ಬಾಗೇಪಲ್ಲಿ: ತಾಲೂಕಿನ ಪಶು ಆಸ್ಪತ್ರೆಗಳಲ್ಲಿ ವೈದ್ಯರು, ಕಚೇರಿ ಸಿಬ್ಬಂದಿ ಕೊರತೆ ಇದ್ದು,ಜಾನುವಾರುಗಳಿಗೆ ಸಕಾಲಕ್ಕೆ ಚಿಕಿತ್ಸೆ ಸಿಗದೇ, ರೈತರು ಪರದಾಡುವಂತಾಗಿದೆ.
ಸಾವಿರಾರು ರೂ. ಬೆಲೆ ಬಾಳುವ ರಾಸುಗಳು ಅನಾರೋಗ್ಯಕ್ಕೆ ತುತ್ತಾದಾಗ ಸೂಕ್ತ ಚಿಕಿತ್ಸೆ ಸಿಗದೇಮರಣ ಹೊಂದುತ್ತಿದ್ದು, ಮಾಲಿಕರು ಆರ್ಥಿಕ ನಷ್ಟಕ್ಕೆ ಒಳಾಗುತ್ತಿದ್ದಾರೆ. ಚಿಕಿತ್ಸೆ ಇರಲಿ, ಮರಣೋತ್ತರ ದೃಢೀಕರಣ ಪತ್ರ, ಮತ್ತಿತರ ದಾಖಲೆ ಪಡೆಯಲು ಸಾಧ್ಯವಾಗದೇ ಹೈನುಗಾರರು, ಕುರಿ, ಮೇಕೆ ಸಾಕಾಣಿಕೆದಾರರು ಸರ್ಕಾರಿ ಸೌಲಭ್ಯ, ಪರಿಹಾರ ಹಣ ಪಡೆಯಲು ಸಾಧ್ಯವಾಗದೇ ಕಂಗಾಲಾಗಿದ್ದಾರೆ.
ಶೇ.70 ಸಿಬ್ಬಂದಿ ಇಲ್ಲ: ಬಾಗೇಪಲ್ಲಿ ತಾಲೂಕು ಪಶು ಆಸ್ಪತ್ರೆಗಳಲ್ಲಿ 2 ಸಹಾಯಕ ನಿರ್ದೇಶಕರಹುದ್ದೆಗಳ ಪೈಕಿ ಒಂದು ಭರ್ತಿ ಆಗಿದೆ. 10 ಪಶುವೈದ್ಯರ ಹುದ್ದೆ ಪೈಕಿ 4 ಖಾಲಿ ಇವೆ, ಇರುವ
ಒಂದು ಜಾನುವಾರು ಅಭಿವೃದ್ಧಿ ಅಧಿಕಾರಿಹುದ್ದೆ ಖಾಲಿ ಇದೆ, 4 ಜಾನುವಾರು ಅಧಿಕಾರಿ ಗಳ ಹುದ್ದೆಗಳ ಪೈಕಿ ಮೂರು ಖಾಲಿ ಇವೆ. 9 ಪಶುವೈದ್ಯಕೀಯ ಪರೀಕ್ಷಕರ ಹುದ್ದೆ ಪೈಕಿ 8ಖಾಲಿ, 21 ಡಿ ಗ್ರೂಪ್ ನೌಕಕರ ಹುದ್ದೆ ಪೈಕಿ 17ಖಾಲಿ ಇವೆ. ಒಟ್ಟು 51 ಹುದ್ದೆಗಳ ಪೈಕಿ 14 ಮಾತ್ರ ಭರ್ತಿ ಆಗಿವೆ. ಉಳಿದ 37 ಹುದ್ದೆಗಳಲ್ಲಿ ಅಧಿಕಾರಿಗಳು, ಸಿಬ್ಬಂದಿಯೇ ಇಲ್ಲ. ಶೀತ, ಜ್ವರದ ಸಮಸ್ಯೆ: ತಾಲೂಕು ವ್ಯಾಪ್ತಿಯಲ್ಲಿ 1.46 ಲಕ್ಷ ಕುರಿ, 36 ಸಾವಿರ ಮೇಕೆ, 32 ಸಾವಿರ ಸೀಮೆಹಸು, ಎಮ್ಮೆಗಳಿದ್ದು, ಒಟ್ಟು 2.14 ಲಕ್ಷ ಜಾನುವಾರುಗಳಿವೆ. ತಾಲೂಕಿನ 25 ಸಾವಿರ ಕುಟುಂಬಗಳು ಹೈನುಗಾರಿಕೆ ಅವಲಂಬಿಸಿ ಜೀವನ ಸಾಗಿಸುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿಬಿದ್ದ ಮಳೆಗೆ ಕುರಿ, ಮೇಕೆಗಳಲ್ಲಿ ಶೀತ ಹೆಚ್ಚಾಗಿ ನೀಲಿ ನಾಲಿಗೆ ರೋಗ ಮತ್ತು ಕಾಲಿನ ಸಂದುಗಳಲ್ಲಿ ಹುಣ್ಣು ರೋಗ ಕಾಣಿಸಿಕೊಂಡಿದೆ. ಸೀಮೆ ಹಸು, ಎಮ್ಮೆಯಂತಹಜಾನುವಾರುಗಳಲ್ಲಿ ಕಾಲುಬಾಯಿ ಜ್ವರಕಾಣಿಸಿಕೊಳ್ಳುತ್ತಿದೆ. ವೈದ್ಯರ ಕೊರತೆಯಿಂದಸಕಾಲಕ್ಕೆ ಚಿಕಿತ್ಸೆ ಲಭಿಸದೆ, ಜಾನುವಾರುಗಳು ಅನಾರೋಗ್ಯದಿಂದ ಸಾವನ್ನಪ್ಪುತ್ತಿವೆ.
ಜಾನುವಾರು ಕಳೆದುಕೊಂಡು ನಷ್ಟಕ್ಕೆ ಗುರಿಯಾಗಿರುವ ರೈತರು ರಾಜ್ಯ ಸರ್ಕಾರದ ಕುರಿ ಮತ್ತು ಹುಣ್ಣೆ ಅಭಿವೃದ್ಧಿ ಮಂಡಳಿಯ ಅನುಗ್ರಹ ಯೋಜನೆಯಡಿಯಲ್ಲಿ ಸಿಗುವ 5ಸಾವಿರ ರೂ. ಪರಿಹಾರ ಹಣಕ್ಕಾಗಿ ಅರ್ಜಿಸಲ್ಲಿಸಬೇಕಿದೆ. ಇದಕ್ಕೆ ಪಶು ಇಲಾಖೆಯಿಂದಮರಣೋತ್ತರ ವರದಿ ದೃಢೀಕರಣ ಪತ್ರ ಕಡ್ಡಾಯವಾಗಿದ್ದು, ಅದನ್ನು ನೀಡುವ ವೈದ್ಯರು ಇಲ್ಲ. ಸರ್ಕಾರದ ಪರಿಹಾರ ಹಣಪಡೆದುಕೊಳ್ಳುವಲ್ಲಿ ತಾಲೂಕಿನ ಬಹುತೇಕ ರೈತರು ವಂಚಿತರಾಗುತ್ತಿದ್ದಾರೆ.
ಬಾಗೇಪಲ್ಲಿ ತಾಲೂಕಿನ ಗೂಳೂರು, ಪಾತಪಾಳ್ಯ ಸೇರಿ ನೂತನ ಚೇಳೂರು ತಾಲೂಕುಕೇಂದ್ರದಲ್ಲಿ ಪಶು ವೈದ್ಯ ಆಸ್ಪತ್ರೆಗಳಲ್ಲಿ ಕಳೆದ 4ವರ್ಷಗಳಿಂದ ವೈದ್ಯರೇ ಇಲ್ಲದೆ ಡಿ ಗ್ರೂಪ್‌ನೌಕರರು ಕಾಟಾಚಾರಕ್ಕೆ ಆಸ್ಪತ್ರೆಯ ಬಾಗಿಲು ತೆರೆದುಕೊಂಡಿದ್ದಾರೆ.
ಬಾಗೇಪಲ್ಲಿ ತಾಲೂಕಿನ ಪಶು ವೈದ್ಯ ಕಚೇರಿಯಲ್ಲಿರುವ ಸಿಬ್ಬಂದಿ, ಔಷಧಿ ದಾಸ್ತಾನು ಹಾಗೂ ಸಲಕರಣೆಗಳ ಕೊರತೆ ಬಗ್ಗೆ ಸ್ಥಳೀಯ ಜನಪ್ರತಿನಿಧಿಗಳು ನಿಗಾವಹಿಸಿ,ರೈತರ ಸಮಸ್ಯೆಗಳ ಇತ್ಯರ್ಥಕ್ಕೆಮುಂದಾಗಬೇಕಾಗಿದೆ.
–ಜಿ.ಎಂ.ರಾಮಕೃಷ್ಣಪ್ಪ, ರೈತ, ಬಾಗೇಪಲ್ಲಿ
ಪಶು ಆಸ್ಪತ್ರೆಯಲ್ಲಿನ ಸಿಬ್ಬಂದಿ ಕೊರತೆ ಬಗ್ಗೆ 6 ತಿಂಗಳ ಹಿಂದೆಯಷ್ಟೇ ಇಲಾಖೆ ಮೇಲಧಿಕಾರಿಗಳು, ಶಾಸಕಸುಬ್ಟಾರೆಡ್ಡಿ ಅವರಿಗೆ ಮನವಿ ಸಲ್ಲಿಸಲಾಗಿದೆ.ಸಿಬ್ಬಂದಿ ಕೊರತೆ ಕಾರಣಜಾನುವಾರುಗಳಿಗೆ ಸಮರ್ಪಕ ವೈದ್ಯ ಸೇವೆ ಸಲ್ಲಿಸಲು ಸಾಧ್ಯವಾಗುತ್ತಿಲ್ಲ.
–ಡಾ.ಎನ್.ಇ.ಕೃಷ್ಣಮೂರ್ತಿ, ಸಹಾಯಕನಿರ್ದೇಶಕ, ಪಶುಪಾಲನಾ ಇಲಾಖೆ,ಬಾಗೇಪಲ್ಲಿ.