ತುಮಕೂರು: ಜಿಲ್ಲಾ ಪಂಚಾಯಿತ್ ಸಭಾಂಗಣದಲ್ಲಿ ಶುಕ್ರವಾರ ಜಿಪಂ ಅಧ್ಯಕ್ಷೆ ಲತಾ ರವಿಕುಮಾರ್ ಅಧ್ಯಕ್ಷತೆಯಲ್ಲಿ ನಡೆಯ ಬೇಕಾ ಗಿದ್ದ ಸಾಮಾನ್ಯ ಸಭೆ ನಿರೀಕ್ಷೆಯಂತೆ ಸದಸ್ಯರ ಕೋರಂ ಕೊರತೆಯಿಂದ ಅನಿದಿಷ್ಠಾವಧಿವರೆಗೆ ಸಭೆಯನ್ನು ಮುಂದೂಡಲಾಯಿತು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶುಕ್ರವಾರಬೆಳಗ್ಗೆ 11 ಗಂಟೆಗೆಸಭೆ ಆರಂಭವಾಗ ಬೇಕಾಗಿತ್ತು, ಆದರೆ 12 ಗಂಟೆಯಾದರೂ ಸಭೆ ನಡೆಸಲು ಅಗತ್ಯವಿರುವ ಮೂರನೇ ಒಂದರಷ್ಟು ಸದಸ್ಯರು ಹಾಜರಾಗದ ಹಿನ್ನಲೆಯಲ್ಲಿ ಸಭೆಯನ್ನು ಅಧ್ಯಕ್ಷರು ಮುಂದೂಡಿದರು.
ಸದಸ್ಯರು ಗೈರು: ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಲತಾ ರವಿಕುಮಾರ್ ಅಧ್ಯಕ್ಷತೆಯಲ್ಲಿ ಸಭೆ ಆರಂಭ ವಾಗುತ್ತಲೇ ಸಭೆಗೆ ಕೋರಂ ಕೊರತೆ ಎದುರಾಗಿತ್ತು, ಜಿಪಂ ಸದಸ್ಯರು ಸಭೆಗೆ ಭಾಗವಹಿಸರಲಿಲ್ಲ ಸಭೆಗೆ ಸರಿಯಾಗಿ 11 ಗಂಟೆಗೆ ಜಿಪಂ ಅಧ್ಯಕ್ಷೆ ಲತಾ ರವಿಕುಮಾರ್ ಮತ್ತು ಸಿಇಒ ಶುಭಕಲ್ಯಾಣ್ ಆಗಮಿಸಿದರು,
ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು ಆದರೆ ಸಭೆಗೆಬರಬೇಕಾಗಿದ್ದ ಸದಸ್ಯರು ಮಾತ್ರ ಬಂದಿರಲಿಲ್ಲ. ಸಭೆ ಅನಿರ್ದಿಷ್ಠಾವಧಿಗೆ ಮುಂದೂಡಿಕೆ: ನಂತರ ಹಂತ ಹಂತವಾಗಿ ಕಾಂಗ್ರೆಸ್ ಪಕ್ಷದ ಒಬ್ಬೊಬ್ಬರೇ ಸದಸ್ಯರು ಸಭೆಗೆ ಬರತೊಡಗಿದರು. ಅಧ್ಯಕ್ಷರು 11 ಗಂಟೆಯಿಂದ 12 ಗಂಟೆಯ ವರೆಗೂ ಸದಸ್ಯರು ಬರಬಹುದು ಎಂದು ಸಭೆಯಲ್ಲಿಯೇ ಕಾದು ಕುಳಿತರು ಆದರೆ 12 ಗಂಟೆಯ ವೇಳೆಗೆ 14 ಜನ ಸದಸ್ಯರು ಸಭೆಗೆ ಹಾಜರಾದರೂ ಆಡಳಿತ ಪಕ್ಷದ ಜೆಡಿಎಸ್, ಮತ್ತು ಬಿಜೆಪಿ ಸದಸ್ಯರು ಸಭೆಗೆ ಬಂದಿರಲಿಲ್ಲ. ಜಿಪಂ ಉಪಾಧ್ಯಕ್ಷೆ ಶಾರದಾ ನರಸಿಂಹಮೂರ್ತಿ ಅವರೂ ಗೈರಾಗಿದ್ದರು ಕೋರಂ ಇಲ್ಲದೇ ಇದ್ದುದರಿಂದ ಅಧ್ಯಕ್ಷೆ ಲತಾ ರವಿಕುಮಾರ್ ಸಭೆಯನ್ನುಅನಿರ್ದಿಷ್ಠಾವಧಿಗೆ ಮುಂದೂಡಿದರು.
15ನೇಹಣಕಾಸು ಅನುಮೋದನೆಯಾಗಿಲ್ಲ: ಈ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅಧ್ಯಕ್ಷೆ ಲತಾ ರವಿಕುಮಾರ್, ಜಿಲ್ಲಾ ಪಂಚಾಯತ್‌ಗೆ ಬಿಡುಗಡೆಯಾಗಿರುವ 15ನೇ ಹಣಕಾಸು ಯೋಜನೆಯ6ಕೋಟಿ ರೂ. ಅನುದಾನಕ್ಕೆ ಕ್ರಿಯಾಯೋಜನೆ ತಯಾರಿಸಲು ಅನುಮೋದನೆ ನೀಡಬೇಕು, ಅಲ್ಲದೆ ವಿವಿಧ ಇಲಾಖೆಯಗಳ ಲಿಂಕ್ ಡಾಕ್ಯುಮೆಂಟ್ ಯೋಜನೆಗಳ ಕ್ರಿಯಾಯೋಜನೆಗೆ ಅನುಮೋದನೆ ನೀಡುವುದು ತುರ್ತು ಅಗತ್ಯವಿದ್ದ ಕಾರಣ ಇಂದಿನ ಸಾಮಾನ್ಯ ಸಭೆಯನ್ನು ಕರೆಯಲಾಗಿತ್ತು ಎಂದರು. ಆದರೆ ಸದಸ್ಯರು ಸಭೆಗೆ ಗೈರು ಹಾಜರಾಗಿ ಕೋರಂ ಇಲ್ಲದಂತೆ ಮಾಡಿದ್ದಾರೆ ಎಂದರು.
ಪಕ್ಷದ ಹೈಕಮಾಂಡ್ ತೀರ್ಮಾನಕ್ಕೆ ಬದ್ಧ: ಸದಸ್ಯರು ಸಭೆಗೆ ಬಾರದೇ ಈ ರೀತಿ ಮಾಡಿದ್ದು ಬೇಸರ ತಂದಿದೆ ಎಂದ ಅಧ್ಯಕ್ಷರು, ಅವಿಶ್ವಾಸ ನಿರ್ಣಯ ಕುರಿತು ಕರೆದಿರುವ ಸಭೆ ಬಗ್ಗೆ ನಾನು ಈಗ ಏನೂ ಪ್ರತಿಕ್ರಿಯೆ ನೀಡುವುದಿಲ್ಲ ಪಕ್ಷದ ಹೈಕಮಾಂಡ್ ತೀರ್ಮಾನಕ್ಕೆ ಬದ್ಧ ಎಂದರು.