Advertisement
ಕರ್ನಾಟಕ ಪಬ್ಲಿಕ್ ಸ್ಕೂಲ್ 1906ರಲ್ಲಿ ಆರಂಭಗೊಂಡಿದ್ದು, ಅಂದಿನಿಂದ ಇಂದಿನವರೆಗೂ ಪ್ರತೀ ವರ್ಷ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಲೇ ಇದೆ. 1ನೆ ತರಗತಿಯಲ್ಲಿ 2020-21ನೇ ಸಾಲಿನಲ್ಲಿ 56, 2021-22ನೇ ಸಾಲಿನಲ್ಲಿ 84 ವಿದ್ಯಾರ್ಥಿಗಳಿದ್ದಾರೆ. 2ನೇ ತರಗತಿಯಲ್ಲಿ ಕಳೆದ ವರ್ಷ 40, ಈ ಬಾರಿ 57 ವಿದ್ಯಾರ್ಥಿಗಳಿದ್ದಾರೆ. 3ನೇ ತರಗತಿಯಲ್ಲಿ ಹಿಂದಿನ ವರ್ಷ 38, ಈ ಬಾರಿ 52 ವಿದ್ಯಾರ್ಥಿಗಳಿದ್ದಾರೆ. 4ನೇ ತರಗತಿಯಲ್ಲಿ ಈ ಬಾರಿ 39, 5ನೇ ತರಗತಿಯಲ್ಲಿ ಈ ಬಾರಿ 40, 6ನೇ ತರಗತಿಯಲ್ಲಿ ಈ ಬಾರಿ 58, ಹಾಗೂ 7ನೇ ತರಗತಿಯಲ್ಲಿ ಈ ಬಾರಿ 76 ವಿದ್ಯಾರ್ಥಿಗಳಿದ್ದಾರೆ.
Related Articles
Advertisement
ಪ್ರೌಢಶಾಲಾ ಜಾಗದಲ್ಲಿ 3 ಕೊಠಡಿ:
ಕೊಠಡಿಗಳ ಕೊರತೆಯಿಂದಾಗಿ ಈಗ ಪ್ರೌಢಶಾಲಾ ಜಾಗದಲ್ಲಿನ ಮೂರು ಕೋಣೆಗಳಲ್ಲಿ ತರಗತಿ ನಡೆಸಲಾಗುತ್ತಿದೆ. ಶಿಥಿಲಗೊಂಡ ಕಟ್ಟಡದ ಹೆಂಚುಗಳು ಹಾರಿಹೋಗಿವೆ. ಪೊದೆಗಳು ಬೆಳೆದು ಶೌಚಾಲಯಕ್ಕೆ ಸಾಗಲು ಪುಟ್ಟಮಕ್ಕಳು ಹರಸಾಹಸಪಡಬೇಕಾಗಿದೆ. ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ಕೊಠಡಿ ಗಳ ಕೊರತೆ ನಿಭಾಯಿಸುವಲ್ಲಿ ಇಲಾಖೆ ತುರ್ತು ಕ್ರಮ ಕೈಗೊಳ್ಳಬೇಕಿದೆ.
ಶಿಕ್ಷಕರ ಕೊರತೆ:
1ನೇ ತರಗತಿಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಎ ಮತ್ತು¤ ಬಿ ವಿಭಾಗ ಆರಂಭಿಸಲಾಗಿದೆ. ಪ್ರತೀ ವಿಭಾಗದಲ್ಲೂ ಶಿಕ್ಷಕರ ಕೊರತೆ ಇದ್ದು ಹೆಚ್ಚುವರಿ 5 ಶಿಕ್ಷಕರ ಕೊರತೆ ಕಂಡುಬಂದಿದ್ದು, ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಶಿಕ್ಷಕರ ಸಂಖ್ಯೆಯನ್ನು ಹೆಚ್ಚಿಸಬೇಕಾದ ಆದ್ಯತೆ ಇಲಾಖೆ ನೀಡಬೇಕಿದೆ.
ಇಲಾಖೆ ಸೂಕ್ತ ಕ್ರಮ ವಹಿಸಲಿ:
ಶಾಲೆಯ ಪ್ರಾಥಮಿಕ ವಿಭಾಗಕ್ಕೆ ಕೊಠಡಿಗಳ ಕೊರತೆ ಇದೆ. ಹಳೆ ಕಟ್ಟಡದ ಏಲಂ ವಿಚಾರದಲ್ಲಿ ತಾಂತ್ರಿಕ ಸಮಸ್ಯೆ ಇದೆ. ಕಟ್ಟಡ ಅಪಾಯಕಾರಿ ಸ್ಥಿತಿಯಲ್ಲಿ ಇರುವುದರಿಂದ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು. ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ಕೊಠಡಿ ನಿರ್ಮಾಣಕ್ಕೆ ಅನುದಾನ ಬಿಡುಗಡೆಗೊಳಿಸಬೇಕು.– ಆನಂದ ಪೂಜಾರಿ, ಎಸ್‌ಡಿಎಂಸಿ ಅಧ್ಯಕ್ಷ
ಜ ಡಾ| ಸುಧಾಕರ ನಂಬಿಯಾರ್