Advertisement
ಕೆಎಸ್‌ಆರ್‌ಟಿಸಿ ಮತ್ತು ಖಾಸಗಿ ಸಂಸ್ಥೆಯಾದ ಭಾರತಿ ಸಂಸ್ಥೆಗೆ ಸೇರಿದ ಬಸ್‌ಗಳು ಮಾತ್ರ ಈಗ ಓಡಾಟ ನಡೆಸುತ್ತಿವೆ. ಉಡುಪಿ ಕುಂದಾಪುರ ಮಧ್ಯೆ ದಿನವೊಂದಕ್ಕೆ ತಲಾ ಮೂರು ಬಾರಿಯಂತೆ ಆರು ಟ್ರಿಪ್ ಗಳಲ್ಲಿ ಭಾರತಿ ಬಸ್ ಓಡಾಟ ನಡೆಸುತ್ತಿದೆ. ಬೆಳಗ್ಗೆ 11ರಿಂದ ಸಂಜೆ 4ರ ತನಕ ಬಸ್‌ಗಳಲ್ಲಿ 7ರಿಂದ 8 ಮಂದಿಯಷ್ಟು ಪ್ರಯಾಣಿಕರು ಮಾತ್ರ ಇರುತ್ತಾರೆ. ಬೆಳಗ್ಗೆ ಹಾಗೂ ಸಂಜೆ ಹೊತ್ತಿನ ಟ್ರಪ್‌ಗಳ ಬಸ್‌ಗಳಲ್ಲಿ 20ರಿಂದ 25ರಷ್ಟು ಮಂದಿ ಪ್ರಯಾಣಿಕರು ಇರುತ್ತಾರೆ. ನಗರದ ಜನತೆ ಹೆಚ್ಚಾಗಿ ಬಳಸುವುದು ಖಾಸಗಿ ಬಸ್‌ಗಳನ್ನು ಜನ ಎಲ್ಲ ಚಟುವಟಿಕೆಗಳಿಗೂ ಖಾಸಗಿ ಬಸ್‌ಗಳನ್ನೇ ಅವಲಂಬಿಸಿಕೊಂಡಿದ್ದಾರೆ.
ಉಡುಪಿ ಘಟಕದಿಂದ ಕಾರ್ಕಳಕ್ಕೆ 2, ಹೆಬ್ರಿ 1, ಹೆಜಮಾಡಿ 1, ಕುಂದಾಪುರ 1, ಮಣಿಪಾಲದಿಂದ ಕುಂದಾಪುರಕ್ಕೆ 3 ಸರಕಾರಿ ಬಸ್ಸುಗಳು ಮಾತ್ರ ಈಗ ಸಂಚರಿಸುತ್ತಿವೆ. ಕುಂದಾಪುರ ಘಟಕದಿಂದಲೂ ಐದಾರು ಸರಕಾರಿ ಬಸ್ಸುಗಳು ಓಡಾಟ ನಡೆಸುತ್ತಿವೆ. ಈ ಬಸ್‌ಗಳಲ್ಲಿ ಬೆಳಗ್ಗೆ ಮತ್ತು ಸಂಜೆ ಈ ಎರಡು ಹೊತ್ತು ಹೊರತುಪಡಿಸಿ ಇತರೆ ಅವಧಿಯಲ್ಲಿ ಪ್ರಯಾಣಿಕರ ಕೊರತೆ ಇರುತ್ತದೆ. ಜಿಲ್ಲೆಯಿಂದ ಅಂತರ್ ಜಿಲ್ಲೆಗಳಿಗೆ ಸಾರಿಗೆ ಸಂಸ್ಥೆ ಬಸ್‌ಗಳು ಸಂಚರಿಸುತ್ತಿವೆ. ಇತರೆ ಖಾಸಗಿ ಬಸ್‌ಗಳು ಇನ್ನು ರಸ್ತೆಗಿಳಿದಿಲ್ಲ. ಪೂರ್ಣ ಪ್ರಮಾಣದಲ್ಲಿ ಖಾಸಗಿ ಬಸ್‌ಗಳು ಓಡಾಟ ಆರಂಭಿಸದೆ ಇರುವುದು ಹಾಗೂ ಇನ್ನು ಅನೇಕ ಕಾರಣಗಳಿಂದ ನಗರದ ಜನಜೀವನ ಹಿಂದಿನ ಹಿಂದಿನ ಸ್ಥಿತಿಗೆ ಮರಳಿಲ್ಲ.ಸ್ವಂತ ವಾಹನಗಳಲ್ಲಿ ಓಡಾಡುವವರ ಸಂಖ್ಯೆ ಹೆಚ್ಚಾಗಿ ಕಂಡುಬರುತ್ತಿದೆ. ಖಾಸಗಿ ಬಸ್ ನಿಲ್ದಾಣಗಳಲ್ಲಿ ಕೂಡ ಜನರ ಪ್ರಮಾಣ ವಿರಳವಾಗಿ ಕಂಡುಬರುತ್ತಿದೆ.