Advertisement
ಆಲೂರು ತಾಲೂಕಿನ ಹಂತನಮನೆ ಬಳಿ ಸುಮಾರು ಮೂರ್ನಾಲ್ಕು ದಶಕಗಳಿಂದ ಸುಸಜ್ಜಿತವಾದ ರೈಲ್ವೇ ನಿಲ್ದಾಣವಿದ್ದು ಅದರೆ ಇದುವರೆವಿಗೂ ರೈಲು ನಿಲುಗಡೆ ಭಾಗ್ಯ ಮಾತ್ರ ಇರಲಿಲ್ಲ. ಈ ಬಗ್ಗೆ ಹಲವು ಬಾರಿ ವಿವಿಧ ಸಂಘಟನೆಗಳಿಂದ ಪ್ರತಿಭಟನೆ ನಡೆಸಿ ಮಾಜಿ ಪ್ರಧಾನಮಂತ್ರಿ ಹೆಚ್.ಡಿ.ದೇವೇ ಗೌಡ, ಸಂಸದ ಪ್ರಜ್ವಲ್ ರೇವಣ್ಣ ಹಾಗೂ ಶಾಸಕ ಎಚ್.ಕೆ.ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಲಾಗಿತ್ತು. ಅದರೆ ಯಾವ ಪ್ರಯೋಜನವಾಗಿರಲಿಲ್ಲ. ಇದು ಜನಸಾಮಾನ್ಯರಲ್ಲಿ ಅಸಮಾಧಾನ ವ್ಯಕ್ತಪಡಿಸಿ ದ್ದರು.
Related Articles
Advertisement
ರಾಜಕೀಯ ಗಿಮಿಕ್ ಆಗದಿರಲಿ: ಇದುವರೆವಿಗೂ ಈ ಬಗ್ಗೆ ದ್ವನಿ ಎತ್ತದ ಶಾಸಕ ಎಚ್. ಕೆ.ಕುಮಾರಸ್ವಾಮಿ ಶುಕ್ರವಾರ ವಿಧಾನಸಭೆ ಅಧಿವೇಶನದಲ್ಲಿ ಮಾತನಾಡಿದ್ದಾರೆ. ಮೂರು ಬಾರಿ ಇವರೇ ಶಾಸಕರಾಗಿದ್ದಾರೆ. ಇವರಿಗೆ ತಾಲೂಕಿನ ಜನ ರೈಲು ನಿಲುಗಡೆ ಮಾಡಿಸಬೇಡಿ ಎಂದು ಕೈ ಹಿಡಿದಿದ್ದರಾ? ರೈಲ್ವೇ ಇಲಾಖೆ ರೈಲು ನಿಲುಗಡೆ ಬಗ್ಗೆ ಆಗುತ್ತಿರುವ ಬೆಳವಣಿಗೆ ತಿಳಿದು ಇದರ ಫಲ ಬೇರೆ ಯವರಿಗೆ ಸೀಗಬಾರದು ಎನ್ನುವ ಉದ್ದೇಶದಿಂದ ವಿಧಾನಸಭೆ ಅಧಿವೇಶನದಲ್ಲಿ ಮಾತನಾಡಿದ್ದಾರೆ. ಕ್ಷೇತ್ರದ ಜನರ ಗಮನ ಬೇರೆಡೆಗೆ ಹೋಗ ಬಾರದು ಎನ್ನುವ ತಂತ್ರ ಅಷ್ಟೇ ಎಂದು ರಾಧಮ್ಮ ಜನಸ್ಪಂಧನ ಸಂಸ್ಥೆ ಮುಖ್ಯಸ್ಥ ಹೇಮಂತ್ ಕುಮಾರ್ ಲೇವಡಿ ಮಾಡಿದ್ದಾರೆ.
ಮಲೆನಾಡು ಕರ್ನಾಟಕ ಘೊಷಣೆಗೆ ಶಾಸಕರ ಆಗ್ರಹ :
ವಿಧಾನಸಭೆ: ಮಲೆನಾಡು ಪ್ರದೇಶ ಹೊಂದಿ ರುವ ಜಿಲ್ಲೆಗಳನ್ನು ಒಟ್ಟುಗೂಡಿಸಿ ಅಭಿವೃದ್ಧಿ ದೃಷ್ಟಿ ಯಿಂದ ಮಲೆನಾಡು ಕರ್ನಾಟಕ ಎಂದು ಘೋ ಷಣೆ ಮಾಡಬೇಕೆಂದು ಜೆಡಿಎಸ್ ಶಾಸಕ ಎಚ್. ಕೆ. ಕುಮಾರಸ್ವಾಮಿ ಮನವಿ ಮಾಡಿದರು. ಬೇಡಿಕೆಗಳ ಮೇಲಿನ ಚರ್ಚೆಯಲ್ಲಿ ಶುಕ್ರವಾರ ಮಾತನಾಡಿದ ಅವರು, ಮಲೆನಾಡು ಪ್ರದೇಶದ ಜಿಲ್ಲೆಗಳಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಅಭಿವೃದ್ಧಿ ದೃಷ್ಟಿಯಿಂದ ಕಿತ್ತೂರು ಕರ್ನಾಟಕ ಘೋಷಣೆ ಮಾಡಿದಂತೆ ಮಲೆನಾಡು ಕರ್ನಾಟಕ ಘೋಷಣೆ ಮಾಡಿ, ಈ ಭಾಗದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಬೇಕು ಎಂದರು.
ಅನುದಾನದ ಹಂ ಚಿಕೆಯಲ್ಲಿ ಸಾಕಷ್ಟು ತಾರತಮ್ಯವಾಗುತ್ತಿದೆ. ಜನಸಂಖ್ಯೆ ಆಧಾರದ ಮೇಲೆ ಅನುದಾನ ನೀಡು ವ ವವ್ಯಸ್ಥೆ ಆಗಬೇಕು. ಉಡುಪಿ, ದಕ್ಷಿಣ ಕನ್ನಡ ದಲ್ಲಿ ಜನಸಂಖ್ಯೆ ಕಡಿಮೆ ಇದ್ದರೂ, ಅಲ್ಲಿಗೆ 30 ಕೋಟಿ ರೂ. ನೀಡುತ್ತಾರೆ. ನಮಗೆ 2 ಕೋಟಿ ಕೊಡುತ್ತಾರೆ. ಈ ತಾರತಮ್ಯ ನಿಲ್ಲಬೇಕು. ಇಲ್ಲದಿ ದ್ದರೇ ಕಾನೂನು ಮೆಟ್ಟಿಲು ಹತ್ತಬೇಕಾಗುತ್ತದೆ ಎಂದು ಹೇಳಿದರು. ಸರ್ಕಾರದಲ್ಲಿ ಅನಗತ್ಯ ಹುದ್ದೆಗಳನ್ನು ಕಡಿತ ಮಾಡಬೇಕು. ಅರಣ್ಯ ಇಲಾಖೆ ಕಾಡು ಪ್ರಾಣಿಗಳ ಹಾವಳಿ ತಪ್ಪಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಎಚ್. ಕೆ.ಕುಮಾರಸ್ವಾಮಿ ಸಲಹೆ ನೀಡಿದರು.
– ಟಿ.ಕೆ.ಕುಮಾರಸ್ವಾಮಿ ಟಿ.ತಿಮ್ಮನಹಳ್ಳಿ