Advertisement

Budget ಮಂಡನೆ ವೇಳೆ ಭದ್ರತಾ ಲೋಪ; ಶಾಸಕರ ಸೀಟ್ ನಲ್ಲಿ ಅನಾಮಿಕ!!

06:21 PM Jul 07, 2023 | Team Udayavani |

ವಿಧಾನಸಭೆ : ಸಿಎಂ ಸಿದ್ದರಾಮಯ್ಯ ಅವರುಶುಕ್ರವಾರ, ಜು 07 ರಂದು ಬಜೆಟ್ ಮಂಡಿಸುತ್ತಿದ್ದ ವೇಳೆ ಭದ್ರತಾ ಲೋಪವಾಗಿದ್ದು, ಅನಾಮಿಕ ವ್ಯಕ್ತಿಯೊಬ್ಬ ವಿಧಾನಸಭೆ ಪ್ರವೇಶಿಸಿದ್ದು ಮಾತ್ರವಲ್ಲದೇ 15 ನಿಮಿಷಗಳ ಜಾಲ ದೇವದುರ್ಗ ಜೆಡಿಎಸ್ ಶಾಸಕಿ ಕರೆಮ್ಮ ಜಿ ನಾಯಕ್ ಅವರು ಕುಳಿತುಕೊಳ್ಳಬೇಕಾಗಿದ್ದ ಆಸನದಲ್ಲಿ ಕುಳಿತುಕೊಂಡಿದ್ದಾನೆ.

Advertisement

ಅನಾಮಿಕನನ್ನು ಕಂಡು ಅನುಮಾನಗೊಂಡ ಜೆಡಿಎಸ್​ ಶಾಸಕ ಶರಣಗೌಡ ಕಂದಕೂರು ಅವರು ತತ್ ಕ್ಷಣ ಎದ್ದು ಹೋಗಿ ಸ್ಪೀಕರ್ ಯು.ಟಿ. ಖಾದರ್ ಅವರಿಗೆ ತಿಳಿಸಿದ್ದಾರೆ. ಅಷ್ಟರೊಳಗೆ ಅನಾಮಿಕ ಅಲ್ಲಿಂದ ಕಾಲು ಕಿತ್ತಿದ್ದ.ಈ ವಿಚಾರ ಆತಂಕಕ್ಕೂ ಕಾರಣವಾಗಿತ್ತು.

ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಕ್ಷಿಪ್ರ ಕಾರ್ಯಾಚರಣೆಗಿಳಿದು ಅನಾಮಿಕನನ್ನು ಪತ್ತೆ ಮಾಡಿ ವಶಕ್ಕೆ ಪಡೆದಿದ್ದಾರೆ. ಆತನನ್ನು ತಿಪ್ಪೇರುದ್ರ (72) ಎಂದು ಗುರುತಿಸಲಾಗಿದ್ದು, ಸದನವನ್ನು ಪ್ರವೇಶಿಸುವಾಗ ಮಾರ್ಷಲ್​ಗಳು ವಿಚಾರಿಸಿದ್ದು, ಮೊಳಕಾಲ್ಮೂರು ಶಾಸಕ ಎನ್.​ವೈ.ಗೋಪಾಲಕೃಷ್ಣ ಅವರ ಹೆಸರು ಹೇಳಿ ಅವಾಜ್​ ಹಾಕಿ ಸದನದೊಳಗೆ ಪ್ರವೇಶಿಸಿದ್ದ. ಕೈಯಲ್ಲಿ ಒಂದು ಬ್ಯಾಗ್​ ಕೂಡ ತಂದಿದ್ದ ಎಂದು ಪೊಲೀಸರ ಪ್ರಾಥಮಿಕ ವಿಚಾರಣೆಯಿಂದ ತಿಳಿದುಬಂದಿದೆ. ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ತೀವ್ರ ವಿಚಾರಣೆಗೊಳಪಡಿಸಲಾಗುತ್ತಿದ್ದು,  ಈ ಕುರಿತು ಹೆಚ್ಚಿನ ಮಾಹಿತಿ ತಿಳಿದುಬರಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next