Advertisement
ಕಳೆದ ಬಾರಿ ಮೇ 29ರಂದು 24 ಗಂಟೆಯಲ್ಲಿ ಬರೋಬ್ಬರಿ 360 ಮಿ.ಮೀ. ಮಳೆಯಾಗಿ ನಗರದಲ್ಲಿ ಒಂದು ದಿನದ ದಾಖಲೆ ಮಳೆ ಸುರಿದಿತ್ತು. ಅದರಿಂದ ನಗರದ ಪ್ರಮುಖ ರಾಷ್ಟ್ರೀಯ ಹೆದ್ದಾರಿ ಸಂಪರ್ಕ ಕಡಿತಗೊಂಡಿತ್ತು. ರಾ.ಹೆ. 66ರ ಪಂಪ್‌ವೆಲ್ ಜಂಕ್ಷನ್ ನಲ್ಲಿ ಮತ್ತು ರಾ.ಹೆ. 75ರ ಪಡೀಲ್ ರೈಲ್ವೇ ಅಂಡರ್ ಪಾಸ್‌ನಲ್ಲಿ ಮತ್ತು ಕೊಟ್ಟಾರ ಚೌಕಿಯಲ್ಲಿ ಓವರ್ ಬ್ರಿಜ್ ಬಳಿ ರಸ್ತೆಗೆ ನೆರೆ ನೀರು ಬಿದ್ದ ಕಾರಣ ನಗರ ಪ್ರವೇಶಿಸುವ ಮತ್ತು ನಗರದಿಂದ ಹೊರ ಹೋಗುವ ವಾಹನಗಳು ಸಂಚರಿಸಲಾಗದೆ ನಗರದ ಸಂಪರ್ಕ ಕಡಿತಗೊಂಡಿತ್ತು.
Related Articles
ದ.ಕ. ಜಿಲ್ಲೆಗೆ ಹೋಲಿಕೆ ಮಾಡಿದರೆ ಕಳೆದ ಬಾರಿ ನಗರದಲ್ಲಿ ಹೆಚ್ಚಿನ ಪ್ರಮಾಣದ ಪೂರ್ವ ಮುಂಗಾರು ಮಳೆಯಾಗಿತ್ತು. ಆದರೆ, ಈ ಬಾರಿ ಜಿಲ್ಲೆಯಲ್ಲಿಯೇ ಮಂಗಳೂರು ನಗರದಲ್ಲಿ ಅತೀ ಕಡಿಮೆ ಪೂರ್ವ ಮುಂಗಾರು ಮಳೆಯಾಗಿದೆ. ಮಾರ್ಚ್‌ನಿಂದ ಮೇ 29ರ ವರೆಗೆ ಅಂಕಿ ಅಂಶವನ್ನು ಗಮನಿಸಿದರೆ, ನಗರದಲ್ಲಿ ಶೇ 80ರಷ್ಟು ಮಳೆ ಕೊರತೆ ಇದೆ. ಎರಡನೇ ಸ್ಥಾನ ಬಂಟ್ವಾಳ ತಾಲೂಕಿಗೆ ಇದ್ದು, ಶೇ.69, ಪುತ್ತೂರು ತಾಲೂಕು ಶೇ.59, ಬೆಳ್ತಂಗಡಿ ತಾಲೂಕು ಶೇ.53, ಸುಳ್ಯ ತಾಲೂಕಿನಲ್ಲಿ ಶೇ.38ರಷ್ಟು ಮುಂಗಾರು ಪೂರ್ವ ಮಳೆ ಕೊರತೆ ಇದೆ.
Advertisement
ಈ ಬಾರಿ ಕೇವಲ ತುಂತುರು ಮಳೆಕಳೆದ ವರ್ಷ ಮೇ 29ರಂದು ನಗರದಾದ್ಯಂತ ಬೆಳಗ್ಗಿನಿಂದಲೇ ಜಿಟಿ ಜಿಟಿ ಮಳೆ ಆರಂಭವಾಗಿತ್ತು. ಹೊತ್ತು ಕಳೆದಂತೆ ಪ್ರಮಾಣ ಹೆಚ್ಚಾಗಿತ್ತು. ಆದರೆ, ಈ ಬಾರಿ ಮೇ 29ರಂದು ಬೆಳಗ್ಗೆ ಮೋಡ ಮುಸುಕಿದ ವಾತಾವರಣ ಇತ್ತು. ಬೆಳಗ್ಗೆ 8.15ರ ವೇಳಗೆ ತುಂತುರು ಮಳೆಯಾಗಿದೆ. ಸಾಧಾರಣ ಮಳೆ ಸಾಧ್ಯತೆ
ದಕ್ಷಿಣ ಒಳನಾಡಿನಲ್ಲಿ ಮೇಲ್ಮೆ ç ಸುಳಿಗಾಳಿ ಇದ್ದು, ಪರಿಣಾಮ ದಕ್ಷಿಣ ಕನ್ನಡ ಜಿಲ್ಲೆ ಸಹಿತ ಕರಾವಳಿಯಾದ್ಯಂತ ಅಲ್ಲಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಸದ್ಯ ವಾಡಿಕೆಗಿಂತ ಹೆಚ್ಚು ಉಷ್ಣಾಂಶವಿದ್ದು, ಇದೇ ರೀತಿ ಮುಂದುವರಿಯುವ ಸಾಧ್ಯತೆ ಇದೆ.
- ಶ್ರೀನಿವಾಸ ರೆಡ್ಡಿ,
ಕೆಎಸ್‌ಎನ್‌ಡಿಎಂಸಿ ನಿರ್ದೇಶಕ