Advertisement
ಕೆಲವು ದಿನಗಳಿಂದ ದಕ್ಷಿಣ ಕನ್ನಡ, ಉಡುಪಿ ಸಹಿತ ಕರಾವಳಿಯಲ್ಲಿ ಉತ್ತಮ ಮಳೆ ಸುರಿಯುತ್ತಿದ್ದರೂ ವಾಡಿಕೆಯಂತೆ ಇನ್ನೂ ಮಳೆಯಾಗಿಲ್ಲ. ರಾಜ್ಯದ ಮೈಸೂರು (ಶೇ. 17) ಹೊರತುಪಡಿಸಿ ಉತ್ತರ ಒಳ ನಾಡಿನ ಮತ್ತು ದಕ್ಷಿಣ ಒಳನಾಡಿನ ಎಲ್ಲ ಜಿಲ್ಲೆಗಳಲ್ಲಿ ವಾಡಿಕೆಗಿಂತ ಉತ್ತಮ ಸುರಿದಿದೆ. ಮಲೆನಾಡು ವಿಭಾಗದ ಶಿವಮೊಗ್ಗ, ಹಾಸನ, ಚಿಕ್ಕಮಗಳೂರು, ಕೊಡಗು ಮತ್ತು ಕರಾವಳಿ ವಿಭಾಗದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆ ಕೊರತೆ ಇದೆ.
Related Articles
Advertisement
ಕಳೆದ ವರ್ಷ ಇದೇ ಅವಧಿಯಲ್ಲಿ ಮಲೆನಾಡಿನಲ್ಲಿ 1,011 ಮಿ.ಮೀ. ವಾಡಿಕೆ ಮಳೆಯಲ್ಲಿ 627 ಮಿ.ಮೀ. ಮಳೆಯಾಗಿ ಅತೀ ಹೆಚ್ಚು ಅಂದರೆ ಶೇ.38ರಷ್ಟು ಮಳೆ ಪ್ರಮಾಣ ಕಡಿಮೆಯಾಗಿತ್ತು. ಈ ವರ್ಷ 868 ಮಿ.ಮೀ. ಮಳೆಯಾಗಿ ಶೇ.14ರಷ್ಟು ಮಳೆ ಪ್ರಮಾಣ ಕಡಿಮೆಯಾಗಿದೆ.
ವಿಭಾಗವಾರು ಮಳೆ ಕೊರತೆ :
ವಿಭಾಗ ಮಳೆ ಕೊರತೆ (ಶೇ.)
ಮಲೆನಾಡು
ಶಿವಮೊಗ್ಗ 10
ಹಾಸನ 7
ಚಿಕ್ಕಮಗಳೂರು 16
ಕೊಡಗು 24
ಕರಾವಳಿ
ದಕ್ಷಿಣ ಕನ್ನಡ 32
ಉಡುಪಿ 22
ಉತ್ತರ ಕನ್ನಡ 1
ಹವಾಮಾನ ಇಲಾಖೆಯ ಸದ್ಯದ ಮುನ್ಸೂಚನೆಯಂತೆ ದಕ್ಷಿಣ ಕನ್ನಡ, ಉಡುಪಿ ಸಹಿತ ಕರಾವಳಿ ಭಾಗದಲ್ಲಿ ಸದ್ಯಕ್ಕೆ ದೊಡ್ಡ ಪ್ರಮಾಣದಲ್ಲಿ ಮಳೆ ಸುರಿಯುವುದು ಅನುಮಾನ. ಸದ್ಯ ಕರಾವಳಿ ಭಾಗದಲ್ಲಿ ಮೋಡಗಳು ಸೃಷ್ಟಿಯಾಗದ ಪರಿಣಾಮ ಉತ್ತರ ಒಳನಾಡಿನ ಮತ್ತು ದಕ್ಷಿಣ ಒಳನಾಡಿನ ಮಳೆ ಸುರಿಯಬಹುದು. ಕರಾವಳಿಯಲ್ಲಿ ಮಳೆ ಕಡಿಮೆಯಾದರೂ ಯಾವುದೇ ರೀತಿಯ ತೊಂದರೆಯಾಗದು. -ಡಾ| ರಾಜೇಗೌಡ, ಕೃಷಿ ವಿ.ವಿ. ಹವಾಮಾನ ವಿಜ್ಞಾನಿ