Advertisement

ಅನುದಾನಿತ ಪ್ರಾ.ಶಾಲೆಗೆ ಮುಚ್ಚುವ ಭಾಗ್ಯ

06:00 AM Jun 03, 2018 | Team Udayavani |

ವಾಮಂಜೂರು: ಈ ಶಾಲೆಯಲ್ಲಿ ಎಲ್ಲ ಸೌಲಭ್ಯಗಳೂ ಇವೆ. ಆದರೆ ಮಕ್ಕಳೇ ಇಲ್ಲ. ಈ ಸಾಲಿ ನಲ್ಲಿ ವಿದ್ಯಾರ್ಥಿಗಳ ಸೇರ್ಪಡೆ ಶೂನ್ಯ ವಾಗಿರು ವುದರಿಂದ ಬಾಗಿಲು ಹಾಕುವುದು ಅನಿವಾರ್ಯ. ಇದು ಗುರುಪುರದ ಅನುದಾನಿತ ಹಿಂದೂ ಹಿರಿಯ ಪ್ರಾಥಮಿಕ ಶಾಲೆಯ ಸ್ಥಿತಿ.

Advertisement

ಈ ಶಾಲೆಯಲ್ಲಿ 1ರಿಂದ 7ರ ವರೆಗೆ 700ರಿಂದ 800 ವಿದ್ಯಾರ್ಥಿಗಳು ಈ ಹಿಂದೆ ಕಲಿಯುತ್ತಿದ್ದರು. 15ಕ್ಕೂ ಹೆಚ್ಚು ಬೋಧಕ ಸಿಬಂದಿ ಇದ್ದರು. 2016ರಲ್ಲಿ ಶಾಲೆ ದಶಮಾನೋತ್ಸವ ಆಚರಿಸಿತ್ತು.  ಕಳೆದ ಬಾರಿ 27 ವಿದ್ಯಾರ್ಥಿಗಳಿದ್ದು, 7ನೇ ತರಗತಿ ಯಲ್ಲಿ 11 ಮಂದಿ ಇದ್ದರು. ಇಬ್ಬರು ಶಿಕ್ಷಕರು, ಇನ್ನಿಬ್ಬರು ಗೌರವ ಶಿಕ್ಷಕ ರಿದ್ದರು. ಗುರುಪುರದ 3 ಬಾಡಿಗೆ ಮನೆಗಳಿಂದ, ಮಸೀದಿ ಯೊಂದು ನಡೆಸುವ ಆಶ್ರಮದಿಂದ ಇಲ್ಲಿಗೆ ವಿದ್ಯಾರ್ಥಿಗಳು ಬರುತ್ತಿದ್ದರು. 

ನಾಲ್ವರು ವಿದ್ಯಾರ್ಥಿಗಳು ಗುರುಪುರದಿಂದ ಬರುತ್ತಿದ್ದರು. 7ನೇ ತರಗತಿ ವಿದ್ಯಾರ್ಥಿಗಳು ಉತ್ತೀರ್ಣರಾ ಗಿದ್ದು, ಬಾಡಿಗೆಗೆ ಇದ್ದವರು ಮನೆ ಖಾಲಿ ಮಾಡಿದ್ದಾರೆ. ಮಸೀದಿಯ ಆಶ್ರಮ ಸ್ಥಳಾಂತರವಾಗಿದ್ದು, ಮಕ್ಕಳ ಕೊರತೆ ಕಾಣಿಸಿದೆ. ಹೀಗಾಗಿ ಉಳಿದವರನ್ನು ಬೇರೆ ಶಾಲೆಗೆ ಕಳಿಸಲು ತಿಳಿಸಲಾಗಿದೆ.

ಎಲ್ಲ ಸೌಲಭ್ಯ
ಇಲ್ಲಿ ಆಟದ ಮೈದಾನ, ಬಾವಿ, ಕಲಾ ಮಂದಿರ, ಕೊಠಡಿ, ಬಿಸಿ ಯೂಟ, ಸಮವಸ್ತ್ರ, ಶೌಚಾಲಯ ಸೌಲಭ್ಯಗಳಿವೆ. ನುರಿತ ಶಿಕ್ಷಕರೂ ಇದ್ದರು. ಮಹಾಲಿಂಗ ನಾಯಕ್‌ಮುಖ್ಯ ಶಿಕ್ಷಕರಾಗಿದ್ದು, ಮಾರ್ಥಾ ಮೇರಿ ಡಿ’ಸೋಜಾ ಸಹಶಿಕ್ಷಕರಾಗಿದ್ದರು. ಇಬ್ಬರು ಗೌರವ ಶಿಕ್ಷಕರಿದ್ದರು. ಇವರಿಗೂ ಪರ್ಯಾಯ ವ್ಯವಸ್ಥೆಯ ಆತಂಕ ಕಾಡುತ್ತಿದೆ.

ಕನಿಷ್ಠ 20 ಮಕ್ಕಳನ್ನಾದರೂ ದಾಖಲಿಸುವ ವ್ಯವಸ್ಥೆ ಮಾಡಿದರೆ ಶಾಲೆಯನ್ನು ಮುಂದುವರಿಸಬಹುದು. ಇಲ್ಲವಾದರೆ ಮುಚ್ಚುವುದು ಅನಿವಾರ್ಯ ವಾಗುತ್ತದೆ. ಮುಂದಿನ ಬೆಳವಣಿಗೆಗಳನ್ನು ನೋಡಿ ಇಲಾಖೆಯು ತೀರ್ಮಾನ ತೆಗೆದುಕೊಳ್ಳಲಿದೆ.
ಲೋಕೇಶ್‌, ಕ್ಷೇತ್ರ ಶಿಕ್ಷಣಾಧಿಕಾರಿ

Advertisement

ಮಕ್ಕಳ ಶುಲ್ಕ ಹೇಗೆ ಹೊಂದಿಸಲಿ?
ಈ ಶಾಲೆಯಲ್ಲಿ ನನ್ನ ಇಬ್ಬರು ಮಕ್ಕಳ ಪೈಕಿ ಒಬ್ಬ ಆರನೇ, ಇನ್ನೊಬ್ಬ ನಾಲ್ಕನೇ ತರಗತಿಯಲ್ಲಿ ಕಲಿಯುತ್ತಿದ್ದರು. ಈಗ ಮಕ್ಕಳನ್ನು ಬೇರೆ ಖಾಸಗಿ ಶಾಲೆಗೆ ಸೇರಿಸಲು 5 ಸಾವಿರ ರೂ. ಗಳನ್ನು ಹೇಗೆ ಹೊಂದಿಸಲಿ ಎಂಬುದೇ ಬಡವರಾದ ನಮ್ಮ ಸಮಸ್ಯೆ.     
ಶಹೀದಾ, ವಿದ್ಯಾರ್ಥಿನಿಯೊಬ್ಬರ ತಾಯಿ

ನಿರ್ಲಕ್ಷ್ಯ ಸಲ್ಲದು
ಒಂದು ಶಾಲೆ ನಡೆಸಲು ಕನಿಷ್ಠ 20 ವಿದ್ಯಾರ್ಥಿಗಳಾದರೂ ಇರಬೇಕು. ಆದರೆ ಈ ಬಾರಿ ವಿದ್ಯಾರ್ಥಿಗಳು ಸೇರಿಲ್ಲ. ಹೀಗಾಗಿ ಇಲ್ಲಿದ್ದ ವಿದ್ಯಾರ್ಥಿಗಳಿಗೆ ಟಿ.ಸಿ. ನೀಡಲು ಹೇಳಿದ್ದಾರೆ. ಎಲ್ಲ ಸೌಲಭ್ಯಗಳಿದ್ದರೂ ಊರವರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸುತ್ತಿರುವುದರಿಂದ ಈ ಪರಿಸ್ಥಿತಿ ಉದ್ಭವಿಸಿದೆ. ಸರಕಾರಿ ಶಾಲೆಯಲ್ಲಿ ಉಚಿತ ಶಿಕ್ಷಣ ಸಿಗುತ್ತಿದ್ದು, ಹೆತ್ತವರಿಗೆ ತುಂಬಾ ಸಮಸ್ಯೆಯಾಗಿದೆ.     
ಮಹಾಲಿಂಗ ನಾಯಕ್‌, ಮುಖ್ಯ ಶಿಕ್ಷಕರು

– ಗಿರೀಶ್‌ ಮಳಲಿ

Advertisement

Udayavani is now on Telegram. Click here to join our channel and stay updated with the latest news.

Next