ಸೈದಾಪುರ: ಶಾಲಾ ಮಕ್ಕಳು ಕಲಿಕೆ ಜತೆ ಕ್ರೀಡೆಗಳಲ್ಲಿ ಭಾಗವಹಿಸಬೇಕು ಎಂಬ ಉದ್ದೇಶದಿಂದ ಪ್ರತಿಭೆಯನ್ನು ಹೊರತೆಗೆಯಲು ಸರಕಾರ ಹೋಬಳಿ, ತಾಲೂಕು, ಜಿಲ್ಲಾ, ಮತ್ತು ರಾಜ್ಯ ಮಟ್ಟದ ಕ್ರೀಡಾಕೂಟ ಏರ್ಪಡಿಸುತ್ತಿದೆ. ಇದಕ್ಕೆ ತದ್ದವಿರುದ್ಧವೆಂಬತೆ ತಾಲೂಕಿನ ಬಹುತೇಕ ಸರಕಾರಿ ಶಾಲೆಗಳಲ್ಲಿ ದೈಹಿಕ ಶಿಕ್ಷಕರೇ ಇಲ್ಲ.
ಮಕ್ಕಳು ದಿನದ ಬಹುತೇಕ ಸಮಯ ಶಾಲೆಯಲ್ಲಿ ಕಳೆಯುತ್ತಾರೆ. ವಿದ್ಯಾರ್ಥಿಗಳಿಗೆ ಕಲಿಕೆ ಜತೆ ಕ್ರೀಡೆಗಳಲ್ಲಿ ಭಾಗವಹಿಸಲು ಅನೂಕೂಲ ಮಾಡಿಕೊಡಬೇಕಾದ ದೈಹಿಕ ಶಿಕ್ಷಕರ ಇಲ್ಲದೆ ಈ ಭಾಗದ ವಿದ್ಯಾರ್ಥಿಗಳು ಕ್ರೀಡೆಯಿಂದ ವಂಚಿತರಾಗತ್ತಿದ್ದಾರೆ. ಅಲ್ಲದೇ ಗ್ರಾಮೀಣ ಭಾಗದ ಕ್ರೀಡಾ ಪ್ರತಿಭೆಗಳಿಗೆ ಸೂಕ್ತ ಮಾರ್ಗದರ್ಶನ ಇಲ್ಲದೆ ರಾಜ್ಯ ಮಟ್ಟದಲ್ಲಿ ಯಶಸ್ವಿಯಾಗಲು ವಿಫಲವಾಗುತ್ತಿದ್ದಾರೆ. ದೈಹಿಕ ಶಿಕ್ಷಕರ ಕೊರತೆಯಿಂದಾಗಿ ವಿದ್ಯಾರ್ಥಿಗಳ ಬಾಲ್ಯ ಜೀವನದ ಕ್ರೀಡೆಗಳನ್ನು ಕಸಿದುಕೊಳ್ಳುವ ಜತೆ ಗ್ರಾಮೀಣ ಭಾಗದ ಕ್ರೀಡಾ ಪ್ರತಿಭೆಗಳನ್ನು ಪ್ರೋತ್ಸಾಹಿಸಲು ಹಿಂದೇಟು ಹಾಕುತ್ತಿವೆ. ಮತ್ತು ಇದರಿಂದಾಗಿ ನಮ್ಮ ಭಾಗದ ಪ್ರತಿಭವಂತ ಕ್ರೀಡಾಪಟುಗಳನ್ನು ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಭಾಗವಹಿಸಲು ತೊಂದರೆಯಾಗುತ್ತಿದೆ ಎಂಬುವುದು ಇಲ್ಲಿನ ಶಿಕ್ಷಣ ಪ್ರೇಮಿಗಳ ಅಭಿಪ್ರಾಯವಾಗಿದೆ.
ಶಿಕ್ಷಕರ ನೇಮಕಾತಿ ಯಾವಾಗ?:
ಸರಕಾರ ವಿದ್ಯಾರ್ಥಿಗಳ ಕಲಿಕೆಗೆ ತೊಂದರೆಯಾಗದಂತೆ ವಿಷಯ ಶಿಕ್ಷಕರು ಕಡಿಮೆ ಇರುವ ಶಾಲೆಗಳಿಗೆ ಅತಿಥಿ ಶಿಕ್ಷಕರನ್ನು ನೆಮಿಸಿಕೊಳ್ಳುತ್ತಿದೆ. ಆದರೆ ಈ ಸೈದಾಪುರ, ಬಳಿಚಕ್ರ ಮತ್ತು ಕೊಂಕಲ್ ಹೋಬಳಿಯಲ್ಲಿ ಸುಮಾರು 60 ಶಾಲೆಗಳಿವೆ. ಅದರಲ್ಲಿ ಕೇವಲ 8 ಶಾಲೆಗಳಿಗೆ ಮಾತ್ರ ದೈಹಿಕ ಶಿಕ್ಷಕರಿದ್ದಾರೆ. ಈ ಮೂಲಕ ವಿಷಯ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಿ, ದೈಹಿಕ ಶಿಕ್ಷಣವನ್ನು ನಿರ್ಲಕ್ಷ್ಯ ವಹಿಸಿದ್ದಾರೆ. ಈ ಸಮಸ್ಯೆಯನ್ನು ನಮ್ಮ ಭಾಗದ ಜನಪ್ರತಿನಿಧಿಗಳು ಮತ್ತು ಶಿಕ್ಷಣಾಧಿಕಾರಿಗಳು ಸರಕಾರಕ್ಕೆ ಮಾಹಿತಿ ನೀಡಿ ಕನಿಷ್ಠ ಅತಿಥಿ ದೈಹಿಕ ಶಿಕ್ಷಣ ಶಿಕ್ಷಕರನ್ನು ನೇಮಿಸಿಕೊಳ್ಳಬೇಕು.•ಆಂಜನೇಯ ಸೈದಾಪುರ, ಬಿ.ಪಿ.ಎಡ್ ಪದವೀಧರ
Advertisement
ಸೈದಾಪುರ ಹೋಬಳಿಯಲ್ಲಿ 20 ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗಳಿದ್ದು, ಅವುಗಳ ಪೈಕಿ ಕೇವಲ ಎರಡು ಶಾಲೆಗಳಿಗೆ ಮತ್ತು ಬಳಿಚಕ್ರ ಹೋಬಳಿಯಲ್ಲಿ 20 ಶಾಲೆಗಳಿದ್ದು, ಅವುಗಳ ಪೈಕಿ ಕೇವಲ 4 ಜನ ಹಾಗೂ ಕೊಂಕಲ್ ಹೋಬಳಿಯ 20 ಶಾಲೆಗಳಲ್ಲಿ ಇಬ್ಬರು ಮಾತ್ರ ದೈಹಿಕ ಶಿಕ್ಷಕರಿದ್ದಾರೆ.
Related Articles
Advertisement
ಈ ಭಾಗದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ದೈಹಿಕ ಶಿಕ್ಷಕರ ಕೊರೆತ ಇದೆ. ಆದರೆ ಸರಕಾರವು ರಾಜ್ಯ ಮಟ್ಟದಲ್ಲಿ ನೇಮಕಾತಿ ಮತ್ತು ವರ್ಗವಣೆಯ ಮೂಲಕ ಭರ್ತಿ ಮಾಡಿಕೊಳಬಹುದು. ಆದರೆ ಅತಿಥಿ ಶಿಕ್ಷಕರ ನೇಮಕಾತಿ ಮಾಡಲು ಅವಕಾಶವಿಲ್ಲ.•ಶ್ರೀಶೈಲ ಬಿರಾದರ, ಉಪನಿರ್ದೇಶಕರು ಸಾರ್ವಜನಿಕ ಶಿಕ್ಷಣ ಇಲಾಖೆ ಯಾದಗಿರಿ
ನಮ್ಮ ಭಾಗದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ರಾಜ್ಯ ಮಟ್ಟದಲ್ಲಿ ಉತ್ತಮ ಸಾಧನೆ ಮಾಡಿದ ಕ್ರೀಡಾಪಟುಗಳಿದ್ದಾರೆ. ಪ್ರತಿಭವಂತ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಲು ಸರಕಾರ ಹಲವು ಯೋಜನೆಗಳು ಹಾಕಿಕೊಂಡಿದೆ. ಆದರೆ ಈ ಭಾಗದ ಸೈದಾಪುರ, ಬಳಿಚಕ್ರ ಮತ್ತು ಕೊಂಕಲ್ ಹೋಬಳಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗಳಿಗೆ ದೈಹಿಕ ಶಿಕ್ಷಕರ ಕೊರತೆ ಬಗ್ಗೆ ಉನ್ನತ ಅಧಿಕಾರಿಗಳಿಗೆ ಮಾಹಿತಿ ನೀಡಿ ಸೂಕ್ತ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುತ್ತೇನೆ.•ಮನೋಹರ ವಡಿಗೇರಿ, ತಾಲೂಕು ದೈಹಿಕ ಶಿಕ್ಷಣ ಶಿಕ್ಷಣಾಧಿಕಾರಿ
ಮಕ್ಕಳು ಶೈಕ್ಷಣಿಕವಾಗಿ ಪ್ರಗತಿ ಹೊಂದಬೇಕಾದರೆ ಕ್ರೀಡೆ ಪೂರಕವಾಗಿದೆ. ಆದರೆ ಬಹುತೇಕ ಸರಕಾರಿ ಶಾಲೆಗಳಿಗೆ ದೈಹಿಕ ಶಿಕ್ಷಕರು ಇಲ್ಲದಿರುವುದು ಬೇಸರದ ಸಂಗತಿ. ಶಿಕ್ಷಕರಿಲ್ಲದ ಸರ್ಕಾರಿ ಶಾಲೆಗಳನ್ನು ಅಧಿಕಾರಿಗಳ ಗಮನಕ್ಕೆ ತರಲಾಗುವುದು. ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತು ಶಾಸಕರು ವಿಶೇಷ ಗಮನ ಹರಿಸಿ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡುವ ಮತ್ತು ಮಾರ್ಗದರ್ಶನ ಮಾಡುವ ಅತಿಥಿ ದೈಹಿಕ ಶಿಕ್ಷಕರನ್ನು ನೆಮಿಸಿಕೊಳ್ಳುವುದಕ್ಕೆ ಮುಂದಾಗಬೇಕು. •ಶಶಿಕಲಾ ಭೀಮಣ್ಣಗೌಡ ಪಾಟೀಲ ಕ್ಯಾತ್ನಾಳ, ಜಿಪಂ ಸದಸ್ಯ
•ಭೀಮಣ್ಣ ಬಿ.ವಡವಟ್