ಪುಣೆ, ಆ. 30: ಮಹಾರಾಷ್ಟ್ರದಲ್ಲಿ ಪ್ರಸಕ್ತ ಮಾನ್ಸೂನ್ ಋತುವಿನಲ್ಲಿ ಈವರೆಗೆ ಶೇ. 17ರಷ್ಟು ಹೆಚ್ಚಿನ ಮಳೆಯಾಗಿದೆ ಆದರೆ ಬರ ಪೀಡಿತ ವಿದರ್ಭದ ಎರಡು ಜಿಲ್ಲೆಗಳಾದ ಅಕೋಲಾ ಮತ್ತು ಯವತ್ಮಾಳ್ ಇನ್ನೂ ಮಳೆ ಕೊರತೆಯನ್ನು ಎದುರಿಸುತ್ತಿವೆ.
ಪ್ರಸಕ್ತ ಋತುವಿನಲ್ಲಿ ಜೂ. 1 ರಿಂದ ಆ. 29ರವರೆಗೆ ಉಭಯ ಜಿಲ್ಲೆಗಳಲ್ಲಿ ಶೇ. 25ರಷ್ಟು ಮಳೆಯ ಕೊರತೆ ದಾಖಲಾಗಿದ್ದರೆ, ಪುಣೆ ಸೇರಿದಂತೆ ಇತರ 14 ಜಿಲ್ಲೆಗಳಲ್ಲಿ ಈವರೆಗೆ ಸರಾಸರಿ ಅಥವಾ ಸಾಮಾನ್ಯಕ್ಕಿಂತ ಅಧಿಕ ಮಳೆಯಾಗಿದೆ. ಭಾರತ ಹವಾಮಾನ ಇಲಾಖೆ (ಐಎಂಡಿ) ಸೆ. 1ರವರೆಗೆ ವಿದರ್ಭಕ್ಕೆ ಕೇವಲ ಚದುರಿದ ಮಳೆಯ ಮುನ್ಸೂಚನೆ ನೀಡಿದೆ.
ಆ. 28 ರವರೆಗೆ (-) ಶೇ. 20ರಷ್ಟು ಮಳೆ ಕೊರತೆಯನ್ನು ಹೊಂದಿದ್ದ ಅಮರಾವತಿಯಲ್ಲಿ ಆ. 29ರಂದು ಉತ್ತಮ ಮಳೆಯಾಗಿದ್ದು, ಇದು ಜಿಲ್ಲೆಯ ಋತುಮಾನದ ಮಳೆಯು ಸಾಮಾನ್ಯದ ವ್ಯಾಪ್ತಿಯಲ್ಲಿ ಬರಲು ಸಹಾಯ ಮಾಡಿದೆ. ಆದಾಗ್ಯೂ, ಜಿಲ್ಲೆಯು ಪ್ರಸ್ತುತ ಶೇ.19ರಷ್ಟು ಮಳೆ ಕೊರತೆಯನ್ನು ಹೊಂದಿದೆ. ವಿದರ್ಭವು ಮುಂದಿನ ಮೂರು ದಿನಗಳಲ್ಲಿ ಚದುರಿದ ಮಳೆಯನ್ನು ಮಾತ್ರ ದಾಖಲಿಸಬಹುದು, ಆದರೆ ಅದರ ಎರಡೂ ಜಿಲ್ಲೆಗಳ ಶೇ. 25ರಷ್ಟು ಮಳೆಯ ಕೊರತೆ ಸರಿಹೊಂದುವ ಸಾಧ್ಯತೆಯಿದೆ. ಅನಂತರ ಎರಡೂ ಜಿಲ್ಲೆಗಳು ಮತ್ತೆ ಕೊರತೆಯ ವಲಯಕ್ಕೆ ಜಾರಿಬೀಳುವ ಸಾಧ್ಯತೆಗಳಿವೆ ಎಂದು ಐಎಂಡಿಯ ಪುಣೆ ವಿಭಾಗದ ಹವಾಮಾನ ಮುಖ್ಯಸ್ಥ ಅನುಪಮ್ ಕಶ್ಯಪಿ ನುಡಿದಿದ್ದಾರೆ. ಮಳೆಗಾಲದ ಆರಂಭದಿಂದಲೂ ಅಕೋಲಾ, ಯವತ್ಮಾಳ್ ಮತ್ತು ಅಮರಾವತಿ ಮಳೆ ಕೊರತೆಯಿಂದ ಬಳಲುತ್ತಿದ್ದವು ಎಂದು ಕಶ್ಯಪಿ ಹೇಳಿದ್ದಾರೆ.
ವಿದರ್ಭ ಮತ್ತು ಮರಾಠವಾಡ ಕಡಿಮೆ ಮಳೆಗಾಗಿ ಹೆಸರುವಾಸಿಯಾಗಿವೆ ಆದರೆ ಅಕೋಲಾ, ಯವತ್ಮಾಳ್ ಮತ್ತು ಅಮರಾವತಿ ಸೇರಿದಂತೆ ಕೆಲವು ಭಾಗಗಳನ್ನು ಹೊರತುಪಡಿಸಿ ಪ್ರಸಕ್ತ ಮಳೆಗಾಲದಲ್ಲಿ ಎರಡೂ ಪ್ರದೇಶಗಳಲ್ಲಿ ಉತ್ತಮ ಮಳೆಯಾಗಿದೆ. ಬಂಗಾಳಕೊಲ್ಲಿಯ ಹವಾಮಾನ ವ್ಯವಸ್ಥೆಗಳು ವಿದರ್ಭದ ಈಶಾನ್ಯದಲ್ಲಿರುವ ಈ ಜಿಲ್ಲೆಗಳನ್ನು ಬಿಟ್ಟುಬಿಟ್ಟವು. ವ್ಯವಸ್ಥೆಗಳು ತಮ್ಮ ಉತ್ತರ ಅಥವಾ ದಕ್ಷಿಣದಿಂದ ಸ್ಥಳಾಂತರಗೊಂಡವು, ಇದು ಇಲ್ಲಿ ಮಳೆಗೆ ಅಡ್ಡಿಯಾಯಿತು ಎಂದು ಅಧಿಕಾರಿ ನುಡಿದಿದ್ದಾರೆ.