Advertisement

ಉಪನ್ಯಾಸಕರ ಕೊರತೆ: ಪ್ರತಿಭಟನೆ

05:05 PM Oct 18, 2019 | Team Udayavani |

ತುಮಕೂರು: ನಗರದಲ್ಲಿರುವ ಸರ್ಕಾರಿ ಪಿಯು ಕಾಲೇಜಿನಲ್ಲಿ ಉಪನ್ಯಾಸಕರ ಕೊರತೆಯಿದ್ದು, ಉಪನ್ಯಾಸಕರ ನೇಮಕ ಮಾಡಬೇಕು. ಅಗತ್ಯ ಮೂಲಭೂತ ಸೌಲಭ್ಯ ಕಲ್ಪಿಸುವುದೂ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಪ್ರತಿಭಟನಾ ಧರಣಿ ನಡೆಸಿದರು.

Advertisement

ಸರ್ಕಾರಿ ಪಿಯು ವಿದ್ಯಾರ್ಥಿಗಳಿಗೆ ಮೂಲಭೂತ ಸೌಲಭ್ಯಗಳ ಕೊರತೆ ಯಿಂದ ಶಿಕ್ಷಣ ಪಡೆಯಲು ತೊಂದರೆಯಾಗುತ್ತಿದೆ, ವಾಣಿಜ್ಯ ವಿಭಾಗದಲ್ಲಿ 800ಕ್ಕೂ ಅಧಿಕ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಆದರೆ, ವಾಣಿಜ್ಯ ವಿಭಾಗದ ಮುಖ್ಯ ವಿಷಯಗಳಾದ ಲೆಕ್ಕಶಾಸ್ತ್ರ ಹಾಗೂ ವ್ಯವಹಾರ ಅಧ್ಯಯನ ಗಳಲ್ಲಿ ಉಪನ್ಯಾಸಕರಿಲ್ಲದೆ ವಿದ್ಯಾರ್ಥಿ ಗಳಿಗೆ ವಿದ್ಯಾಭ್ಯಾಸಕ್ಕೆ ತೊಂದರೆಯಾಗಿದೆ ಆದರೂ ಈ ವರೆಗೂ ಉಪನ್ಯಾಸಕರ ನೇಮಕ ಆಗಿಲ್ಲ ಎಂದು ವಿದ್ಯಾರ್ಥಿಗಳು ಆರೋಪಿಸಿದರು.

ಈ ವೇಳೆ ಮಾತನಾಡಿದ ಎಬಿವಿಪಿ ಜಿಲ್ಲಾ ಸಂಚಾಲಕ ಅಪ್ಪುಪಾಟೀಲ್‌ ಕಾಲೇಜು ಪ್ರಾರಂಭವಾಗಿ 5 ತಿಂಗಳಾದರೂ ಮುಖ್ಯ ವಿಷಯಗಳ ಪಠ್ಯ ಪ್ರವಚನ ಸರಿಯಾಗಿ ನಡೆದಿಲ್ಲ ಇದರಿಂದ ಬಡ ಪ್ರತಿಭಾ ವಂತ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆ ತೊಂದರೆಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇದರ ಜತೆಗೆ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ ವೇಳಾಪಟ್ಟಿ ಪ್ರಕಟ ವಾಗಿದ್ದು, ಇನ್ನೂ ಕೇವಲ ಬರೇ 3 ತಿಂಗಳು ಕಾಲವಕಾಶ ಉಳಿದಿದೆ. ಆದ್ದ ರಿಂದ ಅತೀ ಜರೂರಾಗಿ ಖಾಯಂ ಉಪ ನ್ಯಾಸಕರನ್ನು ನೇಮಿಸಿ ಎಲ್ಲಾ ತರಗತಿಗಳಿಗೂ ಪಠ್ಯಕ್ರಮಗಳನ್ನು ಬೋಧಿಸಲು ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿ ಕೊಡಬೇಕು ಎಂದು ಒತ್ತಾಯಿಸಿದರು.

ವಿದ್ಯಾರ್ಥಿ ಮುಖಂಡರಾದ ನರಸಿಂಹಮೂರ್ತಿ, ಚಕ್ರವರ್ತಿ, ಗಿರೀಶ್‌ ಆಚಾರ್ಯ, ಪ್ರದೀಪ್‌, ಭರತ್‌, ಕುಶಾಲ್‌, ದರ್ಶನ್‌, ಗಿರೀಶ್‌, ಮಾರುತಿ, ದೀಕ್ಷಿತ್‌, ಅರ್ಪಿತ್‌, ಮಮತ, ಹರ್ಷಿತಾ, ಅಶ್ವಿ‌ನಿ ಹಾಗೂ ನೂರಾರು ವಿದ್ಯಾರ್ಥಿ ಗಳು ಭಾಗವಹಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next