Advertisement
ಈ ವರ್ಷ ಜನವರಿಯಿಂದ ಜೂನ್ ಅಂತ್ಯದವರೆಗೂ ಅರಸೀಕೆರೆ ಮತ್ತು ಚನ್ನರಾಯಪಟ್ಟಣ ತಾಲೂಕಿನಲ್ಲಿ ಮಾತ್ರ ವಾಡಿಕೆಗಿಂತ ಶೇ.13 ಹೆಚ್ಚು ಮಳೆಯಾಗಿದ್ದು, ಇನ್ನುಳಿದ 6 ತಾಲೂಕುಗಳಲ್ಲಿ ಕುಂಟಿತವಾಗಿದೆ. ಒಟ್ಟಾರೆ ಜಿಲ್ಲೆಯಲ್ಲಿ ಈ ವರ್ಷ ಜೂನ್ ಅಂತ್ಯದವರೆಗೂ ಶೇ.28 ಮಳೆಯ ಕೊರತೆಯಾಗಿದೆ. ಮಲೆನಾಡು ಭಾಗಗಳಾದ ಸಕಲೇಶಪುರದಲ್ಲಿ ಶೇ.57, ಆಲೂರು ತಾಲೂಕಿನಲ್ಲಿ ಶೇ.35 ಮಳೆ ಕೊರತೆಯಾಗಿದೆ.
Related Articles
Advertisement
ಹಾಸನ: ಈ ವರ್ಷ ಮುಂಗಾರು ಮಳೆಯ ಕೊರತೆಯ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಕೇವಲ 2000 ಹೆಕ್ಟೇರ್‌ನಲ್ಲಿ ಮಾತ್ರ ಆಲೂಗಡ್ಡೆ ಬಿತ್ತನೆಯಾಗಿದೆ.
ಎರಡು ದಶಕಗಳ ಹಿಂದೆ ಜಿಲ್ಲೆಯಲ್ಲಿ 1.50 ಲಕ್ಷ ಎಕರೆಯಲ್ಲಿ ಆಲೂಗಡ್ಡೆ ಬೆಳೆಯಲಾಗುತ್ತಿತ್ತು. ಆದರೆ ಮಳೆ ಹಾಗೂ ರೋಗ ಭಾದೆಯ ಪರಿಣಾಮ ಆಲೂಗಡ್ಡೆ ಬಿತ್ತನೆ ಪ್ರಮಾಣ ಕುಸಿಯುತ್ತಾ ಬಂದಿದ್ದು ಕಳೆದ 7 ಸಾವಿರ ಹೆಕ್ಟೇರ್ ನಲ್ಲಿ ಆಲೂಗಡ್ಡೆ ಬಿತ್ತನೆಯಾಗಿತ್ತು. ಈ ವರ್ಷ 7 ಸಾವಿರ ಹೆಕ್ಟೇರ್‌ನಲ್ಲಿ ಆಲೂಗಡ್ಡೆ ಬಿತ್ತನೆಯ ಗುರಿಯನ್ನು ತೋಟಗಾರಿಕೆ ಇಲಾಖೆ ಹೊಂದಿತ್ತು ಆದರೆ ಈ ವರ್ಷ ಬಿತ್ತನೆ ಪ್ರಮಾಣ 2 ಸಾವಿರ ಹೆಕ್ಟೇರ್‌ಗೆ ಕುಸಿದಿದೆ. ಬಿತ್ತನೆಯಾಗಿರುವ ಬೆಳೆಯೂ ಮಳೆ ಕೊರತೆಯಿಂದ ಶೇ. 50 ಕ್ಕಿಂತ ಹೆಚ್ಚು ಪ್ರಮಾಣದ ಬೆಳೆ ನಾಶವಾಗಿದೆ.
ಈ ವರ್ಷ ಜಿಲ್ಲೆಗೆ ಬಿತ್ತನೆ ಆಲೂಗಡ್ಡೆ ಪಂಜಾಬ್‌ನಿಂದ 4.5 ಲಕ್ಷ ಚೀಲಗಳು ಪೂರೈಕೆಯಾಗಿ ಹಾಸನದ ವಿವಿಧ ಶೀತಲಗೃಹಗಳಲ್ಲಿ ದಾಸ್ತಾನಾಗಿತ್ತು. ಆದರೆ ಹಾಸನ ಎಪಿಎಂಸಿಯಲ್ಲಿ ಈ ಬಾರಿ ಕೇವಲ 55 ಸಾವಿರ ಚೀಲಗಳು ಮಾತ್ರ ಮಾರಾಟವಾಗಿವೆ. ನೇರವಾಗಿ ಮಾರಾಟವಾಗಿರುವ ಆಲೂಗಡ್ಡೆಯೂ ಸೇರಿ ಒಟ್ಟು ಮಾರಾಟ ಒಂದು ಲಕ್ಷ ಚೀಲ ತಲಪಬಹುದು. ಆದರೆ ಇನ್ನುಳಿದ ಆಲೂಗಡ್ಡೆ ತರಕಾರಿಗಾಗಿ ಮಾರಾಟವಾಗುತ್ತಿದೆ.