Advertisement
ಪ್ರಾಕೃತಿಕ ಸಂಪತ್ತಿನಿಂದ ಕೂಡಿರುವ ವನಧಾಮದಲ್ಲಿ ಮೂಲಭೂತ ಸೌಕರ್ಯಗಳಿಲ್ಲದಿರುವುದರಿಂದ ಅರಣ್ಯ ಹಾಗೂ ಪ್ರವಾಸೋದ್ಯಮ ಅಭಿವೃದ್ಧಿಗೆ ಸಾಕಷ್ಟು ಅವಕಾಶಗಳಿದ್ದರೂ ಸಹ ಪ್ರಸಿದ್ಧ ಪ್ರವಾಸಿ ತಾಣ ಸಾವನದುರ್ಗ ಸೊರುಗುತ್ತಿದೆ. ವನ್ಯ ಸಂರಕ್ಷಣಾ ಸಮಿತಿ ನಿರ್ದೇಶಿಸಿರುವ ಅಭಿವೃದ್ಧಿ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ಅರಣ್ಯ ಇಲಾಖೆ ಮೀನಾ ಮೇಷ ಏಣಿಸುತ್ತಿದೆ. ಅಲ್ಲದೆ ಇಲ್ಲಿ ಪ್ರವಾಸಿಗರಿಗೂ ರಕ್ಷಣೆ ಇಲ್ಲದಂತಾಗಿದ್ದು, ಚಾರಿಣಿಗರು ಬೆಟ್ಟ ಏರಿ ಕೆಳಗಿಳಿದನಂತರ ವಿಶ್ರಾಂತಿ ಪಡೆಯಲು ವನಧಾಮ ಅಗತ್ಯ ವಿದ್ದು, ಕುಡಿಯುವ ನೀರು ಸೇರಿದಂತೆ ಯಾವುದೇ ಮೂಲ ಸೌಕರ್ಯಗಳಿಲ್ಲದೆ ಪ್ರವಾಸಿಗರ ಮತ್ತು ಚಾರಣಿಗರ ಸಂಖ್ಯೆ ಗಣನೀಯವಾಗಿ ಕುಸಿತಗೊಂಡಿದೆ.
Related Articles
Advertisement
ಮೈಸೂರು ವಶದಲ್ಲಿದ್ದಾಗ ಕೃಷ್ಣರಾಜಗಿರಿ ಎಂದು ಕರೆಯಲ್ಪಡುತ್ತಿದ್ದ ಈ ಪ್ರದೇಶ ಪ್ರಾನ್ಸಿಸ್ ಬುಕನನ್ ಪ್ರಕಾರ ಸವರನ್ ದುರ್ಗ ದಕ್ಷಿಣ ಭಾರತದಲ್ಲೇ ಪ್ರಸಿದ್ಧ ವನದುರ್ಗ ಎಂದು ಗುರುತಿಸಲಾಗಿತ್ತು. ಈ ದುರ್ಗದ ಬುಡದಲ್ಲಿರು ನೆಲಪಟ್ಟಣದಿಂದ ಮುಖ್ಯ ದುರ್ಗಕ್ಕಿರುವ ಏಕೈಕ ರಹಸ್ಯ ಕಾಲುದಾರಿ ಬಲು ಅಪಾಯಕಾರಿ. ಇಕ್ಕಾಟದ ಈ ಕಾಲುದಾರಿಯಲ್ಲಿ ನಡೆಯುವಾಗ ದಾರಿ ಮಧ್ಯದಲ್ಲಿ ಪಾತಳವಿದೆ. ಈ ಕಂದಕದ ಅಳ ಅರಿತವರಿಲ್ಲ. ಹಿಂದೆ ಇದನ್ನು ದಾಟುವಾಗ ಮರದ ದಿಮ್ಮಿಗಳನ್ನು ಬಳಸುತ್ತಿದ್ದರಂತೆ. ಒಮ್ಮೆ ಈ ಕಂದಕಕ್ಕೆ ಬಿದ್ದವರು ಮತ್ತೆ ಬದುಕುಳಿಯುವ ಮಾತಿಲ್ಲ. ಸಾಹಸಿಗರಿಗೆ ಈ ದುರ್ಗ ನಿಜಕ್ಕೂ ಸವಾಲಾಗಿದೆ. ಆದರೂ ಇಂದಿಗೂ ಎಷ್ಟೋ ಪ್ರವಾಸಿಗರು ಈ ಬೆಟ್ಟ ಹತ್ತವ ಸಾಹಸದ ಪ್ರಯತ್ನ ನಡೆಯುತ್ತಲೇ ಇದೆ.
ಉಯ್ನಾಲೆ ಕಂಬ: ಸಾವನದುರ್ಗದಲ್ಲಿನ ಭವರೋಗ ನಿವಾರಕ ಲಕ್ಷ್ಮೀ ನರಸಿಂಹಸ್ವಾಮಿ ಆಕರ್ಷಿಣಿಯವಾಗಿದ್ದು, ವೀರಭದ್ರಸ್ವಾಮಿ ದೇವಾಲಯದ ಹಾಗೂ ಮುಂದೆ ಬೃಹತ್ ದೀಪಸ್ತಂಭ ಮತ್ತು ಉಯ್ಯಲೆ ಕಲ್ಲು ಕಂಭ ಪ್ರವಾಸಿಗರನ್ನು ಆಕರ್ಷಿಸಿದೆ. ಚೋಳರ ಪ್ರಸಿದ್ಧ ದೊರೆ ಚೋಳರಾಜ ಇಲ್ಲಿನ ಪ್ರಸಿದ್ಧ ವೀರಭದ್ರಸ್ವಾವಿ ದೇವಾಲಯ ಮತ್ತು ಕಾಶಿ ವಿಶ್ವೇಶ್ವರಸ್ವಾಮಿ ಹಾಗೂ ವೈದ್ಯನಾಥಶ್ವರಸ್ವಾಮಿ ದೇವಾಲಯವನ್ನು ನಿರ್ಮಿಸಿದ್ದಾರೆ. ಇಮ್ಮಡಿ ಕೆಂಪೇಗೌಡ ಇಲ್ಲಿನ ಕೋಟೆ ಕೊತ್ತಲುಗಳನ್ನು ದುರಸ್ತಿ ಪಡಿಸಿ, ದರ್ಬಾರ್ ಹಾಲ್ ನಿರ್ಮಿಸಿದ್ದರು. ಮೈಸೂರಿನ ಯದುಕುಲವಂಶದ ನಾಲ್ವಡಿ ಕೃಷ್ಣರಾಜು ಒಡೆಯರ್ ಲಕ್ಷ್ಮೀ ನರಸಿಂಹ ಸ್ವಾಮಿ ಮತ್ತು ಪರಕಾಲ ಮಠ ಇತರೆ ದೇಗುಲಗಳನ್ನು ಜೀಣೋದ್ಧಾರಗೊಳಿಸಿ ದಾನ, ದತ್ತಿ ನೀಡಿದ್ದಾರೆ. ಈ ಪ್ರವಾಸಿ ತಾಣ ಮತ್ತಷ್ಟು ಅಭಿವೃದ್ಧಿಯಾಗಬೇಕಿದೆ ಎಂಬುದು ಭಕ್ತರ ಆಶಯವಾಗಿದೆ.
ಬಸ್ ಸೌಲಭ್ಯ: ಪ್ರವಾಸಿಗರು, ಭಕ್ತರು ಭೇಟಿ ನೀಡಲು ಬೆಂಗಳೂರಿನ ಕಲಾಸಿಪಾಳ್ಯ, ಕೆಂಪೇಗೌಡ ಬಸ್ ನಿಲ್ದಾಣದಿಂದ ಸರ್ಕಾರಿ ಬಸ್ ಸಂಚಾರವಿದೆ. ಸುಂಕದಕಟ್ಟೆ, ತಿಪ್ಪಗೊಂಡನಹಳ್ಳಿ ಮಾರ್ಗವಾಗಿ ಮಾಗಡಿ ಬಂದರೆ ಮಾಗಡಿಯಿಂದ ರಾಮನಗರ ಮಾರ್ಗದ ಮಧ್ಯೆ ಕೇವಲ 12 ಕಿ.ಮೀ ಇರುವ ಸಾವನದುರ್ಗಕ್ಕೆ ಪ್ರಯಾಣಿಸಬಹುದು. ರಾಮನಗರ ಮತ್ತು ಕುಣಿಗಲ್, ತುಮಕೂರುಗಳಿಂದಲೂ ಬಸ್ ಗಳ ಸಂಚಾರ ಸೌಲಭ್ಯವಿದೆ.
ಧಾರ್ಮಿಕ ದತ್ತಿ ಇಲಾಖೆ ಹಾಗೂ ಮುಜರಾಯಿ ಇಲಾಖೆ ಸಾವನದುರ್ಗವನ್ನು ಸುಂದರವಾದ ದುರ್ಗವನ್ನಾಗಿಸಲು ವಿಶೇಷ ಯೋಜನೆಗಳನ್ನು ಹಾಕಿಕೊಂಡಿದೆ. ಆದಷ್ಟು ಬೇಗ ಸಮರೋಪಾಧಿಯಲ್ಲಿ ಕಾಮಗಾರಿ ಕೈಗೊಳ್ಳಲು ಅಗತ್ಯ ಕ್ರಮ ವಹಿಸಲಿದೆ. – ಎಚ್.ಕೆ.ರಘು. ಧಾರ್ಮಿಕ ದತ್ತಿ ಇಲಾಖೆ ಸಿಇಒ
-ತಿರುಮಲೆ ಶ್ರೀನಿವಾಸ್