Advertisement
ಜಿಲ್ಲೆಯ ಕೃಷಿ ಇಲಾಖೆ ಏಕಕಾಲಕ್ಕೆ ಎರಡೆರಡು ಜಿಲ್ಲೆಗಳ ಕಾರ್ಯವ್ಯಾಪ್ತಿ ಹೊಂದಿದೆ. ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳ ವ್ಯಾಪ್ತಿಗೆ ಇದೇಅಧಿಕಾರಿ ವಲಯ ಕಾರ್ಯನಿರ್ವಹಿಸಬೇಕಾದಹಿನ್ನೆಲೆ, ಇದುವರೆಗೂ ತೀವ್ರ ಒತ್ತಡ ಅಧಿಕಾರಿಗಳು ಅನುಭವಿಸುತ್ತಿದ್ದಾರೆ.
Related Articles
Advertisement
ಹೆಚ್ಚುವರಿ ಹೊಣೆಗಾರಿಕೆ: ಬೆಂಗಳೂರು ಗ್ರಾಮಾಂತರಜಿಲ್ಲೆಯ ಕೃಷಿ ಇಲಾಖೆಗೆ ಮಂಜೂರಾಗಿರುವ ನಾನಾ ಹಂತದ 102 ಹುದ್ದೆಗಳ ಪೈಕಿ ಕೇವಲ 46 ಸ್ಥಾನಗಳಿಗೆಮಾತ್ರ ಸಿಬ್ಬಂದಿಯಿದ್ದು, 56 ಹುದ್ದೆಗಳು ನೇಮಕಕ್ಕಾಗಿಕಾದು ಕುಳಿತಿವೆ. ಹೀಗಾಗಿ, ರೈತ ಸಂಪರ್ಕ ಕೇಂದ್ರ ಸೇರಿ ತಾಲೂಕುಮಟ್ಟದ ಕೃಷಿ ಇಲಾಖೆಯ ಕಚೇರಿಗಳಲ್ಲಿ ಸಮರ್ಪಕ ಅಧಿಕಾರಿಗಳಿಲ್ಲದೆ, ಹಾಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗೆ ತೀವ್ರ ಕಾರ್ಯದೊತ್ತಡ ಸೃಷ್ಟಿಯಾಗುತ್ತಿದೆ. ಜಿಲ್ಲೆಯ ಇಲಾಖೆಗೆ ಬೆಂಗಳೂರು ನಗರದ ವ್ಯಾಪ್ತಿ ನೀಡಿರುವ ಹಿನ್ನೆಲೆ ಕಡಿಮೆ ಅಧಿಕಾರಿ ವಲಯಕ್ಕೆ ಹೆಚ್ಚುವರಿ ಹೊಣೆಗಾರಿಕೆಯಿದ್ದು, ರೈತರು ಸಮಸ್ಯೆ ಅನುಭವಿಸಬೇಕಾಗಿದೆ.
ರೈತರ ಆಗ್ರಹ: ಕೃಷಿ ಸಚಿವರು ಸಿಬ್ಬಂದಿ ಕೊರತೆಯಿರುವ ಜಿಲ್ಲೆಗಳಲ್ಲಿ ಕೂಡಲೇ ರೈತರಿಗೆಅನುಕೂಲವಾಗಲು ಸಿಬ್ಬಂದಿ ನೇಮಿಸಬೇಕು.ಇಲ್ಲದಿದ್ದರೆ ರೈತರು ಸಾಕಷ್ಟು ಸಮಸ್ಯೆ ಎದುರಿಸ ಬೇಕಾಗುತ್ತದೆ. ಜಿಲ್ಲಾ ಉಸ್ತುವಾರಿ ಸಚಿವರು ಹಾಗೂಶಾಸಕರ ಈ ಕೂಡಲೇ ಕೃಷಿ ಸಚಿವರ ಗಮನಕ್ಕೆ ತಂದುಕೃಷಿ ಇಲಾಖೆಗೆ ಅಗತ್ಯ ಸಿಬ್ಬಂದಿ ನೇಮಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ.
ಎಲ್ಲೆಲ್ಲಿ ಖಾಲಿ ಹುದ್ದೆಗಳು? :
ಹುದ್ದೆ /ಮಂಜೂರಾತಿ/ ಖಾಲಿ
ಕೃಷಿ ಅಧಿಕಾರಿ/ 25 /7
ಸಹಾಯಕ ಕೃಷಿ ಆಧಿಕಾರಿ 40 /30
ಡಿ-ಗ್ರೂಪ್ 10/ 8
ವಾಹನ ಚಾಲಕರು 3/ 3
ಅಧೀಕ್ಷಕರು 4/ 1
ಪ್ರ.ದ.ಸ 4 /3
ದ್ವಿ.ದ.ಸ 8/ 2
ಬೆರಳಚ್ಚುಗಾರರು 4/ 2
ಒಟ್ಟು 102/ 56
ಕೃಷಿ ಇಲಾಖೆಯಲ್ಲಿ ಸಿಬ್ಬಂದಿ ಕೊರತೆಯಿಂದ ಸಾಕಷ್ಟು ಕೆಲಸ ನಿಧಾನಗತಿಯಲ್ಲಿ ಸಾಗುತ್ತಿದೆ. ರೈತರು ಕಚೇರಿಗೆ ಅಲೆದಾಡುವಂತ ಸ್ಥಿತಿ ನಿರ್ಮಾಣ ವಾಗಿದೆ. ಸರ್ಕಾರ ಇನ್ನಾದರೂ ಎಚ್ಚೆತ್ತು ಕೊಂಡು ಕೃಷಿ ಇಲಾಖೆಗೆ ಸಿಬ್ಬಂದಿ ನೇಮಿಸಬೇಕು.– ಬಿದಲೂರು ರಮೇಶ್, ರೈತ ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ
ಜಿಲ್ಲೆಯಲ್ಲಿ ಕೃಷಿ ಇಲಾಖೆಯಲ್ಲಿ 56 ಸಿಬ್ಬಂದಿ ಕೊರತೆಇರುವುದು ನಮ್ಮ ಗಮನಕ್ಕೆ ಬಂದಿದೆ. ಇದರಸಂಬಂಧಪಟ್ಟಂತೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ಹಾಗೂ ಕೃಷಿ ಸಚಿವ ಬಿ.ಸಿ.ಪಾಟೀಲ್ ಗಮನಕ್ಕೆತರಲಾಗುವುದು. ಖಾಲಿಯಿರುವ ಹುದ್ದೆಗೆ ಭರ್ತಿ ಮಾಡಲು ಕೃಷಿ ಸಚಿವರಲ್ಲಿ ಮನವಿ ಮಾಡಲಾಗುವುದು. -ಎಚ್. ಎಂ. ರವಿಕುಮಾರ್, ಬಿಜೆಪಿ ರೈತ ಮೋರ್ಚಾಜಿಲ್ಲಾಧ್ಯಕ್ಷ
ಜಿಲ್ಲೆಯಲ್ಲಿ ಕೃಷಿ ಇಲಾಖೆಯಲ್ಲಿ 102 ಮಂಜೂರಾತಿ ಹುದ್ದೆಯಲ್ಲಿ 46ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ.ಇನ್ನೂ 56 ಹುದ್ದೆ ಖಾಲಿಯಿದೆ. ಇರುವಸಿಬ್ಬಂದಿಗಳೇ ಸಕಾಲದಲ್ಲಿ ರೈತರಿಗೆ ಕೆಲಸ ಕಾರ್ಯ ಮಾಡಿ ಕೊಡುತ್ತಿದ್ದಾರೆ. ಜಿಲ್ಲೆಯಲ್ಲಿ30 ಸಹಾಯಕ ಕೃಷಿ ಅಧಿಕಾರಿಅನಿವಾರ್ಯವಿದೆ. ಈಗಾಗಲೇ ಸಭೆಗಳಲ್ಲಿ ಸಚಿವರ ಗಮನಕ್ಕೆ ತರಲಾಗಿದೆ. – ಜಯಸ್ವಾಮಿ, ಜಿಲ್ಲಾ ಕೃಷಿ ಜಂಟಿ ನಿರ್ದೇಶಕ.
– ಎಸ್.ಮಹೇಶ್