Advertisement
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ರೈತರಿಗೆ ರಾಗಿ ಬೆಳೆ ಪ್ರಮುಖ ಬೆಲೆಯಾಗಿದ್ದು. ರಾಗಿ ಬೆಳೆದು ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ ಮಳೆರಾಯ ಕೈ ಕೊಟ್ಟಿರುವುದರಿಂದ ರಾಗಿ ಬೆಳೆಗೆ ಇಳುವರಿ ಕುಸಿತಗೊಳ್ಳಲಿದೆ. ರಾಗಿ ಬರೆದಿದ್ದರೂ ಸಹ ರೈತರಿಗೆ ರಾಗಿ ಹುಲ್ಲು ಲಭ್ಯವಾಗುತ್ತದೆ. ಒಂದು ವಾರಗಳ ಕಾಲ ಉತ್ತಮ ಮಳೆಯಾದರೆ ಮಾತ್ರ ರಾಗಿ ಹುಲ್ಲು ಬರಲು ಸಾಧ್ಯವಾಗುತ್ತದೆ. ಇಲ್ಲದಿದ್ದರೆ ಮುಂದಿನ ಬೇಸಿಗೆಗೆ ಮೇವಿಗೆ ಹೆಚ್ಚಿನ ಸಮಸ್ಯೆ ತೋರಿಸಬೇಕಾಗುತ್ತದೆ ಎಂದು ರೈತರು ಹೇಳುತ್ತಾರೆ.
Related Articles
Advertisement
ಹೈನುಗಾರಿಕೆ, ರೇಷ್ಮೆ ಎರಡು ಕಣ್ಣುಗಳಿದ್ದಂತೆ: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ಜಿಲ್ಲಾ ಕೇಂದ್ರ ಕಚೇರಿಗಳು ತಾಲೂಕಿಗೆ ಬಂದಿರುವುದು. ತಾಲೂಕಿನ ಚನ್ನರಾಯಪಟ್ಟಣ ಹೋಬಳಿಯಲ್ಲಿ ಕೆಐಡಿಬಿ ಭೂಸ್ವಾಧೀನ ಪ್ರಕ್ರಿಯೆ ಹಾಗೂ ಜಿಲ್ಲೆಯಲ್ಲಿ ಸಾಕಷ್ಟು ಭೂಮಿಗಳು ಭೂಸ್ವಾಧೀನವಾಗಿದ್ದರೂ ಸಹ ಜಿಲ್ಲೆಯ ರೈತರು ಇರುವ ಅಲ್ಪಸ್ವಲ್ಪದ ನೀರಿನಲ್ಲಿಯೇ ಹಸಿರು ಮೇವನ್ನು ಬೆಳೆಯುತ್ತಾರೆ. ತಾಲೂಕಿನಲ್ಲಿ ಇಂದಿಗೂ ಹೈನುಗಾರಿಕೆ ಮತ್ತು ರೇಷ್ಮೆ ರೈತರ ಪಾಲಿಗೆ ಎರಡು ಕಣ್ಣುಗಳಿದ್ದಂತೆ. ಬೋರ್ ವೆಲ್ ಗಳನ್ನು ಕೊರೆಸಿದರೆ 1200 ರಿಂದ 1500ಅಡಿಗೆ ಕೊರೆಸಿದರೂ ಸಹ ನೀರು ಸಿಗುವುದಿಲ್ಲ. ಕಳೆದ ವರ್ಷ ಉತ್ತಮ ಮಳೆಯಾಗಿರುವುದರಿಂದ ಮೇವಿನ ಸಮಸ್ಯೆ ಮತ್ತು ಕೆರೆಗಳಲ್ಲಿ ನೀರು ಇರುವುದರಿಂದ ಅಂತರ್ಜಲ ಮಟ್ಟ ಹೆಚ್ಚಳ ಹಾಗೂ ನೀರಿನ ಸಮಸ್ಯೆ ಹಾಗೂ ಮೇವಿನ ಸಮಸ್ಯೆ ಇಲ್ಲದಂತಾಗಿದೆ.
ಮಳೆ ಇಲ್ಲದೇ ಇರುವುದರಿಂದ ಮೇವಿಗೆ ಯಾವುದೇ ಸಮಸ್ಯೆ ಜಿಲ್ಲೆಯಲ್ಲಿ ಬಂದಿಲ್ಲ. 38 ವಾರಕ್ಕೆ ಆಗುವಷ್ಟು ಮೇವು ಸಂಗ್ರಹಿಸಲಾಗಿದೆ. ಮಳೆ ಬರದೇ ಇದ್ದರೆ ಮುಂದೆ ಸಾಕಷ್ಟು ಸಮಸ್ಯೆಗಳನ್ನು ಎದುರಿಸ ಬೇಕಾಗುತ್ತದೆ. 40,000 ಮೇವಿನ ಮಿನಿ ಕಿಟ್ ವಿತರಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. – ಡಾ.ಜಗದೀಶ್, ಉಪನಿರ್ದೇಶಕರು ಪಶುಪಾಲನ ಇಲಾಖೆ
ಮಳೆ ಇಲ್ಲದೆ ಬರಗಾಲವನ್ನು ಎದುರಿಸು ತ್ತಿದ್ದೇವೆ. ಮಳೆ ನಾಲ್ಕೈದು ದಿನದಲ್ಲಿ ಬರೆದಿದ್ದರೆ ಮೇವಿಗೆ ಸಮಸ್ಯೆ ಎದುರಿಸ ಬೇಕಾಗುತ್ತದೆ. ಅಂತರ್ಜಲ ಮಟ್ಟ ಕುಸಿಯ ತೊಡಗಿದೆ. ಮೇವಿನ ಸಮಸ್ಯೆ ಎದುರಾಗುವ ಲಕ್ಷಣಗಳು ಗೋಚರಿಸುತ್ತಿದ್ದು, ಇದರಿಂದ ಮೇವಿಗೆ ಈಗ ಹೆಚ್ಚಿನ ಬೇಡಿಕೆ ಶುರುವಾಗಿದೆ. ● ರಾಜಣ್ಣ, ರೈತ
– ಎಸ್.ಮಹೇಶ್