Advertisement
ಮಕ್ಕಳಿಲ್ಲದಿರುವುದೂ ಅಡ್ಡಿಸರಕಾರಿ ಶಾಲೆಗೆ ಮಕ್ಕಳ ದಾಖಲಾತಿ ಕಡಿಮೆಯಾದ ಹಿನ್ನೆಲೆ ಯಲ್ಲಿ 200ಕ್ಕಿಂತ ಹೆಚ್ಚು ಮಕ್ಕಳಿರುವ ಶಾಲೆಗಳಿಗೆ ಮಾತ್ರ ದೈಹಿಕ ಶಿಕ್ಷಕರನ್ನು ನೇಮಕ ಮಾಡಲಾಗುತ್ತಿದೆ. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ಬಹುತೇಕ ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ ದೈ.ಶಿ. ಶಿಕ್ಷಕರ ಕೊರತೆ ಗಣನೀಯವಾಗಿದೆ.
ಇದರಿಂದ ಮಕ್ಕಳ ಮಾನಸಿಕ ಮತ್ತು ದೈಹಿಕ ಸದೃಢತೆಗೆ ಒತ್ತು ನೀಡಬೇಕಾದ ಕ್ರೀಡಾ ಚಟುವಟಿಕೆಗಳು ನಿರ್ಲಕ್ಷ್ಯಕ್ಕೆ ಈಡಾಗುತ್ತಿವೆ ಎಂಬುದು ಪೋಷಕರ ಅಳಲು. ಮಕ್ಕಳು ಕಡಿಮೆ ಇದ್ದರೂ ದೈಹಿಕ ಶಿಕ್ಷಣ ಶಿಕ್ಷಕರ ನೇಮಕ ಮಾಡಬೇಕು ಎಂಬುದು ಅವರ ಆಗ್ರಹ. ಸರಕಾರವು ಸರಕಾರಿ ಶಾಲೆಗಳಲ್ಲಿ ಅತಿಥಿ ಶಿಕ್ಷಕರನ್ನು ನೇಮಿಸಿರುವಂತೆ ದೈ.ಶಿ. ಶಿಕ್ಷಕರನ್ನು ನೇಮಿಸಬೇಕು ಎಂಬುದು ಶಿಕ್ಷಣ ತಜ್ಞರ ಅಭಿಪ್ರಾಯ.
– ಬಾಲಕೃಷ್ಣ ಭೀಮಗುಳಿ