Advertisement

ಪ್ರವಾಸಿಗರಿಲ್ಲದೆ ಭಣಗುಟ್ಟಿದ ಪ್ರಸಿದ್ಧ ಪ್ರವಾಸಿ ತಾಣಗಳು

03:27 PM Oct 19, 2020 | Suhan S |

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರೆ ಆರಂಭವಾದರೂ ಮೈಸೂರಿನ ಪ್ರಮುಖ ಪ್ರವಾಸಿ ತಾಣಗಳು ಪ್ರವಾಸಿಗರಿಲ್ಲದೆ ಭಣಗುಟ್ಟಿದವು.

Advertisement

ದಸರಾ ಸಂದರ್ಭ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿ ಕೋವಿಡ್ ಸೋಂಕು ಸ್ಫೋಟಿಸುತ್ತದೆ ಎಂದು ಜಿಲ್ಲಾಡಳಿತ ಮುಂಜಾಗ್ರತಾ ಕ್ರಮವಾಗಿ ಮೈಸೂರು ಜಿಲ್ಲೆಯ ಎಲ್ಲಾ ಪ್ರವಾಸಿ ತಾಣಗಳ ಮೇಲೆನಿರ್ಬಂಧ ವಿಧಿಸಿತ್ತು. ಆದರೆ ಮುಖ್ಯಮಂತ್ರಿ ದಸರಾ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪ್ರವಾಸಿ ತಾಣಗಳಿಗೆ ಹೇರಿದ್ದ ನಿರ್ಬಂಧ ತೆರವುಗೊಳಿಸಲು ಆದೇಶಿದ್ದರು. ನಂತರ ಅ.18 ಭಾನುವಾರದಿಂದ ನಗರದ ಚಾಮುಂಡಿ ಬೆಟ್ಟ, ಮೃಗಾಲಯ, ರೈಲ್ವೆ ಮ್ಯೂಸಿಯಂ ಸೇರಿದಂತೆ ಹಲವು ಪ್ರವಾಸಿ ತಾಣಗಳಲ್ಲಿ ನಿರ್ಬಂಧತೆರವಾಗಿದ್ದರೂ ನಿರೀಕ್ಷಿತ ಮಟ್ಟದ ಪ್ರವಾಸಿಗರು ಕಾಣಿಸಲಿಲ್ಲ.

ಕೋವಿಡ್ ಲಾಕ್‌ಡೌನ್‌ ನಂತರ ಚಾಮುಂಡಿಬೆಟ್ಟಕ್ಕೆ ಪ್ರತಿ ಭಾನುವಾರ, ಶುಕ್ರವಾರ ಹಾಗೂ ಸೋಮವಾರ ಸಾರ್ವಜನಿಕರು, ಭಕ್ತರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿತ್ತು. ಬಳಿಕ ದಸರಾ ಅಂಗವಾಗಿ ಬೆಟ್ಟಕ್ಕೆ ಸಂಪೂರ್ಣವಾಗಿ ನಿರ್ಬಂಧ ವಿಧಿಸಲಾಗಿತ್ತು. ಆದರೆ ಭಾನುವಾರದಿಂದ ನಿರ್ಬಂಧ ತೆರವುಗೊಳಿಸಿದ್ದರೂ ಬೆಟ್ಟಕ್ಕೆ ನಿರೀಕ್ಷಿತ ಮಟ್ಟದಲ್ಲಿ ಭಕ್ತರು ಪ್ರವಾಸಿಗರು ಬರಲಿಲ್ಲ. ಪ್ರತಿವರ್ಷ ದಸರಾ ಸಂದರ್ಭ ರಜಾ ದಿನಗಳಲ್ಲಿ 10  ರಿಂದ 15 ಸಾವಿರ ಮಂದಿ ಭೇಟಿ ನೀಡುತ್ತಿದ್ದರು. ಕೋವಿಡ್ ನಂತರ ಐದಾರು ಸಾವಿರ ಮಂದಿ ಬೆಟ್ಟಕ್ಕೆ ಬರುತ್ತಿದ್ದರು. ಆದರೆ ಭಾನುವಾರ ಎರಡರಿಂದ ಮೂರು ಸಾವಿರ ಮಂದಿಯಷ್ಟೇ ಬೆಟ್ಟಕ್ಕೆ ಭೇಟಿ ನೀಡಿದ್ದರು.

ಬೆರಳೆಣಿಕೆಯಷ್ಟು ಮಂದಿ ಮಾತ್ರ ಭೇಟಿ :  ನಗರದ ಪ್ರಮುಖ ಪ್ರವಾಸಿ ತಾಣ ಹಾಗೂ ಆಕರ್ಷಣೀಯ ಸ್ಥಳಗಳಾದ ಮೃಗಾಲಯ ಮತ್ತು ರೈಲ್ವೆ ಮ್ಯೂಸಿಯಂಗೆ ಭಾನುವಾರ ಬೆರಳೆಣಿಕೆಯಷ್ಟು ಮಂದಿ ಪ್ರವಾಸಿಗರು ಭೇಟಿ ನೀಡಿದರು. ನಿರ್ಬಂಧ ವಾಪಸ್‌ ತೆಗೆದಿರುವಬಗ್ಗೆ ಪ್ರವಾಸಿಗರು ಮತ್ತು ಜನರಲ್ಲಿ ಮಾಹಿತಿ ಕೊರತೆಯಿಂದಾಗಿ ಹೆಚ್ಚು ಜನ ಆಗಮಿಸಿಲ್ಲಎಂದು ಅಧಿಕಾರಿಗಳು ಪತ್ರಿಕೆಗೆ ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next