Advertisement
ನಗರಸಭೆ ವ್ಯಾಪ್ತಿಯಲ್ಲಿ ಒಟ್ಟು 7 ಇ- ಟಾಯ್ಲೆಟ್ ಗಳನ್ನು ಪರೀಕ್ಷಾರ್ಥವಾಗಿ ಹಾಕಲಾಗಿತ್ತು. ಇದನ್ನು ಎಲ್.ಕೆ, ಮೆಟಲ್‌ಶೀಟ್ಸ್ ಪ್ರೈ.ಲಿ. ಕಂ ಎಂಬ ಕಂಪನಿ ನಿರ್ಮಿಸಿತ್ತು. ಇದರ ನಿರ್ವಹಣೆ ಕೂಡ ಅವರೇ ಮಾಡಬೇಕಿತ್ತು. ಆದರೆ, ಇದರ ಸಂಪೂರ್ಣ ಜವಾಬ್ದಾರಿ ನಗರಸಭೆಯ ಆರೋಗ್ಯ ಶಾಖೆಯದ್ದಾಗಿದ್ದು, ನಗರಸಭೆಯ ಅಧಿಕಾರಿಗಳು ಇದ್ಯಾವುದೂ ಗೊತ್ತಿಲ್ಲ ಎನ್ನುವಂತೆ ನಿರುತ್ತರರಾಗಿದ್ದಾರೆ. ಟೆಂಡರ್ ಮೂಲಕ ನಿರ್ವಹಣೆ ಜವಾಬ್ದಾರಿ ಹೊತ್ತವ ನಷ್ಟದ ನೆಪ ಹೇಳಿ ಸರ್ಕಾರದ ಮಹತ್ತರವಾದ ಯೋಜನೆಯನ್ನು ಹಳ್ಳದ ಹಾದಿ ಹಿಡಿಸುತ್ತಿದ್ದರೂ, ಆಡಳಿತದ ಚುಕ್ಕಾಣಿ ಹಿಡಿದಿರುವವರು ಚಿತ್ತ ಹರಿಸದೇ ಇರುವುದು ಮಾತ್ರ ವಿಪರ್ಯಾಸದ ಸಂಗತಿ.
Related Articles
Advertisement
ಸಾರ್ವಜನಿಕರೇ ಸರ್ಕಾರದ ವಸ್ತುಗಳು ತಮ್ಮದೆಂಬ ಅರಿವಿಲ್ಲದೆ ಕಳುವು ಮಾಡಿಕೊಂಡು ಹೋಗುತ್ತಾರೆ. ಇದನ್ನು ಕಂಡರೂ ಕಾಣದಂತೆ ಕೆಲವರಿದ್ದಾರೆ. ನಾವು ಏನು ಮಾಡೋದು. ಅದನ್ನೇ ಕಾಯ್ಕೊಂಡು ಕೂರೋಕೆ ಸಾಧ್ಯವಿಲ್ಲ. ಆದರೆ, ಟೆಂಡರ್ ದಾರರಿಗೆ ಕರೆಸಿ ಎಚ್ಚರಿಕೆ ಕೊಟ್ಟು ನಿರ್ವಹಣೆ ಮಾಡುವಂತೆ ಹೇಳ್ತೇವೆ. ಸಾರ್ವಜನಿಕರೂ ಕೂಡ 5 ರೂ. ನಾಣ್ಯದ ಬದಲಿಗೆ ವಾಷರ್, ಕಬ್ಬಿಣದ ಬಿಲ್ಲೆಗಳನ್ನೂ ಬಳಸಿ, ನಷ್ಟಕ್ಕೆ ಕಾರಣವಾಗುತ್ತಿರುವುದು ಕೂಡ ಯೋಜನೆ ಹಿನ್ನೆಡೆಗೆ ಕಾರಣವಾಗಿದೆ. – ಸುಬ್ರಹ್ಮಣ್ಯ, ಆರೋಗ್ಯ ಶಾಖೆ ಸಹಾಯಕ ಕಾರ್ಯಪಾಲಕ ಅಭಿಯಂತರರು, ನಗರಸಭೆ
ಸರ್ಕಾರದ ಹಣದಲ್ಲಿ ಯಾವುದೇ ಯೋಜನೆ ರೂಪಿಸಿದ್ದರೂ, ಅದರ ಉಪಯೋಗದ ಸಾಧಕ ಬಾಧಕ ಅಧಿಕಾರಿಗಳು ನಿರ್ವಹಿಸಬೇಕು. ಆದರೆ, ಟೆಂಡರ್ ಪಡೆದವರು ಕೈ ಬಿಟ್ಟಿರುವುದನ್ನ ಅಧಿಕಾರಿಗಳು ಇನ್ನಾದರೂ ಕ್ರಮವಹಿಸಿ, ಅವರಿಗೆ ಎಚ್ಚರಿಕೆ ನೀಡಿ ನಿರ್ವಹಣೆ ಮಾಡಿಸಬೇಕು. ಇಲ್ಲವಾದರೆ, ಇ- ಟಾಯ್ಲೆಟ್‌ಗಳನ್ನು ಶಾಲಾ ಆವರಣ, ಡೀಸಿ ಕಚೇರಿ, ತಾಲೂಕು ಕಚೇರಿಗಳಂತಹ ಸಾರ್ವಜನಿಕ ದಟ್ಟಣೆ ಇರುವ ಕಡೆ ಸ್ಥಾಪಿಸಬೇಕು. ಆ ಮೂಲಕ ಅವುಗಳ ಸದ್ಬಳಕೆ ಮಾಡಿಕೊಳ್ಳಬೇಕು. – ಗೂಳಿಗೌಡ (ಕುಮಾರ್), ಯುವ ಘಟಕದ ಮುಖಂಡ, ಜೆಡಿಎಸ್, ರಾಮನಗರ
ಕಳೆದ ಮೂರ್‍ನಾಲ್ಕು ವರ್ಷದಿಂದ ಪ್ರಯೋಜನಕ್ಕೆ ಬಾರದ ದಿವ್ಯಾಂಗರ ಶೌಚಾಲಯಗಳನ್ನು ಅದರ ಕಾರ್ಯಸ್ಥಿತಿ ಪರಿಷ್ಕರಿಸಿ, ಉಚಿತವಾಗಿ ನೀಡುವ ಮೂಲಕ ದಿವ್ಯಾಂಗರಿಗೆ ಸಹಕರಿಸಬಹುದಿತ್ತು. ಇ- ಟಾಯ್ಲೆಟ್‌ಗಳನ್ನು ಸಾರ್ವಜನಿಕ ದಟ್ಟಣೆ ಇರುವ ರೇಷ್ಮೆ ಮಾರುಕಟ್ಟೆ ಅಥವಾ ಎಪಿಎಂಸಿ ಬಳಿ ನಿರ್ಮಿಸಬೇಕಿತ್ತು. ಆದರೆ, ಅಧಿಕಾರಿಗಳು ಇದಕ್ಕೂ ನಮಗೂ ಸಂಬಂಧವೇ ಇಲ್ಲ ಎನ್ನುವಂತೆ ಜಿಡ್ಡುಗಟ್ಟಿ ಕುಳಿತಿದ್ದಾರೆ. – ಮೋಹನ್ ಗೌಡ.ಸಿ, ಜಿಲ್ಲಾಧ್ಯಕ್ಷ, ಮಾನವ ಹಕ್ಕು ಆಯೋಗ, ರಾಮನಗರ
-ಪ್ರಕಾಶ್.ಎಂ.ಎಚ್.