Advertisement
ಇಲ್ಲಿನ ಪ್ರಥಮ ದರ್ಜೆ ಕಾಲೇಜು ರಾಜ್ಯದಲ್ಲೇ ಅತಿ ಹೆಚ್ಚು ವಿದ್ಯಾರ್ಥಿಗಳ ದಾಖಲಾತಿ ಹೊಂದಿದ್ದು, ಸರಿಸುಮಾರು 3 ಸಾವಿರ ವಿದ್ಯಾರ್ಥಿಗಳನ್ನು ಹೊಂದಿದೆ. ಇಲ್ಲಿ ಕೇವಲ 21 ಜನ ಕಾಯಂ ಉಪನ್ಯಾಸಕರಿದ್ದಾರೆ. ಸುಮಾರು 110 ಜನ ಅತಿಥಿ ಉಪನ್ಯಾಸಕರಿದ್ದು, ಅವರ ಸೇವೆ ಕಾಯಂಗೊಳಿಸಲು ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇದರಿಂದಾಗಿ ಸೇವೆಗೆ ಹಾಜರಾಗುತ್ತಿಲ್ಲ. ಹೀಗಾಗಿ ತೊಂದರೆಯಾಗಿದೆ ಎಂದು ಪ್ರತಿಭಟನಾನಿರತ ವಿದ್ಯಾರ್ಥಿಗಳು ಅಳಲು ತೋಡಿಕೊಂಡರು.
Related Articles
Advertisement
ಫೆ. 10ಕ್ಕೆ ಪ್ರಥಮ ಸೆಮ್ ಪರೀಕ್ಷೆ ಆರಂಭವಾಗಲಿದ್ದು, ವೇಳಾ ಪಟ್ಟಿ ಬಂದಿದೆ. ಇಲ್ಲಿವರೆಗೂ ಒಂದು ಪಾಠ ಮುಗಿಯದೇ ಹೇಗೆ ಪರೀಕ್ಷೆ ಎದುರಿಸಬೇಕು. ಶೈಕ್ಷಣಿಕ ಉನ್ನತಿಗಾಗಿ. ಕಟ್ಟಡ ಸೌಲಭ್ಯ ಸೇರಿದಂತೆ ಇತರೆ ಸೌಲಭ್ಯಕ್ಕಾಗಿ ಲಕ್ಷಾಂತರ ರೂ. ಖರ್ಚು ಮಾಡುವ ಸರ್ಕಾರ ಬೋಧಕರನ್ನು ನೇಮಿಸುವಲ್ಲಿ ನಿರ್ಲಕ್ಷ್ಯ ವಹಿಸಿದ್ದು ಸರಿಯಲ್ಲ. -ಶರಣಮ್ಮ, ವಿದ್ಯಾರ್ಥಿನಿ