Advertisement

ಓಡುವ ಮೋಡಗಳೇ ನಿಲ್ಲಿ

10:43 AM Sep 10, 2019 | Suhan S |

ಆಳಂದ: ಇಂದಲ್ಲ ನಾಳೆ ವರುಣದೇವ ಕೃಪೆ ತೋರುತ್ತಾನೆ ಎಂದು ನಿತ್ಯ ಮೋಡ ಮುಸುಕಿದ ವಾತಾವರಣದಲ್ಲೇ ಮುಗಿಲಿನತ್ತ ಚಿತ್ತ ಇಡುತ್ತಿರುವ ರೈತರಿಗೆ ಮಳೆ ಬಾರದಿರುವುದರಿಂದ ಚಿಂತೆ ಶುರುವಾಗಿದೆ.

Advertisement

ವಾರದಿಂದ ಆಕಾಶದಲ್ಲಿ ಮೋಡ ಮುಸುಕಿದ ವಾತಾವರಣ ಕಂಡರೂ ತುಂತುರು ಮಳೆ ಬಿಟ್ಟರೆ, ಭೂಮಿ ತೇವಾಂಶ ಆಗುವಷ್ಟು ಮಳೆ ಬರುತ್ತಿಲ್ಲ. ಇದರಿಂದ ಬಿತ್ತನೆಯಾದ ಬೆಳೆ ಗತಿಯೇನಪ್ಪ ಎಂದು ಕೈಚೆಲ್ಲಿ ಕುಳಿತಿದ್ದಾರೆ.

ರಾತ್ರಿ, ಹಗಲು ಆಕಾಶದಲ್ಲಿ ಮುಗಿಲು ಕಿತ್ತು ಬೀಳುವಂತೆ ಮೋಡಗಳು ಅಪ್ಪಳಿಸಿದರೂ ನಿರೀಕ್ಷಿತ ಮಳೆಯಾಗದೇ ಇರುವುದು ಮುಂದುವರಿದಿದೆ.

ಕಳೆದೊಂದು ವರ್ಷದಿಂದ ‘ಬರ’ ಎದುರಾಗಿದೆ. ಅಲ್ಲದೇ ಪ್ರಸಕ್ತ ಸಾಲಿನ ಮುಂಗಾರು ಮಳೆಯೂ ನಿರೀಕ್ಷಿತವಾಗಿ ಬಾರದೆ ಅಲ್ಪಾವಧಿ ಬೆಳೆಗಳಾದ ಹೆಸರು, ಉದ್ದು, ಸೋಯಾಬಿನ್‌ ಬೆಳೆ ಕೈಕೊಟ್ಟಿವೆ. ಬೆಳೆದರೂ ಇಳುವರಿಯಲ್ಲಿ ಗಣನೀಯವಾಗಿ ಕುಂಠಿತವಾಗಿದೆ.

ಸದ್ಯ ಮಳೆ ಕಣ್ಣು ಮುಚ್ಚಾಲೆ ನಡುವೆ ಹಿಂದು, ಮುಂದಾಗಿ ಬಿತ್ತನೆಯಾದ ಬೆಳೆಗಳಲ್ಲಿ ತೊಗರಿ, ಸೂರ್ಯಕಾಂತಿ ಹೀಗೆ ಇನ್ನಿತರ ಬೆಳೆಗಳು ಮಳೆ ಸಕಾಲಕ್ಕೆ ಬಂದರೆ ಮಾತ್ರ ಉತ್ತಮ ಇಳುವರಿ ನೀಡುವ ಸಾಧ್ಯತೆ ಇದೆ. ಇಲ್ಲವಾದಲ್ಲಿ ಕೃಷಿಗೆ ಮಾಡಿದ ಖರ್ಚು ಭರಿಸಲಾಗದೆ ರೈತರು ಆರ್ಥಿಕ ದಿವಾಳಿ ಎದುರಿಸುವಂತಾಗುತ್ತದೆ.

Advertisement

ಮತ್ತೂಂದಡೆ ಪಟ್ಟಣಗಳಲ್ಲಿನ ವ್ಯಾಪಾರ ವಹಿವಾಟಿಗೂ ತೀವ್ರ ಹಿನ್ನಡೆಯಾಗಿದೆ. ಮಳೆಯಿಲ್ಲದಕ್ಕೆ ಹಳ್ಳಿಯ ಗ್ರಾಹಕರೇ ಬರುತ್ತಿಲ್ಲ. ನಿತ್ಯದ ವ್ಯಾಪಾರ ಇಲ್ಲದೆ ಆಳುಗಳ ಪಗಾರ, ಅಂಗಡಿ ಬಾಡಿಗೆ ಭರಿಸುವುದು ಕಷ್ಟವಾಗಿ ಪರಿಣಮಿಸಿದೆ ಎಂದು ವ್ಯಾಪಾರಿಗಳು ಅವಲತ್ತುಕೊಳ್ಳುತ್ತಿದ್ದಾರೆ.

ಕಿಸಾನ್‌ ಸಮ್ಮಾನ ಯೋಜನೆ ಅಡಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಸೇರಿ ರೈತರ ನೆರವಿಗಾಗಿ ಘೋಷಿಸಿದ ವರ್ಷದಲ್ಲಿ ಮೂರು ಕಂತಿನ 10 ಸಾವಿರ ರೂ.ಗಳು ಅನೇಕರ ಖಾತೆಗೆ ಬಂದಿಲ್ಲ. ಸಂಕಷ್ಟದಲ್ಲಿರುವ ರೈತರಿಗೆ ಆರ್ಥಿಕ ನೆರವು ನೀಡಿ, ಕೃಷಿ ಸಲಕರಣೆ, ಬೀಜ, ಗೊಬ್ಬರ ಕಳೆನಾಶಕ, ಕೀಟನಾಶಕ ಔಷಧ ಸಂಪೂರ್ಣ ಉಚಿತವಾಗಿ ನೀಡಿ, ಬೆಳೆದ ಬೆಳೆಗೆ ಬೆಂಬಲ ಬೆಲೆ ಘೋಷಿಸಿ ಖರೀದಿ ಕೇಂದ್ರ ಆರಂಭಿಸಿ ತಕ್ಷಣವೇ ಹಣ ಒದಗಿಸಬೇಕು.• ಮಹಾದೇವಿ ಎ. ವಣದೆ,ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು

 

•ಮಹಾದೇವ ವಡಗಾಂವ

Advertisement

Udayavani is now on Telegram. Click here to join our channel and stay updated with the latest news.

Next