Advertisement

ಶೌಚಾಲಯವೇ ಇಲ್ಲದ ಭವನ

04:46 PM Dec 29, 2019 | Suhan S |

ಮಾಗಡಿ: ಪಟ್ಟಣದ ಅಂಬೇಡ್ಕರ್‌ ಭವನದಲ್ಲಿ ಶೌಚಾಲಯವೇ ಇಲ್ಲ. ಇದರಿಂದ ಸಭಿಕರು ಹಾಗೂ ಮಹಿಳೆಯರ ಆಕ್ರೋಶಕ್ಕೆ ಅಧಿಕಾರಿಗಳು ಗುರಿಯಾಗಿದ್ದಾರೆ.

Advertisement

ಪಟ್ಟಣದಲ್ಲಿ ನಡೆಯುವ ಕಾರ್ಯ ಕ್ರಮಗಳಿಗಾಗಿ ಮೀಸಲಿಟ್ಟಿರುವ ಅಂಬೇಡ್ಕರ್‌ ಭವನದಲ್ಲೇ ಶೌಚಾಲಯವಿಲ್ಲ.ಸರ್ಕಾರ ಮಾತ್ರ ಎಲ್ಲಾ ಕುಟುಂಬಗಳು ಕಡ್ಡಾಯವಾಗಿ ಶೌಚಾಲಯ ನಿರ್ಮಿಸಿಕೊಳ್ಳಿ, ಬಯಲು ಬಹಿರ್ಷದೆ ಮುಕ್ತ ಸಮಾಜವನ್ನು ನಿರ್ಮಿಸಿ, ನಗರ ಮತ್ತು ಗ್ರಾಮ ನೈರ್ಮಲ್ಯ ಕಾಪಾಡುವಂತೆ ಜನ ಜಾಗೃತಿಗೊಳಿಸುವ ಸರ್ಕಾರವೇ ಶೌಚಾಲಯ ಇಲ್ಲದ ಭವನ ನಿರ್ಮಿಸಿರುವುದು ವಿಪರ್ಯಾಸ.

ಶೌಚಾಲಯಕ್ಕೆ ಪರದಾಟ: ಇತ್ತೀಚೆಗೆ ಎನ್‌ ಜಿಒ ಕಾರ್ಮಿಕ ಇಲಾಖೆ ಸಹಯೋಗದಲ್ಲಿ ಮಹಿಳೆ ಯರಿಗೆ ಸರ್ಕಾರದ ಸೌಲತ್ತು ವಿತರಣೆ ಕಾರ್ಯಕ್ರಮ ಆಯೋಜಿ ಸಿತ್ತು. ಸುಮಾರು 500ಕ್ಕೂ ಹೆಚ್ಚು ಮಹಿಳೆಯರು ಭಾಗ ವಹಿಸಿದ್ದ ಕಾರ್ಯಕ್ರಮ ಬೆಳಗ್ಗೆ 10 ಗಂಟೆಗೆಯಿಂದ ಮಧ್ಯಾಹ್ನ 2 ಗಂಟೆಯವರೆಗೂ ನಡೆಯಿತು. ಈ ಅವಧಿಯಲ್ಲಿ ಮಹಿಳೆಯರು ಶೌಚಾಲಯಕ್ಕಾಗಿ ಪರದಾಡುವಂತಾಯಿತು.  ಅಂಬೇಡ್ಕರ್‌ ಭವನದಲ್ಲಿ ನಿತ್ಯ ಒಂದಲ್ಲ ಒಂದು ಸರ್ಕಾರಿ ಮತ್ತು ಖಾಸಗಿ ಕಾರ್ಯ ಕ್ರಮಗಳು ನಡೆಯುತ್ತಿರುತ್ತವೆ. ಹಾಗೂ ತರ ಬೇತಿ ಶಿಬಿರಗಳನ್ನು ಇಲ್ಲಿ ನಡೆ ಸಲಾಗುತ್ತದೆ.

ಜಾಣ ಕುರುಡುತನ: ಇಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಬರುವವರಲ್ಲಿ ಕೆಲವರು ಭವನದ ಹೊರ ಕಿಟಿಕಿ ಬಳಿಯೋ ಅಥವಾ ಭವನದ ಹಿಂಭಾಗವೋ ತೆರಳಿ ತಮ್ಮ ಜಲ ಭಾದೆಯನ್ನು ನೀಗಿಸಿಕೊಳ್ಳುತ್ತಾರೆ. ಆದರೂ ಸರ್ಕಾರಿ ಅಧಿಕಾರಿಗಳು ಕಂಡೂ ಕಾಣದಂತೆ ಜಾಣ ಕುರುಡುತನ ಪ್ರದರ್ಶಿಸುತ್ತಾರೆ. ಅದರಲ್ಲೂ ಮಹಿಳೆಯರು ಸರ್ಕಾರಿ ಅಧಿಕಾರಿಗಳಿಗೆ ಇಡೀ ಶಾಪ ಹಾಕುತ್ತಾ ಶೌಚಾಲಯಕ್ಕೆ ಪರದಾಡುತ್ತಿದ್ದಾರೆ.  ಬ್ರಿಟಿಷರ ಕಾಲದ ಕಟ್ಟಡಗಳು ಇಂದಿಗೂ ಸುಸಜ್ಜಿತವಾಗಿದೆ. ಸುಮಾರು ಹದಿನೈದು ವರ್ಷಗಳ ಹಿಂದೆಯಷ್ಟೆ ನಿರ್ಮಾಣಗೊಂಡಿರುವ ಭವನ ಸೊರುತ್ತಿದ್ದು, ಕಟ್ಟಡ ಸಹ ಶಿಥಲಗೊಂಡಿದೆ. ಬಾಗಿಲು ಕಿಟಕಿ ಗೆದ್ದಲು ತಿನ್ನುತ್ತಿದೆ. ಸ್ವಚ್ಛತೆಯಂತೂ ಕೇಳಲೇ ಬಾರದು ಆ ರೀತಿ ಪುರಸಭೆ ನಿರ್ವಹಣೆ ಮಾಡುತ್ತಿದೆ.

ಒಪ್ಪತ್ತಿನ ಊಟ ಇಲ್ಲದಿದ್ದರೂ ಹೇಗೋ ಬದುಕುತ್ತೇವೆ. ಆದರೆ ಮಲ, ಮೂತ್ರ ಮಾಡದೆ ಹೇಗೆ ಸಹ ಇರಲು ಸಾಧ್ಯ. ಸರ್ಕಾರಿ ಕಟ್ಟಡದಲ್ಲೇ ಈ ಸ್ಥಿತಿಯಾದರೆ ಗ್ರಾಮೀಣ ಜನರ ಕಷ್ಟ ಎಷ್ಟರ ಮಟ್ಟಿಗೆ ಎದುರಿಸುತ್ತಿದ್ದಾರೆ ಎಂಬುದು ಊಹೆ ಮಾಡಲು ಅಸಾಧ್ಯ ಎಂದು ಮಹಿಳೆಯರೊಬ್ಬರು ತಮ್ಮ ನೋವನ್ನು ಮಾಧ್ಯಮದ ಮುಂದೆ ತೋಡಿಕೊಂಡರು.

Advertisement

ಸುಸಜ್ಜಿತ ಶೌಚಾಲಯ ನಿರ್ಮಿಸಲು ಟೆಂಡರ್‌ ಕರೆಯ ಲಾಗಿದೆ. ಆದರೆ ಮಾಗಡಿ ಬೆಂಗಳೂರು ಮಾರ್ಗದ ಕೆಸಿಪ್‌ ರಸ್ತೆ ಕಾಮ ಗಾರಿಗೆಸರ್ವೇ ಕಾರ್ಯ ನಡೆದಿದ್ದು, ಸರ್ವೆ ಕಾರ್ಯ ವೇಳೆ ಅಂಬೇಡ್ಕರ್‌ ಭವನ ಸಹ ರಸ್ತೆಗೆ ಹೋಗುತ್ತಿರು ವುದರಿಂದ ಕಾಮಗಾರಿ ಕೈಗೊಂಡಿಲ್ಲ. ಮಹೇಶ್‌, ಮಾಗಡಿ ಮುಖ್ಯಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next