ಲ ಎನ್ನುತ್ತಾರೆ. ಮತ್ತೆ ಕೆಲವರು ಮೂರನೇ ಅಲೆ ಆರಂಭ ಎನ್ನುತ್ತಿದ್ದಾರೆ. ಆರೋಗ್ಯ ತಜ್ಞರು, ಕೊರೊನಾ ಅಲೆಗಳ ಬಗ್ಗೆ ಅಂತಿಮ ನಿರ್ಧಾರ ಮಾಡಲಿ¨ªಾರೆ. ಲಸಿಕೆ ಪಡೆದವರಿಗೆ ಅಪಾಯ ಕಡಿಮೆ ಇದೆ. 45 ವರ್ಷ ಮೇಲ್ಪಟ್ಟವರು ಅತಿ ಹೆಚ್ಚು ಲಸಿಕೆ ಪಡೆದಿ¨ªಾರೆ. ಎಲ್ಲರಿಗೂ ವ್ಯಾಕ್ಸಿನ್ ಕೊಡಲು ಮತ್ತಷ್ಟು ಲಸಿಕೆ ಬೇಡಿಕೆ ಇದೆ ಎಂದು ಹೇಳಿದರು.
ಮೂರನೇ ಅಲೆಗೆ ಪಾಲಿಕೆ ಸಿದ್ಧತೆ ನಡೆಸಿರುವ ಕುರಿತು ಮಾತನಾಡಿ, ಸದ್ಯ ಎರಡನೇ ಅಲೆಯ ವ್ಯವಸ್ಥೆ ಹಾಗೇ ಉಳಿದಿದೆ. ಇನ್ನುಮುಂದೆ ಫಿಜಿಕಲ್ ಟ್ರಯಾಜ್ ಕಡ್ಡಾಯವಾಗಿ ಮಾಡಲಾಗುತ್ತದೆ. 400ರಷ್ಟು ಬೆಡ್ ಮಾತ್ರ ಸರ್ಕಾರಿ ಕೋಟಾದಲ್ಲಿ ರೋಗಿಗಳು ಇದ್ದಾರೆ. ಎಲ್ಲ ದೊಡ್ಡ ಆಸ್ಪತ್ರೆಗಳಲ್ಲೂ ಆಕ್ಸಿಜನ್ ಪ್ಲಾಂಟ್ ನಿರ್ಮಾಣ ಮಾಡಲಾಗಿದೆ. ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳಿಗೂ ಈ ಬಗ್ಗೆ ಸೂಚನೆ ನೀಡಲಾಗಿದೆ. ಪೊಬತ್ತಿಯಲ್ಲಿರುವ ಆಸ್ಪತ್ರೆಯಲ್ಲಿ ಪಾಲಿಕೆಯು, ಪ್ರತ್ಯೇಕ ಆಕ್ಸಿಜನ್ ಪ್ಲಾಂಟ್ ಸಿದ್ಧತೆ ಮಾಡಿಕೊಂಡಿದೆ ಎಂದು ತಿಳಿಸಿದರು.
ವೀಕೆಂಡ್ ಲಾಕ್ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕೊರೊನಾ ಹಿನ್ನೆಲೆಯಲ್ಲಿ ಜನರು, ಸಾಮಾನ್ಯ ಜನ ಜೀವನ ನಡೆಸಬೇಕಾಗಿದೆ. ಕೊರೊನಾ ಸೋಂಕು ತಡೆಗೆ ಪೂರ್ವ ಸಿದ್ಧತೆ ಆಗಬೇಕಾಗಿದೆ. ಸರ್ಕಾರದ ಹಂತದಲ್ಲಿ ಅಂತಿಮ ತೀರ್ಮಾನ ಆಗಲಿದೆ. ನಗರದಲ್ಲಿ ಸದ್ಯ ಸೋಂಕು ಪ್ರಕರಣಗಳ ಸಂಖ್ಯೆ 500ಕ್ಕಿಂತ ಕಡಿಮೆ ಇದೆ. ಕಂಟೇನ್ಮೆಂಟ್ ವಿಚಾರದಲ್ಲಿ ಕಠಿಣ ಕ್ರಮ ವಹಿಸಲಾಗಿದೆ ಎನ್ನುತ್ತಲೇ ವೀಕೆಂಡ್ ಲಾಕ್ ಡೌನ್ ಬಗ್ಗೆ ಆಯುಕ್ತರು ಸುಳಿವು ನೀಡಿದರು.