Advertisement
ತಾಲೂಕಿನ ಎನ್.ವಡ್ಡಹಳ್ಳಿಯಲ್ಲಿ ಸರ್ಕಾರ ಕಳೆದ 14 ವರ್ಷಗಳ ಹಿಂದೆಯೇ ಶಾಲೆಗಳಲ್ಲಿ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡುವುದ ರೊಂದಿಗೆ ಸರ್ಕಾರದಿಂದ ಶಾಲಾ ಮಕ್ಕಳಿಗೆ ಪುಸ್ತಕ ಸಮವಸ್ತ್ರ ಸೇರಿದಂತೆ ಇತರೇ ಸೌಲಭ್ಯಗಳನ್ನು ಶಾಲೆಗಳಿಗೆ ಅತಿ ಶೀಘ್ರವಾಗಿ ತಲುಪಿಸುವ ಉದ್ದೇಶಕ್ಕಾಗಿ ಮುಳಬಾಗಿಲು ತಾಲೂಕಿನ ಎನ್. ವಡ್ಡಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ 2006ರಲ್ಲಿ ಸರ್ವ ಶಿಕ್ಷಣ ಅಭಿಯಾನ ಯೋಜನೆಯಡಿಯಲ್ಲಿ ಸಂಪನ್ಮೂಲ ಕೇಂದ್ರ ನಿರ್ಮಿಸಿದ್ದು, ಅಂದಿನ ಶಾಸಕ ಆಲಂಗೂರು ಶ್ರೀನಿವಾಸ್ ಉದ್ಘಾಟನೆ ಸಹ ಮಾಡಿದ್ದರು.
Related Articles
Advertisement
ತರಬೇತಿ, ಚಟುವಟಿಕೆ ಇಲ್ಲ: ಉಳಿದಂತೆ ಅನಹಳ್ಳಿ, ಎಂ.ಹೊಸಹಳ್ಳಿ, ಸೀಗೇನಹಳ್ಳಿ, ಕಪ್ಪಲಮಡಗು, ಶ್ರೀರಂಗಪುರ, ಎನ್.ವಡ್ಡಹಳ್ಳಿ, ಪದ್ಮಘಟ್ಟ ಶಾಲೆಗಳು ಮಾತ್ರ ಪ್ರಸ್ತುತ ಎನ್.ವಡ್ಡಹಳ್ಳಿ ಸಂಪನ್ಮೂಲ ಕೇಂದ್ರಕ್ಕೆ ಉಳಿದು ಕಾರ್ಯವ್ಯಾಪ್ತಿ ಕಡಿಮೆಯಾಗಿದ್ದರೂ ಕಳೆದ10 ವರ್ಷಗಳಿಂದಲೂ ಸಿಆರ್‌ಪಿಗಳು ಮಾತ್ರ ಸದರಿ ಕೇಂದ್ರದಲ್ಲಿ ತರಬೇತಿ ಹಾಗೂ ಯಾವುದೇ ಕಾರ್ಯಚಟುವಟಿಕೆ ನಡೆಸುತ್ತಿಲ್ಲ.
ಪ್ರಾಥಮಿಕ ಶಾಲೆಯಲ್ಲಿ ಕಾರ್ಯಕ್ರಮಗಳನ್ನು ಮಾಡುತ್ತಾ ಸಂಪನ್ಮೂಲ ಕೇಂದ್ರದ ಕಡೆ ಯಾರು ಸುಳಿಯದೇ ಸದಾ ಬೀಗ ಹಾಕಿರುವುದರಿಂದ ಲಕ್ಷಾಂತರ ವೆಚ್ಚದಲ್ಲಿ ನಿರ್ಮಿಸಿರುವ ಕಟ್ಟಡ ಸೋರಿಕೆಯಾಗಿ ಗೋಡೆಗಳು ಕಪ್ಪು ಬಣ್ಣಕ್ಕೆಬದಲಾಗಿದೆ. ಅಲ್ಲದೇ ಬಾಗಿಲು ತೆಗೆಯಲು ಹೋಗಲು ಆಗದಷ್ಟರ ಮಟ್ಟಿಗೆ ಮುಳ್ಳುಗಿಡಗಳು ಬಾಗಿಲಿನಲ್ಲಿಯೇ ಬೆಳೆದಿದ್ದು, ಕಟ್ಟಡವು ಹಾಳು ಕೊಂಪೆಯಂತಾಗಿದೆ.
ಕೇಂದ್ರದ ಬಾಗಿಲು ತೆರೆದಿಲ್ಲ : ಎನ್.ವಡ್ಡಹಳ್ಳಿ ಗ್ರಾಮದಲ್ಲಿ ಶಿಕ್ಷಣ ಇಲಾಖೆ ಸಂಪನ್ಮೂಲ ಕೇಂದ್ರ ನಿರ್ಮಿಸಿದರೂ ಅಧಿಕಾರಿಗಳು ಬಾಗಿಲು ತೆರೆದಿಲ್ಲ ಎಂದು ಹೆಸರು ಹೇಳಲು ಇಚ್ಚಿಸದ ಶಿಕ್ಷಕರೊಬ್ಬರು ತಿಳಿಸಿದರು. ಸದರಿ ಸಂಪನ್ಮೂಲ ಕೇಂದ್ರದಲ್ಲಿ ದಶಕಗಳಿಂದಯಾವುದೇಕಾರ್ಯಚಟುವಟಿಕೆ ಗಳನ್ನು ಶಿಕ್ಷಣ ಇಲಾಖೆಕೈಗೊಳ್ಳದೇ ಸದಾ ಬೀಗ ಹಾಕಿರುವುದರಿಂದ ಗಿಡಗಂಟಿಗಳು ಬೆಳೆದು ಹಾಳುಕೊಂಪೆಯಾಗಿದೆ ಎಂದು ಗ್ರಾಮದ ಮುಖಂಡ ಚಂದ್ರಶೇಖರ್ ದೂರಿದರು.
ನಿರ್ವಹಣೆ ಆಗುತ್ತಿದ್ದರೆ ಗಿಡಗಂಟಿ, ಶಿಥಿಲಾವಸ್ಥೆ ಸಾಧ್ಯವೇ? :
ಸಿಆರ್‌ಪಿ ವಾಸಪ್ಪ ಮತ್ತು ಬಿಇಒ ಗಿರಿಜೇಶ್ವರಿದೇವಿ ಅವರು ಹೇಳುವ ಪ್ರಕಾರ ಸದರಿ ಕಟ್ಟಡ ನಿರ್ವಹಣೆ ಮಾಡುತ್ತಿರುವುದು ನಿಜವೇ ಆದರೆ ಕಟ್ಟಡದ ಮುಂಭಾಗದಲ್ಲಿ ಆಳುದ್ದದ ಮುಳ್ಳು ಗಿಡಗಳು ಹುಲ್ಲು, ಗಿಡಗಂಟಿಗಳು ಬೆಳೆಯಲು ಹೇಗೆ ಸಾಧ್ಯ? ಅಲ್ಲದೇ ಕಟ್ಟಡವು ಶಿಥಿಲಾವಸ್ತೆಗೆತಲುಪುತ್ತಿತ್ತೇ ಎಂಬುದನ್ನು ಇನ್ನಾದರೂ ಉಪ ನಿರ್ದೇಶಕರು ಇತ್ತ ಕಡೆ ಗಮನಹರಿಸಿ ಕಟ್ಟಡದ ನಿರ್ವಹಣೆಗೆ ಅಧಿಕಾರಿಗಳಿಗೆ ಸೂಚಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಮುಳಬಾಗಿಲು ತಾಲೂಕಿನ ಎನ್.ವಡ್ಡಹಳ್ಳಿ ಸಿಆರ್‌ಸಿ ಕೇಂದ್ರಕಟ್ಟಡದ ಬಗ್ಗೆ ತಮಗೆ ಯಾವುದೇ ಮಾಹಿತಿ ಇಲ್ಲ. ಸಿಆರ್‌ಪಿ ವಾಸಪ್ಪ ರಿಂದ ಮಾಹಿತಿ ಪಡೆದುಕೊಳ್ಳಲಾಗುವುದು. – ಗಿರಿಜೇಶ್ವರಿದೇವಿ, ಬಿಇಒ
ಶೀಘ್ರದಲ್ಲಿಯೇ ಸಿಆರ್‌ಪಿಗಳ ಸಭೆಕರೆದು ಸಂಪನ್ಮೂಲ ಕೇಂದ್ರಗಳ ನಿರ್ವಹಣೆ ಮಾಡಲುಕ್ರಮ ತೆಗೆದುಕೊಳ್ಳಲಾಗುವುದು. –ಕೃಷ್ಣಮೂರ್ತಿ, ಉಪ ನಿರ್ದೇಶಕರು
– ಎಂ.ನಾಗರಾಜಯ್ಯ